Advertisement

ಇಯರ್‌ ಕಫ್ಸ್ 

06:40 AM Nov 10, 2017 | |

ಇಯರ್‌ ಕಫ್ಸ್ ಇತ್ತೀಚಿನ ಫ್ಯಾಷನ್‌ ಲೋಕದ ಟ್ರೆಂಡಿ ಆಭರಣಗಳೆನಿಸಿವೆ. ಇವುಗಳು ವಿಧವಿಧವಾದ ಆಕಾರಗಳಲ್ಲಿ, ಬೇರೆ ಬೇರೆ ಥೀಮ್‌ಗಳಲ್ಲಿ ಮತ್ತು ವಿವಿಧ ಬಗೆಯ ಡಿಸೈನುಗಳಲ್ಲಿ ದೊರೆಯುತ್ತವೆ. ಇಯರ್‌ಕಫ್ಗಳು ಕಿವಿಯಾಭರಣಗಳಲ್ಲಿಯೇ ಸದ್ಯದ ಫ್ಯಾಷನೇಬಲ್‌ ಆಭರಣಗಳಲ್ಲೊಂದಾಗಿದೆ. ಇವು ಪಿನ್ನುಗಳಂತೆ ಸುಲಭವಾಗಿ ಧರಿಸಲು ಮತ್ತು ತೆಗೆಯಲು ಬರುವಂಥದ್ದಾಗಿರುತ್ತವೆ. ಮಾಡರ್ನ್ ದಿರಿಸುಗಳಿಗೆ ಬಹಳ ಚೆನ್ನಾಗಿ ಹೊಂದುವ ಇವುಗಳು ಈಗಿನ ಮಹಿಳೆಯರನ್ನು ಬೇಗನೆ ತಮ್ಮತ್ತ ಆಕರ್ಷಿಸುತ್ತಿವೆ. ಬಹಳ ವೇಗದಲ್ಲಿ ಪ್ರಚಲಿತವಾಗುತ್ತಿರುವ ಬಗೆಯಿವಾಗಿವೆ. ಈ ಬಗೆಯ ಕಿವಿಯಾಭರಣಗಳು ಬಹಳ ಹಿಂದಿನ ಕಾಲದಲ್ಲಿಯೂ ಧರಿಸಲ್ಪಡುತ್ತಿದ್ದವು.  ಕೇವಲ ಝುಮ್ಕಾಗಳು ಅಥವಾ ಬೆಂಡೋಲೆಗಳಷ್ಟೇ ಅಲ್ಲದೆ ಕಿವಿಯ ಇನ್ನುಳಿದ ಭಾಗಗಳಲ್ಲಿ ಬಗೆ ಬಗೆಯ ಇಯರ್‌ ಕಫ್ಗಳನ್ನು ಬಳಸುವುದರ ಮೂಲಕ ಟ್ರೆಂಡಿ ಲುಕ್ಕನ್ನು ತಮ್ಮದಾಗಿಸಿಕೊಳ್ಳಬಹುದು. ಅಂತಹ ಕೆಲವು ಬಗೆಯ ಇಯರ್‌ ಕಫ್ಗಳ ಬಗೆಗೆ ಮಾಹಿತಿ ನೀಡಲಾಗಿದೆ. ಈ ಮಾಹಿತಿಗಳು ಇಯರ್‌ ಕಫ್ಗಳ ಆಯ್ಕೆಗೆ ಸಹಾಯವಾಗಬಲ್ಲವು.

Advertisement

1. ಫ‌ುಲ್‌ ಕಫ್ (ಮಜೆಸ್ಟಿಕ್‌ ಇಯರ್‌ ಕಫ್): ಹೆಸರಿಗೆ ತಕ್ಕಂತೆ ಕಿವಿಯನ್ನು ಬಹಳಷ್ಟು ಭಾಗವನ್ನು ಕವರ್‌ ಮಾಡುವಂತಹ ಇಯರ್‌ ಕಫ್ ಆಗಿದೆ. ಬಹಳ ಸುಂದರವಾದ ಕಫ್ಗಳಾಗಿದ್ದು ಮೆಟಲ್‌ಗಳಿಂದ ತಯಾರಿಸಲಾಗಿರುತ್ತವೆ. ಸಿಲ್ವರ್‌, ಗೋಲ್ಡನ್‌ ಅಥವಾ ಬ್ಲ್ಯಾಕ್‌ ಮೆಟಲ್ಲುಗಳಿಂದ ತಯಾರಿಸಲಾಗಿರುತ್ತವೆ. ಸಾಮಾನ್ಯವಾಗಿ ಇವುಗಳನ್ನು ಮಾಡರ್ನ್ ಅಥವಾ‌ ಫ್ಯೂಷನ್‌ ದಿರಿಸುಗಳೊಂದಿಗೆ ತೊಟ್ಟಾಗ ಸುಂದರವಾಗಿ ಕಾಣುತ್ತವೆ. ಪಾರ್ಟಿಗಳಿಗೆ ಇವುಗಳನ್ನು ಲಾಂಗ್‌ ಗೌನುಗಳು, ಲೆಹೆಂಗಾಗಳೊಂದಿಗೆ ಧರಿಸಬಹುದಾಗಿದೆ. ಕಿವಿಯನ್ನು ಆವರಿಸುವುದರಿಂದ ಮುಖಕ್ಕೆ ಮೆರುಗನ್ನು ನೀಡುತ್ತವೆ. ವಯೋಮಾನದ ಮಿತಿಯಿರುವುದಿಲ್ಲ.

