Advertisement

ಭಾರತೀಯ ಪರಂಪರೆ; ಯಾವ ಬಟ್ಟೆಗಳಿಗೆ ಯಾವ ಕಿವಿಯೋಲೆ ಸೂಕ್ತ

04:13 PM Oct 15, 2020 | mahesh |

ಕಿವಿಯೋಲೆ ಹೆಣ್ಣು ಮಕ್ಕಳಿಗೆ ಬಲು ಪ್ರಿಯವಾದದ್ದು. ಹುಟ್ಟಿದ ಕೆಲವೇ ದಿನಗಳಲ್ಲಿ ಕಿವಿ ಚುಚ್ಚಿಸುವ ಸಂಪ್ರದಾಯ ಭಾರತೀಯ ಸಂಸ್ಕೃತಿಯಲ್ಲಿದೆ. ದೊಡ್ಡದಾಗಿ ಕಾಣುವಂತಹ ಆಭರಣವನ್ನು ಕಿವಿಗೆ ಧರಿಸುವಲ್ಲಿಂದ, ಸಣ್ಣದಾಗಿ ಸ್ಟಡ್‌ನ‌ಂತಹ ಓಲೆಗಳನ್ನು ಕಿವಿಗೆ ಧರಿಸುವಲ್ಲಿಯವರೆಗೆ ನಮ್ಮ ಸ್ಟೈಲ್‌ ಮುಂದುವರಿದಿದೆ. ಕೇವಲ ಒಂದೇ ಅಲ್ಲ ಎರಡು, ಮೂರು ಓಲೆಗಳನ್ನು ಕಿವಿಗೆ ಧರಿಸುವವರಿದ್ದಾರೆ. ಕೆಲವು ಕಡೆ ಅದು ಸಂಪ್ರದಾಯವಾದರೆ ಇನ್ನು ಕೆಲವು ಕಡೆ ಅದು ಸ್ಟೈಲ್‌. ಈಗೀಗ ಬಟ್ಟೆಗಳಿಗೆ ಹೊಂದಿಕೊಂಡು ಕಿವಿಯೋಲೆಯನ್ನು ಧರಿಸುವವರೇ ಅಧಿಕ. ಯಾವ ಬಟ್ಟೆಗಳಿಗೆ ಯಾವ ಕಿವಿಯೋಲೆ ಸೂಕ್ತ ಎಂಬುದರ ಮಾಹಿತಿ ಇಲ್ಲಿದೆ.

Advertisement

ಲಟ್ಕನ್ಸ್‌
ವಿಧ ವಿಧದ ಕಲ್ಲುಗಳಿಂದ ತಯಾರಿಸಲ್ಪಡುವ ಲಟ್ಕನ್‌ ಕಿವಿಯೋಲೆ ಭಾರತೀಯ ಶೈಲಿಯ ಉಡುಗೆಗಳಿಗೆ ಹೆಚ್ಚು ಹೊಂದಿಕೊಳ್ಳುತ್ತದೆ. ಸೀರೆ ಅಥವಾ ಗಾಗ್ರಾ ಚೋಲಿಗಳನ್ನು ಧರಿಸುವಾಗ ಲಟ್ಕನ್ಸ್‌ ಕಿವಿಯೋಲೆಗಳನ್ನು ಹಾಕಬಹುದು. ಗೌನ್‌ಗಳಿಗೂ ಈ ಕಿವಿಯೋಲೆ ಹೆಚ್ಚು ಅಂದವಾಗಿ ಕಾಣುತ್ತದೆ.

ಜುಮ್ಕಾ
ಭಾರತೀಯ ಪರಂಪರೆಯಲ್ಲಿ ಕಿವಿಯೋಲೆಗಳಲ್ಲಿ ಶ್ರೇಷ್ಠವೆಂದು ಪರಿಗಣಿಸಲ್ಪಡುತ್ತದೆ. ಇಂದು ಮಾರುಕಟ್ಟೆಯಲ್ಲಿ ಬೇರೆಬೇರೆ ವಿಧಗಳ ಜುಮ್ಕಾ ಲಭ್ಯವಿದೆ. ಗೋಲ್ಡನ್‌, ಸಿಲ್ವರ್‌, ಪರ್ಲ್ ಹೀಗೆ ಹಲವು ವಿಧಗಳ ಜುಮ್ಕಾ ಮಾರುಕಟ್ಟೆಯಲ್ಲಿ ಕಂಡು ಬರುತ್ತದೆ. ಸೀರೆಗೆ ಅಥವಾ ದಾವಣಿಯನ್ನು ಧರಿಸುವಾಗ ಜುಮ್ಕಾ ಹಾಕಬಹುದು. ಸಿಂಪಲ್‌ ಚೂಡಿದಾರ್‌ ಧರಿಸಿ ಯಾವುದಾದರೂ ಸಮಾರಂಭಗಳಿಗೆ ಹೋಗುವುದಾದರೆ ಕಿವಿಗೆ ಜುಮ್ಕಾ ಹಾಕಿ. ಇದು ನಿಮಗೆ ಗ್ರ್ಯಾಂಡ್‌ ಲುಕ್‌ ನೀಡುತ್ತದೆ.

