Advertisement

ಸೋಂಕು ಬೇಗ ಪತ್ತೆ ಹಚ್ಚಿದರೆ ತಡೆಗೆ ಅನುಕೂಲ

05:09 AM Jul 09, 2020 | Lakshmi GovindaRaj |

ಚಾಮರಾಜನಗರ: ಜಿಲ್ಲೆಯಲ್ಲಿ ಕೋವಿಡ್‌ ಸೋಂಕು ಹರಡುವುದನ್ನು ತಪ್ಪಿಸಲು ಗಂಟಲು ದ್ರವ ಪರೀಕ್ಷೆಗಳನ್ನು ಹೆಚ್ಚು ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಡಾ. ಎಂ.ಆರ್‌. ರವಿ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ  ಅವರು, ಸೋಂಕನ್ನು ಬೇಗ ಪತ್ತೆ ಹಚ್ಚಿದರೆ ಹೆಚ್ಚು ಮಂದಿಗೆ ಹರಡುವುದನ್ನು ತಡೆಯಲು ಸಾಧ್ಯವಾಗುತ್ತದೆ.

Advertisement

ಈಗಾಗಲೇ ಸೋಂಕು ಕಾಣಿಸಿಕೊಂಡಿರುವ ವ್ಯಕ್ತಿಯ ವಾಸ ಸ್ಥಳವನ್ನು ಕಂಟೈನ್ಮೆಂಟ್‌ ವಲಯವೆಂದು ಪರಿಗಣಿಸಲಾಗುತ್ತಿದೆ.  ಅಂತಹ ವಲಯಗಳಲ್ಲಿ ಹರಡುವ ಸಾಧ್ಯತೆ ಇರುವುದರಿಂದ ಅಲ್ಲಿ ಹೆಚ್ಚು ಸ್ಕ್ವಾಬ್‌ ಸಂಗ್ರಹಿಸಲಾಗುತ್ತಿದೆ. ಇದರಿಂದ ಸೋಂಕು ನಿಯಂತ್ರಿಸಲು ಸಾಧ್ಯವಾಗಲಿದೆ ಎಂದು ಹೇಳಿದರು. 120 ಮಂದಿಗೆ ಜಿಲ್ಲೆಯಲ್ಲಿ ಸೋಂಕು  ಕಾಣಿಸಿಕೊಂಡಿತ್ತು.

ಈ ಪೈಕಿ 31 ಮಂದಿ  ಪೂರ್ಣ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ. ಇವರಲ್ಲಿ ಗುಂಡ್ಲುಪೇಟೆ ತಾಲೂಕಿನ 74, ಚಾ.ನಗರ ತಾಲೂಕಿನ 25, ಕೊಳ್ಳೇಗಾಲದ 14, ಹನೂರಿನ 4 ಹಾಗೂ ಯಳಂದೂರು ತಾಲೂಕಿನ 3 ಮಂದಿ  ಇದ್ದಾರೆ. ಸೋಂಕಿತರಲ್ಲಿ 31 ಮಂದಿ ಬೆಂಗಳೂರಿ ನಿಂದ ಮರಳಿದವರು. ಇವರಿಂದ 27 ಮಂದಿಗೆ ಸೋಂಕು ಹರಡಿತು.

ಇನ್ನು ತಮಿಳುನಾಡಿನ ಸಂಪರ್ಕ ಬೆಳೆಸಿ ಬಂದ 7 ಮಂದಿಯಿಂದ ಮತ್ತೆ 16 ಮಂದಿಗೆ ಸೋಂಕು ಹರಡಿತು. 8 ಮಂದಿ  ಮೈಸೂರಿ ನಿಂದ ಬಂದವರು. ಇವರಿಂದ ಮತ್ತೆ 8 ಮಂದಿಗೆ ಸೋಂಕು ಹರಡಿತು. ಇನ್ನುಳಿದ ಮೂವರಿಗೆ ಎಲ್ಲಿಂದ ಸೋಂಕು ಹರಡಿತು ಎಂಬ ಬಗ್ಗೆ ತಿಳಿದು ಬಂದಿಲ್ಲ ಎಂದರು. ಎಸ್ಪಿ ಆನಂದ್‌ಕುಮಾರ್‌, ಹೆಚ್ಚುವರಿ ಜಿಲ್ಲಾಧಿಕಾರಿ ಆನಂದ್‌,  ಡಿಎಚ್‌ಒ ಡಾ.ಎಂ.ಸಿ.ರವಿ ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next