Advertisement

ಗಡಿಕೇಶ್ವರ ಗ್ರಾಮದಲ್ಲಿ 6 ವರ್ಷಗಳಿಂದ ಕಂಪಿಸುತ್ತಿದೆ ಭೂಮಿ: ಗ್ರಾಮಸ್ಥರಲ್ಲಿ ಹೆಚ್ಚಾದ‌ ಆತಂಕ

03:34 PM Oct 09, 2021 | Team Udayavani |

ಕಲಬುರಗಿ: ಜಿಲ್ಲೆಯ ಚಿಂಚೋಳಿ‌ ತಾಲೂಕಿನ ಗಡಿಕೇಶ್ವರ ಗ್ರಾಮದಲ್ಲಿ ಕಳೆದ 6 ವರ್ಷಗಳಿಂದ ಭೂಮಿಯಿಂದ ಭಾರಿ ಶಬ್ದ ಉಂಟಾಗುತ್ತಿದೆ. ಭೂಮಿ ಕಂಪಿಸುತ್ತಿರುವುದರಿಂದ ಗ್ರಾಮಸ್ಥರು ‌ಭಯಗೊಂಡ ಮನೆಯಿಂದ ಹೊರ‌ ಓಡಿ ಬಂದಿದ್ದಾರೆ.

Advertisement

ಹಲಚೆರಾ ತೆಗಲತಿಪ್ಪಿ,ಕುಡಹಳ್ಳಿ,ಕೊರವಿ,ಹೊಸಹಳ್ಳಿ ಗ್ರಾಮದಲ್ಲಿ ಶನಿವಾರ ಮುಂಜಾನೆ 7.34ಕ್ಕೆ ಮತ್ತು 7.37ಕ್ಕೆ  ಮಧ್ಯಾಹ್ನ 1.56ಕ್ಕೆ  ಭೂಮಿ ‌ನಡುಗಿದೆ. ಹೊರಗಡೆ ಮಳೆ ಗುಡುಗು ಸಿಡಿಲು ‌ಮಿಂಚಿನ ಭಯ ಮನೆಯಲ್ಲಿ ‌ಇದ್ದರೆ ಮನೆ ಬೀಳುವ ‌ಭಯ‌ ಗ್ರಾಮಸ್ಥರಲ್ಲಿ‌ ಆತಂಕವನ್ನು ಮಾಡಿದೆ. ಕಳೆದ ‌6 ವರ್ಷಗಳಿಂದ ಭೂಮಿ ಕಂಪಿಸುತ್ತದೆ. ಆದರೆ ಇದರ ಬಗ್ಗೆ ವರದಿ ‌ನೀಡುತ್ತಿಲ್ಲ. ನಮಗೆ ‌ಜೀವ ರಕ್ಷಣೆ ‌ಇಲ್ಲದಂತಾಗಿದೆ ಎಂದು ಗ್ರಾಮಸ್ಥರು ‌ಹೇಳುತ್ತಾರೆ.

ಸರ್ಕಾರದ ಅಧಿಕಾರಿಗಳ,ಜನಪ್ರತಿನಿಧಿಗಳ ನಿರ್ಲಕ್ಷ್ಯ ಖಂಡಿಸಿ ಅ.11ರಂದು ರಸ್ತೆ ತಡೆ ನಡೆಸಿ ಸರಕಾರಕ್ಕೆ ಮನವಿಯನ್ನು ಸಲ್ಲಿಸಲು ನಿರ್ಧರಿಸಿದ್ದಾರೆ.

-ಶಾಮರಾವ್ ಚಿಂಚೋಳಿ‌

Advertisement

Udayavani is now on Telegram. Click here to join our channel and stay updated with the latest news.

Next