2. ಸಟಲ್‌ ಇಯರ್‌ ಜಾಕೆಟ್‌: ಇವುಗಳು ಸಿಂಪಲ್‌ ಮತ್ತು ಟ್ರೆಂಡಿ ಲುಕ್ಕನ್ನು ನೀಡುವಂತಹ ಇಯರ್‌ ಜಾಕೆಟ್ಟುಗಳಾಗಿವೆ. ಕ್ಯಾಷುವಲ್‌ ವೇರ್‌ ಬಟ್ಟೆಗಳೊಂದಿಗೆ ಸುಂದರವಾಗಿ ಕಾಣುತ್ತವೆ. ಇವುಗಳು ಫ‌ುಲ್‌ ಕಫ್ಗಳಿಗೆ ಹೋಲಿಸಿದಾಗ ಕಿವಿಯ ಕಡಿಮೆ ಭಾಗವನ್ನು ಆವರಿಸಿರುತ್ತವೆ. ಆದರೆ ನಿಮ್ಮ ಸಾಧಾರಣ ದಿರಿಸಿಗೂ ಕ್ಲಾಸ್ಸಿ ಲುಕ್ಕನ್ನು ನೀಡುತ್ತವೆ. ಈ ಬಗೆಯ ಆಭರಣಗಳ ಹೆಚ್ಚಿನ ಭಾಗ ಕಿವಿಯ ರಂಧ್ರದ ಹಿಂಭಾಗದಿಂದ ಹೊರಹೊಮ್ಮಿದಂತಿರುತ್ತವೆ. ಹಲವು ಬಗೆಯ ವಸ್ತುಗಳಿಂದ ತಯಾರಿಸಲಾದ ಕಿವಿಯಾಭರಣಗಳು ದೊರೆಯುತ್ತವೆ.

3. ಹೆಲಿಕ್ಸ್‌ ಇಯರ್‌ ಕಫ್ಸ್ ಳು: ಕೆಲವು ಜನಾಂಗಗಳಲ್ಲಿ ಕಿವಿಗಳ ವಿವಿಧ ಭಾಗಗಳಲ್ಲಿ ಚುಚ್ಚಿಸಿಕೊಂಡು ವಿವಿಧ ಬಗೆಯ ರಿಂಗುಗಳು, ಟಿಕ್ಕಿಗಳು ಅಥವಾ ಸಣ್ಣ ಸಣ್ಣ ಬೆಂಡೋಲೆಗಳನ್ನು ಹಾಕುವುದು ಈಗಲೂ ಕಂಡುಬರುತ್ತವೆ. ಆದರೆ ಈ ತೂತುಗಳು ಶಾಶ್ವತವಾದುದಾಗಿರುತ್ತವೆ. ಈ ಬಗೆಯ ತೂತುಗಳನ್ನು ಮಾಡಿಸಿಕೊಳ್ಳದೆಯೇ ಹಲವು ಬಗೆಯ ಇಯರ್‌ ಕಫ್ಗಳನ್ನು ಕಿವಿಯ ಹಲವು ಭಾಗಗಳಲ್ಲಿ ತೊಡುವಲ್ಲಿ ಈ ಬಗೆಯ ಹೆಲಿಕ್ಸ್‌ ಇಯರ್‌ ಕಫ್ಗಳು ಸಹಾಯಕವಾಗುತ್ತವೆ. ಇವುಗಳು ಪ್ರಸ್ಸೆಬಲ್‌ ಆಗಿದ್ದು ಬೇಕಾದಾಗ ಧರಿಸಿ ತೆಗೆದಿಡಬುದಾಗಿರುತ್ತವೆ. ಇವುಗಳು ಸಿಂಪಲ್ಲಾದ ರಿಂಗುಗಳಂತೆ, ಸ್ಟಾರುಗಳಂತೆ ಅಥವ ಡೆಕೋರೇಟಿವ್‌ ರಿಂಗುಗಳ ಮಾದರಿಯಲ್ಲಿ ದೊರೆಯುತ್ತವೆ. ಆಕರ್ಷಕವಾಗಿರುವ ಇವುಗಳು ಸಿಲ್ವರ್‌, ಬ್ಲ್ಯಾಕ್‌ ಮೆಟಲ್‌ ಅಥವಾ ಗೋಲ್ಡನ್‌ ಮೂರು ವಿಧಗಳಲ್ಲಿ ದೊರೆಯುತ್ತವೆ. ಇವುಗಳೂ ಕೂಡ ಟ್ರೆಂಡಿಯಾದ ಲುಕ್ಕನ್ನು ನೀಡಿ ಸಾಧಾರಣ ಬಟ್ಟೆಯಲ್ಲಿಯೂ ನಿಮ್ಮನ್ನು ಫ್ಯಾಷನೇಬಲ್‌ ಆಗಿ ಬಿಂಬಿಸುತ್ತವೆ.

