ಜಮ್ಮು-ಕಾಶ್ಮೀರ: ಜಮ್ಮು-ಕಾಶ್ಮೀರ ಹಾಗೂ ಹರ್ಯಾಣ ವಿಧಾನಸಭಾ ಚುನಾವಣೆಯ ಫಲಿತಾಂಶದ ಮತ ಎಣಿಕೆ ಕಾರ್ಯ ಮಂಗಳವಾರ (ಅ.08) ಬೆಳಗ್ಗೆ 8 ಗಂಟೆಗೆ ಆರಂಭಗೊಂಡಿದೆ. ಜಮ್ಮು-ಕಾಶ್ಮೀರದ ಎಲ್ಲಾ 20 ಮತಎಣಿಕೆ ಕೇಂದ್ರಕ್ಕೂ 3ಹಂತದ ಬಿಗಿ ಪೊಲೀಸ್ ಭದ್ರತೆ ಏರ್ಪಡಿಸಲಾಗಿದೆ.
ಆರಂಭಿಕ ಮಾಹಿತಿ ಪ್ರಕಾರ ಹರ್ಯಾಣ ಮತ್ತು ಜಮ್ಮು ಕಾಶ್ಮೀರದಲ್ಲಿ ಕಾಂಗ್ರೆಸ್ ಬಿಜೆಪಿ ನಡುವೆ ತೀವ್ರ ಪೈಪೋಟಿ ಕಂಡುಬಂದಿದೆ.
ಹರ್ಯಾಣದಲ್ಲಿ ಕಾಂಗ್ರೆಸ್ 26 ಸ್ಥಾನಗಳಿಂದ ಮುನ್ನಡೆ ಕಾಯ್ದುಕೊಂಡರೆ ಬಿಜೆಪಿ 20 ಸ್ಥಾನಗಳಿಂದ ಪೈಪೋಟಿ ನೀಡುತ್ತಿದೆ, ಅದೇ ರೀತಿ ಜಮ್ಮು ಕಾಶ್ಮೀರದಲ್ಲಿ ಬಿಜೆಪಿ 16 ಸ್ಥಾನಗಳಿಂದ ಪಡೆದುಕೊಂಡರೆ ಕಾಂಗ್ರೆಸ್ 18 ಸ್ಥಾನಗಳಿಂದ ಪೈಪೋಟಿ ನೀಡುತ್ತಿದೆ.
ಜಮ್ಮು-ಕಾಶ್ಮೀರದ 90 ವಿಧಾನಸಭಾ ಕ್ಷೇತ್ರಗಳ ಮತ ಎಣಿಕೆ ಕಾರ್ಯ ಶ್ರೀನಗರದ ಷೇರ್ ಐ ಕಾಶ್ಮೀರ್ ಇಂಟರ್ ನ್ಯಾಶನಲ್ ಕಾನ್ಫರೆನ್ಸ್ ಸೆಂಟರ್ ( SKICC) ನಲ್ಲಿ ನಡೆಯುತ್ತಿದೆ ಮತ ಎಣಿಕೆ ಕೇಂದ್ರದ ಸುತ್ತ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿದೆ. ವಿಶೇಷವೆಂದರೆ ಆರ್ಟಿಕಲ್ 370 ರದ್ದುಗೊಳಿಸಿದ ನಂತರ ಜಮ್ಮು-ಕಾಶ್ಮೀರದಲ್ಲಿ ಮೊದಲ ಬಾರಿಗೆ ಚುನಾವಣೆ ನಡೆಯುತ್ತಿದೆ.
ಮೊದಲಿಗೆ ಅಂಚೆ ಮತಗಣ ಎಣಿಕೆ ಪ್ರಕ್ರಿಯೆ ನಡೆಯುತ್ತಿದ್ದು ಇದಾದ ಬಳಿಕ ಇವಿಎಂ ಮತಎಣಿಕೆ ಕಾರ್ಯ ನಡೆಯಲಿದೆ, ಒಟ್ಟಾರೆ ಮಧ್ಯಾಹ್ನದೊಳಗೆ ಸ್ಪಷ್ಟ ಚಿತ್ರಣ ಲಭ್ಯವಾಗುವ ಸಾಧ್ಯತೆ ಇದೆ ಎನ್ನಲಾಗಿದೆ.