Advertisement
430 ದಶಲಕ್ಷ ಮಂದಿಗೆ ಕಿವಿ ಕೇಳಿಸುತ್ತಿಲ್ಲವಿಶ್ವ ಆರೋಗ್ಯ ಸಂಸ್ಥೆಯ ಸಮೀಕ್ಷೆ ಪ್ರಕಾರ ಜಗತ್ತಿನ 430 ದಶಲಕ್ಷ ಮಂದಿಗೆ ಕಿವಿ ಕೇಳಿಸುತ್ತಿಲ್ಲ. ಇದಕ್ಕೆ ಪ್ರಮುಖ ಕಾರಣವೇ ಅವರು ಸಂಗೀತ ಕೇಳಲು ಬಳಕೆ ಮಾಡುತ್ತಿರುವ ಹೆಡ್‌ಫೋನ್ ಅಥವಾ ಇಯರ್‌ಬಡ್ಸ್‌ನ ಸಮಸ್ಯೆ. ಯುವಜನತೆ ಸ್ಮಾರ್ಟ್‌ಫೋನ್‌ಗಳಿಗೆ ಈ ಹೆಡ್‌ಫೋನ್ ಅಥವಾ ಇಯರ್‌ಫೋನ್‌ಗಳನ್ನು ಸಂಪರ್ಕಿಸಿ, ಕಿವಿಗೆ ಹಾಕಿಕೊಂಡು ಕೇಳುತ್ತಿದ್ದಾರೆ. ಅಲ್ಲದೆ ಸಂಗೀತ ಕಾರ್ಯಕ್ರಮಗಳನ್ನು ಕೇಳುವಾಗಲೂ ಹೆಚ್ಚಿನ ಶಬ್ದ ಬರುತ್ತಿರುತ್ತದೆ. ಇದರಿಂದಾಗಿ ಕಿವಿಯ ತಮಟೆಗೆ ಹಾನಿಯಾಗುತ್ತಿದೆ.
ಸದ್ಯ ಯುವಜನತೆ 104ರಿಂದ 112 ಡಿಬಿ ಮೌಲ್ಯದ ಶಬ್ದದಲ್ಲಿ ಸಂಗೀತ ಕೇಳುತ್ತಿದೆ. ಇದು ತೀರಾ ಹೆಚ್ಚಿನ ಪ್ರಮಾಣವಾಗಿದೆ. ಸಾಮಾನ್ಯವಾಗಿ ವಯಸ್ಕರು 80 ಡಿಬಿ, ಮಕ್ಕಳು 75 ಡಿಬಿ ವ್ಯಾಲ್ಯೂಮ್ ಸೌಂಡ್ ಇರಿಸಿಕೊಳ್ಳಬೇಕು. ಆದರೆ ಹೆಚ್ಚಿನ ಸೌಂಡ್‌ನಲ್ಲಿ ಸಂಗೀತ ಕೇಳುತ್ತಿರುವುದರಿಂದ ಕಿವಿಗೆ ಭಾರೀ ಪ್ರಮಾಣದ ಹಾನಿಯಾಗುತ್ತಿದೆ. ಏನು ಮಾಡಬೇಕು?
ಆಯಾ ದೇಶಗಳ ಸರಕಾರಗಳು, ಉದ್ಯಮಗಳು, ಎನ್‌ಜಿಒಗಳು ಎಲ್ಲರೂ ಸೇಫ್ ಲಿಸನಿಂಗ್‌ಗೆ ಏರ್ಪಾಡು ಮಾಡಬೇಕು. ಈ ಬಗ್ಗೆ ಹೆಚ್ಚಿನ ಅರಿವು ಮೂಡಿಸಿ, ಯುವಕರು ಕಿವಿ ಕಳೆದುಕೊಳ್ಳದಂತೆ ಮಾಡಬೇಕು ಎಂಬ ಆಗ್ರಹ ಕೇಳಿಬಂದಿದೆ.