ಚಾಂದ್‌ಬಲೀಸ್‌
ಗಾತ್ರದಲ್ಲಿ ಸ್ವಲ್ಪ ಹೆಚ್ಚೇ ಎನ್ನುವಷ್ಟು ದೊಡ್ಡದಿರುವ ಈ ಚಾಂದ್‌ ಬಲೀಸ್‌ ಕಿವಿಯೋಲೆಗಳು ಗಾಗ್ರಾ ಚೋಲಿಗಳಿಗೆ ಹೇಳಿ ಮಾಡಿಸಿದಂತಿದೆ. ಸೀರೆ ಅಥವಾ ಗಾಗ್ರಾ ಚೋಲಿಗಳು ಸಿಂಪಲ್‌ ಆಗಿದ್ದರೆ ಈ ಕಿವಿಯೋಲೆಗಳನ್ನು ಧರಿಸಿ ಗ್ರ್ಯಾಂಡ್‌ ಆಗಿ ಕಾಣಿಸಬಹುದು.

ಚಂಡೇಲಿಯರ್‌ ಇಯರ್‌ರಿಂಗ್ಸ್‌
ಭುಜದವರೆಗೆ ನಿಮ್ಮ ಕಿವಿಯೋಲೆಗಳು ಬರಬೇಕೆಂದು ಆಗ್ರಹವಿದ್ದವರಿಗೆ ಚಂಡೆಲಿಯರ್‌ ಇಯರ್‌ರಿಂಗ್ಸ್‌ ಹೆಚ್ಚು ಸೂಕ್ತ. ವೆಸ್ಟರ್ನ್ ಗೌನ್‌ಗಳ ಜತೆಗೆ ಈ ಕಿವಿಯೋಲೆ ಹೆಚ್ಚು ಅಂದವಾಗಿ ಕಾಣುತ್ತದೆ. ಹೀಗೆ ಬೇರೆ ಬೇರೆ ವಿಧದ ಕಿವಿಯೋಲೆಗಳನ್ನು ಬೇರೆ ಬೇರೆ ಉಡುಗೆಗಳ ಜತೆ ಮ್ಯಾಚ್‌ ಮಾಡಿ ಧರಿಸಿದರೆ ಅಂದ ಹೆಚ್ಚುತ್ತದೆ.

Advertisement

ಇಯರ್‌ ಸ್ಟಡ್‌
ಜೀನ್ಸ್‌ ಅಥವಾ ವೆಸ್ಟರ್ನ್ ಉಡುಪುಗಳ ಬಳಕೆ ಅಧಿಕವಾದ ಮೇಲೆ ಈ ಇಯರ್‌ಸ್ಟಡ್‌ ಕಿವಿಯೋಲೆಗಳ ಬಳಕೆಯೂ ಅಧಿಕವಾಯಿತು. ಜೀನ್ಸ್‌ ಉಡುಪುಗಳನ್ನು ಧರಿಸುವಾಗ ಗ್ರ್ಯಾಂಡ್‌ ಕಿವಿಯೋಲೆಗಳು ಅಷ್ಟು ಚೆನ್ನಾಗಿ ಕಾಣಿಸುವುದಿಲ್ಲ. ಇಂತಹ ಸಂದರ್ಭದಲ್ಲಿ ಸ್ಟಡ್‌ಗಳನ್ನು ಧರಿಸಬಹುದು. ಇದು ಬೇರೆ ಬೇರೆ ಬಣ್ಣಗಳಲ್ಲಿ ಲಭಿಸುತ್ತದೆ. ಹೆಚ್ಚಾಗಿ ಕಪ್ಪು ಬಣ್ಣದ ಸ್ಟಡ್‌ ಅಂದವಾಗಿ ಕಾಣುತ್ತದೆ.

 

Advertisement

Udayavani is now on Telegram. Click here to join our channel and stay updated with the latest news.

Next