4. ಕ್ರಿಸ್ಟಲ್‌: ಇವುಗಳು ನಮ್ಮ ದಿರಿಸನ್ನು ಆಕರ್ಷಕವನ್ನಾಗಿಸ ಬಲ್ಲವು. ಕ್ರಿಸ್ಟಲ್‌ ಇಯರ್‌ ಕಫ್ಗಳು ಸ್ಪಾರ್ಕಿಂಗ್‌ ಎಫೆಕr… ಅನ್ನು ಕೊಡುತ್ತವೆ. ಬೇಕಾದ ಬಣ್ಣಗಳ ಕ್ರಿಸ್ಟಲ್‌ ಬೀಡುಗಳಿಂದ ತಯಾರಿಸಿದ ಈ ಬಗೆಯ ಆಭರಣಗಳು ದೊರೆಯುವುದರಿಂದ  ಧರಿಸುವ ಬಟ್ಟೆಗಳಿಗೆ ಸುಂದರವಾಗಿ ಮ್ಯಾಚ್‌ ಆಗುತ್ತವೆ. ಬಗೆಬಗೆಯ ಡಿಸೈನುಗಳಲ್ಲಿಯೂ ಲಭಿಸುತ್ತವೆ. ಗ್ರ್ಯಾಂಡ್‌ ಲುಕ್ಕನ್ನು ಕೊಡುವಂತಹ ಬಗೆಗಳಿವಾಗಿವೆ.

Advertisement

 5. ಡಬಲ್‌ ಚೈನ್‌ ಇಯರ್‌ ಕಫ್ಸ್ : ಇವುಗಳು ಸದ್ಯದ ಫ್ಯಾಶನೇಬಲ್‌ ಕಿವಿಯಾಭರಣಗಳ ರೇಸಿನಲ್ಲಿ ಮುಂಚೂಣಿಯಲ್ಲಿರು ವಂತವುಗಳಾಗಿವೆ. ಬಹಳ ಸ್ಟೈಲಿಶ್‌ ಆದ ಲುಕ್ಕನ್ನು ಇಚ್ಚಿಸುವವರು ಇವುಗಳನ್ನೊಮ್ಮೆ ಪ್ರಯೋಗಿಸಲೇ ಬೇಕಾದವುಗಳಾಗಿವೆ. ಇವುಗಳಲ್ಲಿ ಸ್ಟಡ್‌ನಿಂದ ಡಬಲ್‌ ಚೈನ್‌ ಆರಂಭವಾಗಿ ಕಿವಿಯ ಮೇಲ್ಭಾಗದಲ್ಲಿ ಪ್ರಸ್‌ ಮಾಡುವಂತಹುದಾಗಿದೆ. ಇವುಗಳನ್ನು ಕೆಲವೊಮ್ಮೆ ಒಂದೇ ಕಿವಿಗೆ ಕೂಡ ಧರಿಸಿ ಸ್ಟೈಲಿಶ್‌ ಲುಕ್ಕನ್ನು ಪಡೆಯಬಹುದಾಗಿದೆ. ಎರಡೂ ಕಿವಿಗಳಿಗೂ ಕೂಡ ಧರಿಸಬಹುದು. ಮಾಡರ್ನ್ ದಿರಿಸುಗಳಿಗೆ ಬಹಳ ಚೆನ್ನಾಗಿ ಹೊಂದುತ್ತವೆ. ಬ್ಲ್ಯಾಕ್‌ ಮೆಟಲ್‌ ನದ್ದಾದರೆ ಇನ್ನೂ ಹೆಚ್ಚಿನ ಮೆರುಗನ್ನು ಕೊಡುತ್ತವೆ.

