Advertisement
ಸಾಮಾನ್ಯವಾಗಿ ಹಾಳಾದ ಕಂಪ್ಯೂಟರ್ ಮಾನಿಟರ್‌ಗಳು, ಮದರ್ ಬೋರ್ಡ್, ಮೊಬೈಲ್‌ಫೋನ್ ಮತ್ತು ಚಾರ್ಜರ್‌ಗಳು, ಕಾಂಪ್ಯಾಕ್ಟ್ ಡಿಸ್ಕ್, ಹೆಡ್‌ಫೋನ್, ಟೆಲಿವಿಷನ್ ಸೆಟ್, ಹವಾನಿಯಂತ್ರಕ ಮತ್ತು ರೆಫ್ರಿಜರೇಟರ್ ಇತ್ಯಾದಿಗಳಿಂದ ಉಂಟಾಗುತ್ತಿರುವ ತ್ಯಾಜ್ಯವೇ ಇ-ತ್ಯಾಜ್ಯವಾಗಿದೆ. ಗ್ಲೋಬಲ್ ಇ-ವೇಸ್ಟ್ ಮಾನಿಟರ್‌ನ 2017ರ ವರದಿ ಪ್ರಕಾರ ಭಾರತವು ವಾರ್ಷಿಕವಾಗಿ ಸುಮಾರು 2 ಮಿಲಿಯನ್ ಟನ್ ಇ-ತ್ಯಾಜ್ಯವನ್ನು ಉತ್ಪಾದಿಸುತ್ತದೆ ಅಂದರೆ ಯುಎಸ್, ಚೀನ ಜಪಾನ್ ಮತ್ತು ಜರ್ಮನಿಯ ನಂತರ ಇ-ತ್ಯಾಜ್ಯ ಉತ್ಪಾದಿಸುವ ದೇಶಗಳಲ್ಲಿ ಐದನೇ ಸ್ಥಾನದಲ್ಲಿದೆ. 2016-17ರಲ್ಲಿ ಭಾರತ ತನ್ನ ಇ-ತ್ಯಾಜ್ಯದ ಶೇ 0.036 ಮೆ. ಟನ್‌ನ್ನು ಮಾತ್ರ ಸಂಸ್ಕರಣೆ ಮಾಡಿದೆ. ನಾವು ಸರಿಯಾಗಿ ಇ-ತ್ಯಾಜ್ಯ ಸಂಸ್ಕರಣೆ ಮಾಡುತ್ತಿಲ್ಲ ಎನ್ನುವುದನ್ನು ಇದು ತೋರಿಸುತ್ತದೆ.
ಚೀನದಲ್ಲಿ ಈಗಾಗಲೇ ಮರುಬಳಕೆಯಿಂದ ಕೊಬಾಲ್ಟ್ನ್ನು ಉತ್ಪಾದಿಸಲಾಗುತ್ತಿದೆ. ಈ ರೀತಿ ಮರುಬಳಕೆಯಿಂದ ತಯಾರಿಸಿದ ಲೋಹಗಳು 2ರಿಂದ 10 ಪಟ್ಟು ಶಕ್ತಿಯುತ ಮತ್ತು ಪರಿಣಾಮಕಾರಿಯಾಗಿರುತ್ತವೆ. ಇನ್ನೊಂದು ಆಶ್ಚರ್ಯಕರ ಅಂಶವೆಂದರೆ 2020ರಲ್ಲಿ ಟೋಕಿಯೊದಲ್ಲಿ ನಡೆಯುವ ಒಲಿಂಪಿಕ್ಸನ ವಿಜೇತರಿಗೆ ನೀಡುವ ಪದಕಗಳನ್ನು ಇ-ತ್ಯಾಜ್ಯವನ್ನು ಸಂಸ್ಕರಿಸುವ ಮೂಲಕ ತಯಾರು ಮಾಡಲಾಗುತ್ತಿದೆಯಂತೆ. ಇದಕ್ಕೆ 50,000 ಟನ್‌ನಷ್ಟು ತ್ಯಾಜ್ಯವನ್ನು ಬಳಸಲಾಗುತ್ತಿದೆ. ಇದರಿಂದ 8 ಟನ್‌ನಷ್ಟು ಚಿನ್ನ, ಬೆಳ್ಳಿ ಮತ್ತು ಕಂಚು ಬೇರ್ಪಡಿಸಿ 5,000 ಪದಕಗಳನ್ನು ಮಾಡಲಾಗುತ್ತಿದೆ.
