Advertisement
ಈ ಸೇವೆಗಾಗಿ ಈಗಾಗಲೇ ರಾಜ್ಯಾದ್ಯಂತ ವಿವಿಧ ವೈದ್ಯರು ನೋಂದಣಿ ಮಾಡಿಕೊಂಡಿದ್ದಾರೆ. ಪ್ರತಿ ಆಸ್ಪತ್ರೆಯಲ್ಲಿ ಪ್ರತಿದಿನ ಇಬ್ಬರು ವೈದ್ಯರು ಲಾಗಿನ್ ಆಗಿರುತ್ತಾರೆ. ರೋಗಿಯು ಕರೆ ಮಾಡಿದಾಗ ಆ ರೋಗಿಯ ಚಿಕಿತ್ಸೆಗೆ ಸಂಬಂಧಪಟ್ಟ ಯಾವ ವೈದ್ಯರು ಲಾಗಿನ್ ಆಗಿರುತ್ತಾರೋ ಆ ವೈದ್ಯರು ಕರೆ ಸ್ವೀಕರಿಸಿ ಸಮಾಲೋಚಿಸುತ್ತಾರೆ. ಆಯಾ ಜಿಲ್ಲೆಯ ರೋಗಿಗಳಿಗೆ ಅವರ ಜಿಲ್ಲೆಯ ವೈದ್ಯರೇ ಸಿಗುತ್ತಾರೆ ಎಂದು ಹೇಳಲಾಗದು. ಯಾವ ವೈದ್ಯರು ಕರೆ ಸ್ವೀಕರಿಸಿದರೂ ರೋಗಿಗೆ ಸರಿಯಾದ ಮಾರ್ಗದರ್ಶನ ನೀಡುತ್ತಾರೆ. ರೋಗದ ಸ್ಥಿತಿಯನ್ನು ಅವಲಂಬಿಸಿ ಯಾವ ಔಷಧ, ಸೇವನೆಯ ಪ್ರಮಾಣ ಇತ್ಯಾದಿ ಎಲ್ಲವನ್ನೂ ಹೇಳುತ್ತಾರೆ.
ಮೊಬೈಲ್‌ನ ಪ್ಲೇ ಸ್ಟೋರ್ ಅಥವಾ ಗೂಗಲ್‌ನಲ್ಲಿ ಇ-ಸಂಜೀವಿನಿ ಒಪಿಡಿ ಎಂದು ನಮೂದಿಸಿದರೆ ಆ್ಯಪ್ ತೆರೆದುಕೊಳ್ಳುತ್ತದೆ. ಇದರಲ್ಲಿ ರೋಗಿಯ ರಿಜಿಸ್ಟ್ರೇಶನ್ ಕಾಲಂನಲ್ಲಿ ಮೊಬೈಲ್ ಸಂಖ್ಯೆ ನಮೂದಿಸಿದರೆ ಒಟಿಪಿ ಬರುತ್ತದೆ. ಒಟಿಪಿ ನಮೂದಿಸಿದ ಬಳಿಕ ರಿಜಿಸ್ಟ್ರೇಶನ್ ಅಪ್ಲಿಕೇಶನ್ ತೆರೆದುಕೊಳ್ಳುತ್ತದೆ. ಅದರಲ್ಲಿ ರೋಗಿಯ ಹೆಸರು, ಲಿಂಗ, ವಯಸ್ಸು, ಮೊಬೈಲ್ ಸಂಖ್ಯೆ ಹಾಗೂ ವಿಳಾಸ ನಮೂದಿಸಿ ಲಾಗಿನ್ ಆಗಬೇಕು. ಆಗ ಟೋಕನ್ ನಂಬರ್ ಲಭಿಸುತ್ತದೆ. ಟೋಕನ್ ನಂಬರ್ ನೀಡಿ ವೈದ್ಯರನ್ನು ವೀಡಿಯೋ ಕರೆ ಮೂಲಕ ಸಂಪರ್ಕಿಸಬಹುದು.