6. ಫ್ರಿಂಜx… ಇಯರ್‌ ಕಫ್ಸ್ : ಹಲವು ಎಳೆಗಳನ್ನೊಳಗೊಂಡು ಫ್ರಿಂಜಸ್‌ ಮಾದರಿಯಲ್ಲಿರುತ್ತವೆ. ಕಿವಿಯ ಹಿಂದಿನಿಂದ ಬಂದು ಕಿವಿಯ ಮೇಲ್ಭಾಗದಲ್ಲಿ ಕಿವಿಯಾಕಾದ ಹುಕ್ಕಿದ್ದು ಕಿವಿಗೆ ಫಿಕ್ಸ್‌ ಆಗಿ ಕೂರುತ್ತವೆ. ಇವುಗಳು ಕೇವಲ ಮಾಡರ್ನ್ ದಿರಿಸುಗಳಿಗಷ್ಟೇ ಅಲ್ಲದೆ ಫ್ಯೂಷನ್‌ ದಿರಿಸುಗಳಿಗೂ ಮ್ಯಾಚ್‌ ಆಗುತ್ತವೆ. ಹೆಚ್ಚಾಗಿ ಟೀನೇಜರ್ಸ್‌ ಇವುಗಳನ್ನು ಬಹಳ ಇಷ್ಟಪಡುವುದನ್ನು ನೋಡಬಹುದಾಗಿದೆ.

 7. ಫೆದರ್ಡ್‌ ಇಯರ್‌ ಕಫ್ಸ್ : ಬಹಳ ವೈಲ್ಡ್‌ ಲುಕ್ಕನ್ನು ನೀಡುವಂತಹ ಇವುಗಳು ಹೆಸರಿಗೆ ತಕ್ಕಂತೆ ರೆಕ್ಕೆಯಂತಹ ಡಿಸೈನನ್ನು ಹೊಂದಿರುತ್ತವೆ. ಇವುಗಳೂ ಕೂಡ ಫ್ರಿಂಜ್‌ ಇಯರ್‌ ಕಫ್ನಂತೆ ಕಿವಿಯ ಹಿಂದಿನಿಂದ ಧ‌ರಿಸಿ ಅದರ ರೆಕ್ಕೆಗಳು ಹೊರಚಾಚಿದಂತಹ ಮಾದರಿಯದ್ದಾಗಿರುತ್ತವೆ. ಇವುಗಳು ಟ್ರೈಬಲ್‌ ಅಥವಾ ಬೋಹೋ ಮಾದರಿಯಲ್ಲಿರುತ್ತವೆ. ಇವುಗಳ ಧರಿಸುವಿಕೆಯಿಂದ ನಿಮ್ಮದೇ ಆದ ಸ್ಟೈಲ್‌ ಸ್ಟೇಟೆಟನ್ನು ಸೃಷ್ಟಿಸುವುದು ಸಾಧ್ಯವೆನ್ನಬಹುದಾಗಿದೆ. 
  
8.ಇಯರ್‌ ರಾಪ್‌ ಇಯರ್‌ ಕಫ್ಸ್  (ಇಯರ್‌ ಕ್ರಾಲರ್‌): ಕರ್ಣ ಕವಚದಂತಿರುವ ಆಭರಣಗಳಿವು. ಕಿವಿಯ ಮುಂಭಾಗವನ್ನು ಆವರಿಸುವ ಇವುಗಳು ಸುಂದರವಾದ ಡಿಸೈನುಗಳಲ್ಲಿ ದೊರೆಯುತ್ತವೆ. ಕ್ರಿಸ್ಟಲ್‌, ಪರ್ಲ್, ಬ್ಲ್ಯಾಕ್‌ ಮೆಟಲ್‌, ವೈಟ್‌ ಮೆಟಲ್‌ ಸಿಲ್ವರ್‌ ಮತ್ತು ಗೋಲ್ಡ್‌ ಕ್ರಾಲರ್‌ಗಳು ದೊರೆಯುತ್ತವೆ. 

– ಪ್ರಭಾ ಭಟ್‌

Advertisement

Udayavani is now on Telegram. Click here to join our channel and stay updated with the latest news.

Next