Advertisement

ಏಳು ಜಿಲ್ಲೆಗಳಲ್ಲಿ ಇ-ರೌಂಡ್ಸ್‌ ಉಪಕ್ರಮ: ಸರ್ಕಾರದ ಜತೆ ಮಣಿಪಾಲ್‌ ಆಸ್ಪತ್ರೆ ಸಹಭಾಗಿತ್ವ

12:17 PM May 07, 2020 | mahesh |

ಬೆಂಗಳೂರು: ಕೋವಿಡ್‌-19ರಿಂದ ಬಳಲುತ್ತಿರುವ ರಾಜ್ಯದ 7 ಜಿಲ್ಲೆಗಳಲ್ಲಿನ ರೋಗಿಗಳಿಗೆ ಇ-ರೌಂಡ್ಸ್‌ ಗಳನ್ನು ನಡೆಸುವುದರೊಂದಿಗೆ ರಾಜ್ಯ ಸರ್ಕಾರಕ್ಕೆ ಬೆಂಬಲ ನೀಡುವುದಕ್ಕಾಗಿ ಬೆಂಗಳೂರು ಮಣಿಪಾಲ್‌ ಆಸ್ಪತ್ರೆ ಮುಂದಾಗಿದೆ. ಇದಕ್ಕಾಗಿ ವಾರ್‌ ರೂಮ್‌ ಸಜ್ಜುಗೊಳಿಸಲಾಗಿದೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಪ್ರಧಾನ ಕಾರ್ಯದರ್ಶಿ, ಆರೋಗ್ಯ ಆಯುಕ್ತರು ಮತ್ತು ಸರ್ಕಾರ ನೇಮಿಸಿದ ವೈದ್ಯರು ಈ ಉಪಕ್ರಮದಲ್ಲಿ ಸೇರಿದ್ದು, ಜಿಲ್ಲೆಗಳಲ್ಲಿ ವಿಶೇಷತಜ್ಞರೊಂದಿಗೆ ವರ್ಚುವಲ್‌ ಆರೋಗ್ಯ ಸುತ್ತುಗಳನ್ನು ನಡೆಸಲು ಅವಕಾಶ ಮಾಡಿ
ಕೊಡಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

Advertisement

ಪ್ರತಿ ದಿನ ಬೆಳಗ್ಗೆ 11ಗಂಟೆ ಮತ್ತು ಸಂಜೆ 6 ಗಂಟೆಗೆ ವರ್ಚುವಲ್‌ ವ್ಯವಸ್ಥೆ ಮೂಲಕ ಆನ್‌ಲೈನ್‌ನಲ್ಲಿ ಒಂದಾಗಿ ಸೇರಿ ಎಸ್‌ಎಆರ್‌ಐ (ತೀವ್ರ ರೀತಿಯ ಉಸಿರಾಟದ ಅಸ್ವಸ್ಥತೆ) ಪ್ರಕರಣಗಳನ್ನು ಹಾಗೂ ಐಎಲ್‌ಐ (ಇನ್‌ಫ್ಲ್ಯೂಯೆನ್ಜ್ ರೀತಿಯ ರೋಗಗಳು) ಪ್ರಕರಣಗಳನ್ನು 7 ಜಿಲ್ಲೆಗಳಿಗೆ ಸಂಬಂಧಿಸಿದಂತೆ ಮೌಲ್ಯಿಕರಣ ನಡೆಸುತ್ತಿದ್ದಾರೆ. ಬೆಳಗಾವಿ, ಬೀದರ್‌, ಕಲ್ಬುರ್ಗಿ, ವಿಜಯಪುರ, ಗದಗ ಮತ್ತು ದಕ್ಷಿಣ ಕನ್ನಡ ಮತ್ತು ದಾವಣಗೆರೆ ಜಿಲ್ಲೆಗಳು ಈ ವ್ಯಾಪ್ತಿಗೆ ಬರಲಿವೆ.  ಇದುವರೆಗೆ 570ಕ್ಕೂ ಹೆಚ್ಚಿನ ಪ್ರಕರಣಗಳ ವಿಶ್ಲೇಷಣೆ ನಡೆದಿವೆ. ವೆಂಟಿಲೇಷನ್‌, ಡಯಾಲಿಸಿಸ್‌, ಇನೋ  ಥ್ರೋಪ್ಸ್‌ ಮತ್ತು ಥಂಬಾಲಿಸಿಸ್‌ ಕ್ರಮಗಳನ್ನು ನಡೆಸಲಾಗಿದೆ. 160 ಗಂಭೀರವಾಗಿ ಅಸ್ವಸ್ಥರಾಗಿರುವ ಪ್ರಕರಣಗಳಲ್ಲಿ 40 ವ್ಯಕ್ತಿಗಳು ಚೇತರಿಸಿಕೊಂಡಿರುತ್ತಾರೆ ಎಂದು ಪ್ರಕಟಣೆಯಲ್ಲಿ ವಿವರಿಸಲಾಗಿದೆ.

