ಪಶ್ಚಿಮ ಉತ್ತರಪ್ರದೇಶದ ಶಾಮಿಲಿ ಜಿಲ್ಲೆಯಲ್ಲಿ ಮತ್ತು ಇನ್ನೊಂದು ದೂರದ ತಝಕಿಸ್ಥಾನದಲ್ಲಿ 4.0 ಮ್ಯಾಗ್ನಿಟ್ಯೂಡ್ ತೀವ್ರತೆಯ ಲಘು ಭೂಕಂಪ ಸಂಭವಿದೆ. ಇದರಿಂದಾಗಿ ರಾಷ್ಟ್ರ ರಾಜಧಾನಿ ದೆಹಲಿ ಸಹಿತ ಉತ್ತರ ಭಾರತದ ಹಲವೆಡೆಗಳಲ್ಲಿ ಕೆಲ ಸೆಕೆಂಡುಗಳವರೆಗೆ ಭೂಮಿ ಕಂಪಿಸಿದ ಅನುಭವವಾಗಿದೆ.
ಬುಧವಾರ ಬೆಳಿಗ್ಗೆ 7.05ರ ಸುಮಾರಿಗೆ ಮಧ್ಯ ಏಷ್ಯಾದ ತಝಕಿಸ್ಥಾನದಲ್ಲಿ 4.6 ಮ್ಯಾಗ್ನಿಟ್ಯೂಡ್ ತೀವ್ರತೆಯ ಭೂಕಂಪ ಉಂಟಾಗಿದೆ ಮತ್ತು ತಕ್ಷಣವೇ ಇತ್ತ ಉತ್ತರಪ್ರದೇಶದ ಶಾಮಿಲಿ ಜಿಲ್ಲೆಯ ಖಾಂಡ್ಲಾ ಪ್ರದೇಶದಲ್ಲೂ ಭೂಕಂಪ ಉಂಟಾಗಿದೆ ಎಂಬ ಮಾಹಿತಿಯನ್ನು ಅಮೆರಿಕಾದ ಜಿಯೋಲಾಜಿಕಲ್ ಸರ್ವೇ ಸಂಸ್ಥೆಯು ಮಾಹಿತಿ ನೀಡಿದೆ. ಖಾಂಡ್ಲ ಪ್ರದೇಶವು ದೆಹಲಿಯಿಂದ 90 ಕಿಲೋವೀಟರ್ ದೂರದಲ್ಲಿದೆ. ಇಲ್ಲಿ ಉಂಟಾದ ಭೂಕಂಪದ ವಿಸ್ತಾರ 10 ಕಿಲೋವೀಟರ್ ನಷ್ಟಾಗಿತ್ತು ಎಂದು ತಿಳಿದುಬಂದಿದೆ.
ಈ ತಿಂಗಳ ಪ್ರಾರಂಭದಲ್ಲಿ ಅಫ್ಘಾನಿಸ್ಥಾನದ ಹಿಂದ್ ಖುಷ್ ಪ್ರಾಂತ್ಯದಲ್ಲಿ ಸಂಭವಿಸಿದ್ದ ಭೂಕಂಪದಿಂದಾಗಿ ಕಂಪನದ ಪ್ರಭಾವ ಸಾವಿರಾರು ಮೈಲುಗಳಷ್ಟು ದೂರದಲ್ಲಿರುವ ದೆಹಲಿಯಲ್ಲೂ ಉಂಟಾಗಿತ್ತು. ಭೂಮಿಯ ಆಳದಲ್ಲಿ ಈ ಕಂಪನಗಳು ಉಂಟಾಗುವುದರಿಂದ ಸಾಮಾನ್ಯವಾಗಿ ಈ ಕಂಪನದ ಅನುಭವ ಬಹುದೂರದವರೆಗೂ ಉಂಟಾಗುತ್ತದೆ ಎಂಬುದು ತಜ್ಞರು ಅಭಿಪ್ರಾಯವಾಗಿದೆ. ಇದೇ ಫೆಬ್ರವರಿ 12ರಂದು ಚೆನ್ನೈನಿಂದ ಪೂರ್ವಕ್ಕೆ 600 ಕಿಲೋಮೀಟರ್ ಗಳಷ್ಟು ದೂರದಲ್ಲಿ ಸಮುದ್ರದಾಳದಲ್ಲಿ ಭೂಕಂಪ ಉಂಟಾಗಿತ್ತು ; ಈ ಕಂಪನದ ಅನುಭವ ಚೆನ್ನೈನಲ್ಲಿ ಉಂಟಾಗಿದ್ದನ್ನು ಇಲ್ಲಿ ಸ್ಮರಿಸಬಹುದಾಗಿದೆ.
ದೆಹಲಿ ಸಹಿತ ಈ ಭಾಗದ ಹಲವಾರು ಕಡೆಗಳಲ್ಲಿ ಭೂಮಿ ಕಂಪಿಸಿದ ಅನುಭವ ಜನರಿಗಾಗುತ್ತಿದ್ದಂತೆ ಈ ವಿಚಾರ ಸಾಮಾಜಿಕ ಜಾಲತಾಣಗಳಲ್ಲಿ ಟ್ರೆಂಡಿಂಗ್ ಆಗಿದೆ.