Advertisement

12ರಂದು ಇಸ್ರೋ ಜಿಯೋ ಸಿಂಕ್ರನೈಜ್‌ ಉಪಗ್ರಹ ನಭಕ್ಕೆ

02:39 PM Aug 10, 2021 | Team Udayavani |

ಹೊಸದಿಲ್ಲಿ: ಪ್ರವಾಹ, ಚಂಡಮಾರುತದಂಥ ಪ್ರಾಕೃತಿಕ ವಿಕೋಪಗಳನ್ನು ಮೊದಲೇ ಪತ್ತೆ ಹಚ್ಚಿ, ತ್ವರಿತವಾಗಿ ಎಚ್ಚರಿಸುವಂಥ “ಜಿಯೋ ಸಿಂಕ್ರನೈಸ್‌’ ಮಾದರಿಯ ಉಪಗ್ರಹ ವೊಂದನ್ನು ಭಾರತೀಯ ಬಾಹ್ಯಾಕಾಶ ಸಂಸ್ಥೆ (ಇಸ್ರೋ) ಇದೇ 12ರಂದು ಬಾಹ್ಯಾಕಾಶಕ್ಕೆ ಕಳುಹಿಸಲಿದೆ.

Advertisement

ಅಂದು ಬೆಳಗ್ಗೆ ಇಸ್ರೋದ ಉಡ್ಡಯನ ಕೇಂದ್ರವಾದ ಶ್ರೀಹರಿಕೋಟಾದ ಸತೀಶ್‌ ಧವನ್‌ ಉಡಾವಣಾ ಕೇಂದ್ರದಿಂದ ಬೆಳಗಿನ ಜಾವ 5:30ರ ಸುಮಾರಿಗೆ ಈ ಉಪಗ್ರಹ, “ಇಸ್ರೋ ನಿರ್ಮಾಣದ ಜಿಯೋ ಸಿಂಕ್ರೊನಸ್‌ ಸ್ಯಾಟಿಲೈಟ್‌ ಲಾಂಚ್‌ ವೆಹಿಕಲ್‌’ (ಜಿಎಸ್‌ಎಲ್‌ವಿ) ಮೂಲಕ ಬಾಹ್ಯಾಕಾಶಕ್ಕೆ ಚಿಮ್ಮಲಿದೆ. ಈ ಉಪಗ್ರಹದ ಉಡಾವಣೆ ಕೊರೊನಾ ಕಾರಣದಿಂದಾಗಿ ಮುಂದೂಡಲ್ಪಟ್ಟಿತ್ತು.

ಉಪಗ್ರಹದಲ್ಲೇನಿದೆ? :

  • ಆರು ಬ್ಯಾಂಡ್‌ಗಳ, ಮಲ್ಟಿ-ಸ್ಪೆಕ್ಟರಲ್‌ನ ಇಮೇಜಿಂಗ್‌ ಸೆನ್ಸರ್‌; 42 ಮೀಟರ್‌ವರೆಗಿನ ರೆಸೊಲ್ಯೂಷನ್‌ ಇನ್‌ಫ್ರಾ-ರೆಡ್‌ ಸೆನ್ಸರ್‌
  • 158 ಬ್ಯಾಂಡ್‌ ಹೈಪರ್‌ ಸ್ಪೆಕ್ಟ್ರಾ ವಿಸಿಬಲ್‌ನಿಯರ್‌ ಇನ್ ಫ್ರಾ ರೆಡ್‌ 318 ಮೀಟರ್‌ ರೆಸೊಲ್ಯೂಶನ್‌; 256 ಬ್ಯಾಂಡ್ಸ್‌ ಹೈಪರ್‌ ಸ್ಪೆಕ್ಟ್ರಲ್‌ ಶಾರ್ಟ್‌ ವೇವ್‌ ಇನ್ ಫ್ರಾ ರೆಡ್‌ 191 ಮೀ. ರೆಸೆಲ್ಯೂಶನ್‌

ಉಪಯೋಗಗಳು:

  • ಪ್ರವಾಹ, ಚಂಡಮಾರುತಗಳ ಬಗ್ಗೆ ತಜ್ಞರಿಗೆ ಮುಂಗಡವಾಗಿ ಸೂಚನೆ.
  • ಪ್ರತೀ ದಿನ ನಾಲ್ಕರಿಂದ 5 ಬಾರಿ ಭಾರತದ ಸ್ಯಾಟಲೈಟ್‌ ಫೋಟೋಗಳ ಚಿತ್ರಣ. ತಜ್ಞರಿಗೆ ಮಾಹಿತಿ ರವಾನೆ.
Advertisement

Udayavani is now on Telegram. Click here to join our channel and stay updated with the latest news.

Next