Advertisement
ಹೌದು, ಮಂದಿರದ ನೆರೆಯ ಪ್ರದೇಶ ರಾಮಕೋಟದ ಮನೆಗಳ ಮಾಳಿಗೆಗಳಿಂದ ನೇರವಾಗಿಯೇ ಮಂದಿರದ ದರ್ಶನ ಪಡೆಯಬಹುದು. ವಿವಾದಿತ ಕಟ್ಟಡದ ಧ್ವಂಸದಿಂದ ಹಿಡಿದು ಮಂದಿರ ನಿರ್ಮಾಣದ ಶಿಲಾನ್ಯಾಸದವರಗೆ ಹಲವಾರು ಐತಿಹಾಸಿಕ ಘಟನೆಗಳನ್ನು ಈ ಮಾಳಿಗೆಗಳು ಕಣ್ತುಂಬಿಕೊಂಡಿವೆ. ಈ ಹಿನ್ನೆಲೆಯಲ್ಲಿ ಈ ಮಾಳಿಗೆಗಳ ಪರಿಶೀಲನೆಯೂ ಭದ್ರತಾಪಡೆಯ ಆದ್ಯತೆಯಾಗಿದೆ. ಸದಾಕಾಲ ಸಿಬಂದಿ ವಾಚ್ ಟವರ್‌ಗಳ ಮೇಲೆ ನಿಂತು ಮನೆಗೆ ಹೋಗುವವರು, ಬರುವವರು, ಮಾಳಿಗೆ ಏರುವವರನ್ನು ಗಮನಿಸುತ್ತಿದ್ದಾರೆ. ಜತೆಗೆ ಅಲ್ಲಿನ ಎಲ್ಲ ನಿವಾಸಗಳಿಗೂ ಅನುಮತಿ ಇಲ್ಲದೇ ಯಾವುದೇ ಅಪರಿಚಿತರು ಮಾಳಿಗೆ ಏರದಂತೆ ಖಚಿತಪಡಿಸಿಕೊಳ್ಳಲು ಸೂಚನೆಯನ್ನೂ ನೀಡಲಾಗಿದೆ. ಒಟ್ಟಾರೆ ಮಂದಿರಕ್ಕೆ ಮಾತ್ರವಲ್ಲದೇ, ಮಂದಿರದ ಸುತ್ತ ಮುತ್ತಲಿನ ಪ್ರದೇಶಗಳಲ್ಲೂ ಸುರಕ್ಷೆ ಖಾತರಿಪಡಿಸಿಕೊಳ್ಳಲಾಗುತ್ತಿದೆ.
Related Articles
Advertisement
ದಿಲ್ಲಿಯಿಂದ ಅಯೋಧ್ಯೆ ವಿಮಾನ ನಿಲ್ದಾಣಕ್ಕೆ ವಿಮಾನಯಾನ ಸಂಸ್ಥೆ ಏರ್ ಇಂಡಿಯಾ ತನ್ನ ಮೊದಲ ವಿಮಾನ ಹಾರಾಟವನ್ನು ಡಿ.30ರಂದು ಆರಂಭಿಸುವುದಾಗಿ ಹೇಳಿದೆ. ಅಲ್ಲದೇ ಜ.16ರ ಅನಂತರ ದಿನನಿತ್ಯ ಸೇವೆ ಆರಂಭಿಸಲಿದೆ.