Advertisement

ವರ್ಷ ಕಳೆದರೂ ಬಾಗಿಲು ತೆರೆಯದ ಇ-ಸ್ಟೇಷನ್‌!

10:42 AM Jan 26, 2019 | Team Udayavani |

ಗದಗ: ಜಿಲ್ಲೆಯ ಪರಿಶಿಷ್ಟ ಜಾತಿ, ಪಂಗಡ ಹಾಗೂ ಹಿಂದುಳಿದ ವಿದ್ಯಾರ್ಥಿಗಳಲ್ಲಿ ಸಂವಹನ ಕಲೆ, ನ್ಪೋಕನ್‌ ಇಂಗ್ಲಿಷ್‌ ಹಾಗೂ ವ್ಯಕ್ತಿತ್ವ ವಿಕನಸಕ್ಕಾಗಿ ಜಿಲ್ಲಾಡಳಿತ ನಗರದಲ್ಲಿ ಸ್ಥಾಪಿಸಿರುವ ‘ಇ-ಸ್ಟೇಷನ್‌ ಸ್ಕಿಲ್‌ ಲ್ಯಾಬ್‌ ಉದ್ಘಾಟನೆಗೆ ಸೀಮಿತಗೊಂಡಿದ್ದು, ಉದ್ಘಾಟನೆಗೊಂಡು ಜ. 26ಕ್ಕೆ ಒಂದು ವರ್ಷ ಕಳೆಯುತ್ತಿದ್ದರೂ ತರಬೇತಿ ಕೇಂದ್ರ ಈ ವರೆಗೆ ಬಾಗಿಲು ತೆರೆದಿಲ್ಲ!

Advertisement

ಇತ್ತೀಚಿನ ವರ್ಷಗಳಲ್ಲಿ ಯಾವುದೇ ವಿಷಯದಲ್ಲಿ ಪದವಿ ಹೊಂದಿದ್ದರೂ, ಸಂವಹನ ಕೌಶಲ್ಯ ಅಗತ್ಯ. ಕೌಶಲ್ಯಗಳ ಕೊರತೆಯಿಂದ ಅನೇಕರು ನಿರೀಕ್ಷಿತ ಸ್ಥಾನಕ್ಕೆ ತಲುಪುತ್ತಿಲ್ಲ ಎಂಬ ಮಾತಿದೆ. ಈ ಹಿನ್ನೆಲೆಯಲ್ಲಿ ಜಿಲ್ಲೆಯ ಯುವಸಮೂಹ, ಪದವೀಧರರು, ಶಿಕ್ಷಕರು ಹಾಗೂ ನೌಕರರಲ್ಲಿ ನ್ಪೋಕನ್‌ ಇಂಗ್ಲಿಷ್‌ ಹಾಗೂ ಸಂವನ ಕಲೆಗಳ ಬಗ್ಗೆ ತರಬೇತಿ ನೀಡುವುದೇ ಸಂಸ್ಥೆಯ ಉದ್ದೇಶವಾಗಿದೆ.

ಸ್ಕಿಲ್‌ ಲ್ಯಾಬ್‌ನ ವಿಶೇಷತೆ: ಹಿಂದಿನ ಜಿಲ್ಲಾಧಿಕಾರಿ ಮನೋಜ್‌ ಜೈನ್‌ ಹಾಗೂ ಈ ಹಿಂದೆ ಗ್ರಾಮೀಣಾಭಿವೃದ್ಧಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವಾರಿ ಸಚಿವ ಹಾಗೂ ಹಾಲಿ ಶಾಸಕರಾಗಿರುವ ಎಚ್.ಕೆ. ಪಾಟಿಲ ಅವರು ಆಸಕ್ತಿಯಿಂದಾಗಿ ನಗರದ ಕೆ.ಎಚ್. ಪಾಟೀಲ ಜಿಲ್ಲಾ ಕ್ರೀಡಾಂಗಣದ ಮೊದಲ ಮಹಡಿಯಲ್ಲಿ ಅತ್ಯಾಧುನಿಕ ಕಲಿಕಾ ಸಾಮಗ್ರಿಗಳೊಂದಿಗೆ ಇ-ಸ್ಟೇಷನ್‌ ಸ್ಕಿಲ್‌ ಲ್ಯಾಬ್‌ ಸ್ಥಾಪಿತವಾಯಿತು.