ಐಎಎಸ್‌ ಅಧಿಕಾರಿ ಡಾ. ತ್ರಿಲೋಕ್‌ ಚಂದ್ರ ಮಾತನಾಡಿ, “”ಬೆಂಗಳೂರಿನಲ್ಲಿರುವ ವಾರ್‌ ರೂಮ್‌, ರಾಜ್ಯದಲ್ಲಿನ ಪ್ರತಿಯೊಬ್ಬ ಗಂಭೀರ ಸ್ಥಿತಿಯಲ್ಲಿರುವ ರೋಗಿಗಳ ಕೇಸ್‌ ಶೀಟ್‌ನ ನಕಲನ್ನು ಹೊಂದಿರುತ್ತದೆ. ಪರಿಣತರ ತಂಡ ಸ್ಥಳೀಯ ವೈದ್ಯರೊಂದಿಗೆ ದಿನಕ್ಕೆ ನಾಲ್ಕು ಬಾರಿ ಸಂವಾದ ನಡೆಸುತ್ತದೆ. ಪ್ರತಿ ರೋಗಿಗೆ ನೀಡಲಾಗುತ್ತಿರುವ ಚಿಕಿತ್ಸೆಯನ್ನು ಗಮನಿಸುತ್ತದೆ ಎಂದರು.
ಬೆಂಗಳೂರು ಮಣಿಪಾಲ್‌ ಆಸ್ಪತ್ರೆಯ ಶ್ವಾಸ ಕೋಶ ರೋಗಶಾಸ್ತ್ರ ಶಸ್ತ್ರಕ್ರಿಯಾ ವಿಭಾಗದ ಮುಖ್ಯಸ್ಥರಾದ ಡಾ. ಸತ್ಯನಾರಾಯಣ ಮೈಸೂರು ಅವರು ಮಾತನಾಡಿ, ಕೋವಿಡ್‌-19ರ ರೋಗಿಗಳ ಸಾವಿನ ಸಂಖ್ಯೆಯನ್ನು ಕಡಿತಗೊಳಿಸಲು ಈ ಖಾಸಗಿ-ಸರ್ಕಾರಿ ಪಾಲುದಾರಿಕೆಗೆ ದಿನಕ್ಕೆ ಸುಮಾರು ಆರು ಗಂಟೆಗಳ ಸಮಯ ಹಿಡಿಯುತ್ತಿದೆ. ನಮ್ಮ ನಿಗದಿತ ವೈದ್ಯಕೀಯ ಆರೈಕೆಗೆ ಹೆಚ್ಚುವರಿಯಾಗಿ ಈ ಕ್ರಮ ಕೈಗೊಳ್ಳಲಾಗುತ್ತಿದೆ ಎಂದರು. ಮಣಿಪಾಲ್‌ ಆಸ್ಪತ್ರೆಯ ಗಂಭೀರ ಸ್ಥಿತಿಯಲ್ಲಿರುವ ರೋಗಿಗಳ ಆರೈಕೆ ಸೇವೆಗಳ ಚೇರ್ಮನ್‌ ಡಾ. ಸುನೀಲ್‌ ಕಾರಂತ್‌ ಮಾತನಾಡಿ, “ಗಂಭೀರ ಸ್ಥಿತಿಯಲ್ಲಿರುವ ಕೋವಿಡ್‌-19ರ ರೋಗಿಗಳಿಗಾಗಿ ಇ-ರೌಂಡ್ಸ್‌ಗಳನ್ನು ನಡೆಸಲು ರಾಜ್ಯದ ಆರೋಗ್ಯ ಇಲಾಖೆಯು ಅನೇಕ ಖಾಸಗಿ ಆಸ್ಪತ್ರೆಗಳೊಂದಿಗೆ ಕೈಗೂಡಿಸಿದೆ. ಜೀವಗಳನ್ನು ಉಳಿಸಲು ನೆರವಾಗುತ್ತಿದೆ.’ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next