Related Articles
ಇ-ತ್ಯಾಜ್ಯದಲ್ಲಿ ಸೀಸ, ಕ್ಯಾಡ್ಮಿಯಮ್, ಬೆರಿಲಿಯಮ್ ಮತ್ತು ಪಾದರಸದಂಥ ಹಾನಿಕಾರಕ ಅಂಶಗಳನ್ನು ಹೊಂದಿದ್ದು ಇದರಿಂದ ಮಾನವನಿಗೆ ಅಷ್ಟೇ ಅಲ್ಲದೆ ಭೂಮಿ ಮೇಲಿನ ಮತ್ತು ಜಲಚರ ಜೀವಿಗಳಿಗೂ ಹೆಚ್ಚು ಅಪಾಯವಿದೆ. ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯವು ಡಿಜಿಟಲ್ ಇಂಡಿಯಾದ ಅಡಿಯಲ್ಲಿ ಕೈಗಾರಿಕೆ ಸಂಘಗಳೊಂದಿಗೆ 2015ರಿಂದ ಇ-ತ್ಯಾಜ್ಯ ಜಾಗೃತಿ ಕಾರ್ಯಕ್ರಮ ಆರಂಭಿಸಿದ್ದು, ಇದರಿಂದಾಗುವ ಅಪಾಯಗಳ ಬಗ್ಗೆ ಜನಸಾಮಾನ್ಯರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ. ಭಾರತದಲ್ಲಿ ಇ-ತ್ಯಾಜ್ಯವನ್ನು ಮರುಬಳಕೆ ವಸ್ತುವಾಗಿ ಪರಿವರ್ತಿಸಬಲ್ಲ ಹಲವಾರು ಚಿಕ್ಕ ಕೈಗಾರಿಕೆಗಳನ್ನು ತಯಾರಿಸುವ ಮೂಲಕ ಇ-ತ್ಯಾಜ್ಯವನ್ನು ಅತ್ಯಂತ ಸಮರ್ಪಕವಾಗಿ ಬಳಕೆ ಮಾಡಿಕೊಳ್ಳಲು ಸಹಕಾರಿಯಾಗಿದೆ. ಅಲ್ಲದೇ ಇದರ ನಿರ್ವಹಣೆ ಮಾಡುವುದರಿಂದ ಅನೇಕ ಉದ್ಯೋಗಗಳನ್ನು ಸೃಷ್ಠಿ ಮಾಡುತ್ತದೆ ಮತ್ತು ದೇಶದ ಆರ್ಥಿಕತೆಯನ್ನು ಬಲಗೊಳಿಸುತ್ತದೆ.
Advertisement
ನಮ್ಮಲ್ಲೂ ಇರಲಿ ಇ-ತ್ಯಾಜ್ಯ ಸಂಸ್ಕರಣೆಪ್ರತೀ ನಗರದಲ್ಲೂ ಇ-ತ್ಯಾಜ್ಯ ಸಂಸ್ಕರಣಾ ಘಟಕಗಳನ್ನು ಸ್ಥಾಪಿಸುವತ್ತ ಸರಕಾರ ಮುಂದಾಗಬೇಕು. ಇದರಿಂದ ನಗರದಲ್ಲಿ ಉಂಟಾಗುತ್ತಿರುವ ಇ-ತ್ಯಾಜ್ಯದ ರಾಶಿಯನ್ನು ಸರಿಯಾದ ಬಳಕೆ ಮಾಡಿಕೊಳ್ಳಲು ಇದರಿಂದ ಸಾಧ್ಯವಾಗುತ್ತದೆ. - ಶಿವಾನಂದ ಎಚ್.