Advertisement

ರೌಡಿಗಳ ಮೇಲೆ ಹದ್ದಿನ ಕಣ್ಣು: ಎಸ್ಪಿ ಲೋಕೇಶ ಜಗಲಾಸರ

02:11 PM Jul 15, 2019 | Suhan S |

ಜಮಖಂಡಿ: ತಾಲೂಕಿನಲ್ಲಿ 350ಕ್ಕೂ ಹೆಚ್ಚು ರೌಡಿಗಳಿದ್ದು, ಅವರ ಮೇಲೆ ಹದ್ದಿನ ಕಣ್ಣು ಇಡಲಾಗಿದೆ. ಅದರಲ್ಲಿ ಕೆಲ ರೌಡಿಗಳು ಮತ್ತೆ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದು, ಅವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಲೋಕೇಶ ಜಗಲಾಸರ ಹೇಳಿದರು.

Advertisement

ನಗರದ ಗ್ರಾಮೀಣ ಪೊಲೀಸ್‌ ಠಾಣೆ ಆವರಣದಲ್ಲಿ ರವಿವಾರ ರೌಡಿಗಳಿಗೆ ಎಚ್ಚರಿಕೆ, ಸಲಹೆ ನೀಡಿದ ನಂತರ ಮಾತನಾಡಿದ ಅವರು, ಹಳೆ ದೊಂಬಿ, ಗಲಭೆ ಪ್ರಕರಣಗಳಲ್ಲಿ ಹಳೆ ಅಪರಾಧಿಗಳ ಮೇಲೆ ನಿಗಾ ವಹಿಸುವ ಮೂಲಕ ಸುಧಾರಣೆ ಆಗಿದ್ದಾರೆ ಇಲ್ಲವೋ ಖಚಿತ ಪಡಿಸುವ ಉದ್ದೇಶಕ್ಕೆ ಬಂದಿದ್ದೇನೆ. ಸಾವಳಗಿ ಹೋಬಳಿಯಲ್ಲಿ 80ಕ್ಕೂ ಹೆಚ್ಚು ರೌಡಿಗಳನ್ನು ಗುರುತಿಸಲಾಗಿದ್ದು, ಉಳಿದ 270 ಜಮಖಂಡಿ ಹೋಬಳಿಯಲ್ಲಿದ್ದಾರೆ ಎಂದರು.

ತಾಲೂಕಿನಲ್ಲಿ ಯಾವುದೇ ಗಲಾಟೆ, ದೊಂಬಿ ಮಾಡಬಾರದು. ಸುಧಾರಣೆಗೆ ಅವಕಾಶ ನೀಡಲಾಗಿದ್ದು, ಅದರಲ್ಲಿ ಈಗಾಗಲೇ ಸುಧಾರಣೆಯತ್ತ ಹೆ‌ಜ್ಜೆ ಇಟ್ಟಿದ್ದಾರೆ. ಅಪರಾಧಮುಕ್ತ ಬಾಗಲಕೋಟೆ ಮಾಡಲು ನಿರ್ಧರಿಸಿದ್ದು, ಜಿಲ್ಲೆಯ ಎಲ್ಲ ಪೊಲೀಸ್‌ ಠಾಣೆಗಳ ಪಿಎಸ್‌ಐಗಳಿಗೆ ಸೂಚನೆ ನೀಡಲಾಗಿದೆ. ಜನಸ್ನೇಹಿಯಾಗಿ ಪೊಲೀಸ್‌ ಇಲಾಖೆ ಕೆಲಸ ನಿರ್ವಸಹಿಲಿದ್ದು, ಜನರ ಸಹಕಾರ ಅಗತ್ಯವಾಗಿದೆ ಎಂದರು.

ನಗರದಲ್ಲಿ ದಿನದಿಂದ ದಿನಕ್ಕೆ ಟ್ರಾಫಿಕ್‌ ಸಮಸ್ಯೆ ಹೆಚ್ಚಾಗುತ್ತಿದೆ. ರಸ್ತೆ ನಿಯಮ ಪಾಲನೆಯಾಗುತ್ತಿಲ್ಲ. ಅತಿಯಾದ ವಾಹನ ಸಂಚಾರದಿಂದ ಪಾದಚಾರಿಗಳಿಗೆ, ಮಹಿಳೆಯರಿಗೆ, ಮಕ್ಕಳಿಗೆ ಅಡಚಣೆಯಾಗುತ್ತಿದೆ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಜಿಲ್ಲೆಯಲ್ಲಿ ಸಂಚಾರ ನಿಯಂತ್ರಣ ಹೆಚ್ಚಿನ ಆದ್ಯತೆ ನೀಡುವ ಉದ್ದೇಶ ನಮ್ಮದಾಗಿದೆ. ಶೀಘ್ರದಲ್ಲಿ ಸ್ವತಃ ಜಮಖಂಡಿಗೆ ಇನ್ನೊಮ್ಮೆ ಆಗಮಿಸಿ ಸಂಚಾರಿ ವ್ಯವಸ್ಥೆ ಸಮಸ್ಯೆ ಪರಿಶೀಲಿಸುತ್ತೇನೆ. ತುರ್ತು ಅಗತ್ಯ ಕ್ರಮ ಕೈಗೊಳ್ಳಲು ಡಿವೈಎಸ್‌ಪಿ ಪಾಟೀಲ ಅವರಿಗೆ ಸೂಚಿಸುವುದಾಗಿ ಹೇಳಿದರು.

ಇದೇ ಸಂದರ್ಭದಲ್ಲಿ ಡಿವೈಎಸ್‌ಪಿ ಆರ್‌.ಕೆ. ಪಾಟೀಲ, ಸಿಪಿಐ ಮಹಾಂತೇಶ ಹೊಸಪೇಟಿ, ಗ್ರಾಮೀಣ ಪಿಎಸ್‌ಐ ಬಾಲದಂಡಿ, ನಗರ ಪಿಎಸ್‌ಐ ದಿನೇಶ ಜವಳಕರ, ಸಾವಳಗಿ ಪಿಎಸ್‌ಐ ಬೆಂಡೆಗೊಂಬಲ, ಎಎಸ್‌ಐ ಡಿ.ಎಂ. ಸಂಗಾಪುರ, ಆರಕ್ಷಕರಾದ ಎಸ್‌.ಎಸ್‌.ಸಿಂದಗಿಕರ, ಎಸ್‌.ಬಿ.ನಾಯಕ, ಭರತೇಶ ಒಣಜೋಳ, ಎಸ್‌.ವೈ.ಆಸಂಗಿ, ಬಿ.ಜಿ.ಮಧುರಖಂಡಿ, ಮಹಾದೇವ ಶೇಗುಣಸಿ ಇತರರು ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next