ಇ-ಸ್ಟೇಷನ್‌ ಸ್ಕಿಲ್‌ ಲ್ಯಾಬ್‌ ಸಂಪೂರ್ಣ ಹವಾ ನಿಯಂತ್ರಿತವಾಗಿದ್ದು, ಒಟ್ಟು 24 ಆಸನಗಳಿವೆ. ಪ್ರತಿಯೊಬ್ಬರಿಗೂ ಪ್ರತ್ಯೇಕವಾಗಿ ಮೈಕ್‌ ಸಹಿತ ಹೆಡ್‌ಫೋನ್‌ ಸೌಲಭ್ಯ ಒದಗಿಸಲಾಗಿದೆ. ವಿಷಯ ಪರಿಣಿತರು ಹೇಳುವ ಮಾಹಿತಿಯನ್ನು ಹೆಡ್‌ಫೋನ್‌ ಮೂಲಕ ಸ್ಪಷ್ಟವಾಗಿ ಕೇಳಬಹುದಾಗಿದೆ. ಜತೆಗೆ ವಿಷಯ ತಜ್ಞರ ಜತೆಗೆ ಮೈಕ್‌ನಲ್ಲಿ ಮಾತನಾಡಬಹುದಾಗಿದೆ.

ವಿಷಯ ತಜ್ಞರು ಅಥವಾ ಇಂಗ್ಲಿಷ್‌ ಕಲಿಕೆಯ ಬಗ್ಗೆ ಮಾತನಾಡುವಾಗ ಧ್ವನಿಯನ್ನು ಪ್ರತ್ಯೇಕವಾಗಿ ಕಂಪ್ಯೂಟರ್‌ನಲ್ಲಿ ರೆಕಾರ್ಡ್‌ ಮಾಡಬಹುದು. ಬಳಿಕ ಅದನ್ನು ಮತ್ತೂಮ್ಮೆ ಮಗದೊಮ್ಮೆ ಕೇಳಿ, ಇಂಗ್ಲಿಷ್‌ ಪದಗಳ ಉಚ್ಛಾರಣೆಯನ್ನು ಸುಧಾರಿಸಿಕೊಳ್ಳಬಹುದು. ಅದಕ್ಕಾಗಿ ಖಾಸಗಿ ಸಂಸ್ಥೆಯೊಂದರ ಮೂಲಕ ಸಾಫ್ಟವೇರ್‌ ಅಳವಡಿಸಿದೆ.ಇ-ಸ್ಟೇಷನ್‌ ಸ್ಕಿಲ್‌ ಲ್ಯಾಬ್‌ ಸ್ಥಾಪನೆಗೆ ಜಿಲ್ಲಾಡಳಿತ 12 ಲಕ್ಷ ರೂ. ವೆಚ್ಚ ಮಾಡಿದ್ದರೂ ಲ್ಯಾಬ್‌ ಬಳಕೆಯಲ್ಲಿಲ್ಲದೇ ನಿರುಪಯುಕ್ತವಾಗಿದೆ.

Advertisement

ಬಾಗಿಲು ತೆರೆಯದ ಲ್ಯಾಬ್‌: 2018ರ ಜ.26 ರಂದು ಉದ್ಘಾಟನೆಗೊಂಡಿರುವ ಇ-ಸ್ಟೇಷನ್‌ ಲ್ಯಾಬ್‌ ಮತ್ತೆ ಬಾಗಿಲು ತೆರೆದೇ ಇಲ್ಲ. ಇನ್ನು ಉದ್ಘಾಟನೆ ಬಳಿಕ ಆಕಾಂ ಕ್ಷಿಗಳಿಂದ ಅರ್ಜಿ ಕರೆದು ದಿನಕ್ಕೆ ಎರಡು ಬ್ಯಾಚ್‌ಗಳಲ್ಲಿ ತರಬೇತಿ ನೀಡಲಾಗುತ್ತದೆ ಎಂದು ಹೇಳಲಾಯಿತು. ಆದರೆ, ಆ ನಂತರ ಎದುರಾದ ವಿಧಾ ನಸಭೆ ಚುನಾವಣೆ ಸೇರಿದಂತೆ ಮತ್ತಿತರೆ ಕಾರಣಗಳಿಂದ ಸ್ಕಿಲ್‌ ಲ್ಯಾಬ್‌ ಬಗ್ಗೆ ಜಿಲ್ಲಾಡಳಿತ ಗಮನವೇ ಹರಿಸಲಿಲ್ಲ. ಹೀಗಾಗಿ ಲ್ಯಾಬ್‌ನಲ್ಲಿರುವ ಪೀಠೊಪಕರಣ, ಎಲ್‌ಸಿಡಿ ಟಿವಿ, ಕಂಪ್ಯೂಟರ್‌, ಹೆಡ್‌ ಫೋನ್ ಗಳು ಧೂಳು ತಿನ್ನುತ್ತಿವೆ.

ಹಿಂದಿನ ಸಚಿವರು ಹಾಗೂ ಈಗಿನ ಶಾಸಕ ಎಚ್.ಕೆ. ಪಾಟೀಲ ಅವರ ನಿರ್ಲಕ್ಷ ್ಯ ಧೋರಣೆ ಮತ್ತು ಸಂವಹನ ಕೊರತೆಯಿಂದಾಗಿ ಇದು ಉದ್ಘಾಟನೆಗೆ ಸೀಮಿತವಾಗಿದೆ. ಹೆಸರಿಗೆ ಸಾಕಷ್ಟು ಸರಕಾರಿ ಯೋಜನೆಗಳನ್ನು ಘೋಷಿಸುತ್ತಾರೆ. ಆದರೆ, ಅದನ್ನು ಮುಂದುವರಿಸುವುದಿಲ್ಲ ಎಂಬುದಕ್ಕೆ ಇದೊಂದು ನಿದರ್ಶನ. ಕೇಂದ್ರ ಸ್ಥಾಪಿಸಿಯೂ, ತರಬೇತಿ ನೀಡದೇ ಅರ್ಹ ವಿದ್ಯಾರ್ಥಿಗಳನ್ನು ಸೌಲಭ್ಯದಿಂದ ವಂಚಿಸಿದಂತಾಗಿದೆ.
ಮೋಹನ ಮಾಳಶೆಟ್ಟಿ,
ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ.

ಇ- ಸ್ಟೇಷನ್‌ ಸ್ಕಿಲ್‌ ಲ್ಯಾಬ್‌ನ್ನು ಜಿಲ್ಲಾ ಯೋಜನಾ ನಿರ್ದೇಶಕರಿಗೆ ವಹಿಸಲಾಗಿತ್ತು. ಡಿಯುಡಿಸಿ ತರಬೇತುದಾರರೊಬ್ಬರು ಅನಾರೋಗ್ಯದಿಂದಿದ್ದು, ಅವರು ಮರಳಿದ ಬಳಿಕ ಆರಂಭಿಸಲಾಗುತ್ತದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಈ ಕುರಿತು ಪರಿಶೀಲಿಸಿ ಶೀಘ್ರವಾಗಿ ಕಾರ್ಯಾರಂಭಿಸಲು ಕ್ರಮ ಕೈಗೊಳ್ಳಲಾಗುವುದು.
 • ಶಿವಾನಂದ ಕರಾಳೆ,
 ಅಪರ ಜಿಲ್ಲಾಧಿಕಾರಿ.

ವೀರೇಂದ್ರ ನಾಗಲದಿನ್ನಿ

Advertisement

Udayavani is now on Telegram. Click here to join our channel and stay updated with the latest news.

Next