Advertisement

ಇ- ಆಸ್ತಿ ನೋಂದಣಿ: ತಾಂತ್ರಿಕ ತೊಂದರೆಯಿಂದ ಹಿನ್ನಡೆ

08:16 AM Dec 09, 2020 | mahesh |

ಉಡುಪಿ: ಆಸ್ತಿ ರಕ್ಷಣೆ ಹಾಗೂ ಪಾರದರ್ಶಕತೆ ಕಾಪಾಡುವ ಉದ್ದೇಶದಿಂದ ನಗರಸಭೆ ವ್ಯಾಪ್ತಿಯಲ್ಲಿ ಆರಂಭವಾದ ಇ- ಆಸ್ತಿ ನೋಂದಣಿ ಪ್ರಕ್ರಿಯೆ ಕುಂಟುತ್ತ ಸಾಗಿದೆ. ದಾಖಲೆ ನೀಡಿದರೂ, ಈ ತಂತ್ರಾಂಶದೊಳಗೆ ಸೇರ್ಪಡೆಗೊಳ್ಳದ ನಗರವಾಸಿಗಳು ಆತಂಕಕ್ಕೆ ಒಳಗಾಗಿದ್ದಾರೆ.

Advertisement

ತೊಡಕುಗಳು
ಆಸ್ತಿ ವಿವರಗಳನ್ನು ಆನ್‌ಲೈನ್‌ನಲ್ಲಿ ದಾಖಲಿಸಿದರೆ, ಆಸ್ತಿ ಹಕ್ಕಿಗೆ ಸಂಬಂಧಿಸಿ ಯಾವುದೇ ಅವ್ಯವಹಾರಕ್ಕೆ ಅವಕಾಶವಿರುವುದಿಲ್ಲ ಮತ್ತು ದಾಖಲೆಗಳು ಸುರಕ್ಷಿತವಾಗಿರುತ್ತವೆ. ಅಲ್ಲದೆ ಮಧ್ಯವರ್ತಿಗಳ ಹಸ್ತಕ್ಷೇಪ ತಪ್ಪುತ್ತದೆ ಎಂಬ ಕಾರಣಕ್ಕೆ ಅನುಷ್ಠಾನಗೊಂಡಿರುವ ಇ- ಆಸ್ತಿ ನೋಂದಣಿ ಕಾರ್ಯಕ್ರಮವು ಇದೀಗ ತಾಂತ್ರಿಕ ಹಾಗೂ ಸಿಬಂದಿ ಕೊರತೆಯಿಂದಾಗಿ ಹಿಂದೆ ಬಿದ್ದಿದೆ.

20,000 ಕಟ್ಟಡ ಇ-ಖಾತೆ
ನಗರದಲ್ಲಿ 67,123 ಕಟ್ಟಡಗಳಿವೆ. ಅವುಗಳಲ್ಲಿ 20,000 ಇ ಖಾತೆಯಾಗಿದೆ. ಇನ್ನೂ 2,510 ಸೈಟ್‌ಗಳ ಇ-ಖಾತೆಯಾಗಿದೆ ಎಂದು ನಗರಸಭೆ ಅಂಕಿ ಅಂಶಗಳು ಹೇಳುತ್ತಿವೆ.

ನೋಂದಣಿಯಾಗಲು ಏನೆಲ್ಲ ಬೇಕು ?
ಆರ್‌ಟಿಸಿ ಪ್ರತಿ, ಸರಕಾರಿ ಮಂಜೂರು ಪತ್ರ, ಲೇಔಟ್‌ ನಕ್ಷೆ, ಸರ್ವೆ ನಕ್ಷೆ, ಕಟ್ಟಡ ಪರವಾನಿಗೆ ಪತ್ರ, ಕಟ್ಟಡದ ನೀಲಿ ನಕ್ಷೆ, ಅನುಭೋಗ ಪತ್ರ, ಆಸ್ತಿ ತೆರಿಗೆ ವಿವರ ಹಾಗೂ ಪಾವತಿ, ನೀರಿನ ಕರದ ಪಾವತಿ, ಮನೆ, ನಿವೇಶನದ ಚಿತ್ರ, ಆಧಾರ್‌ ಸಂಖ್ಯೆ, ವಿದ್ಯುತ್‌ ಬಿಲ…, ಮ್ಯುಟೇಷನ್‌ ದಾಖಲೆ, ಮಾಲಕರ ಚಿತ್ರ, ಬ್ಯಾಂಕ್‌ ಸಾಲದ ಬಗ್ಗೆ ದಾಖಲೆ ಹಾಗೂ ಕ್ರಯ, ದಾನ, ಹಕ್ಕು ಖುಲಾಸೆ ಅಥವಾ ಬದಲಾವಣೆಯ ಆದೇಶದ ಪ್ರತಿಗಳನ್ನು ಮನೆ ಮಾಲಕರು ನಗರಸಭೆಗೆ ನೀಡಬೇಕು.

ಸರ್ವರ್‌ ಸಮಸ್ಯೆ!
ದಾಖಲೆ ಪೂರೈಕೆ ಮಾಡಿದರೂ ಸರ್ವರ್‌ ಸಮಸ್ಯೆಯಿಂದಾಗಿ ಜನರು ಪರದಾಡುತ್ತಿದ್ದಾರೆ. ಇನ್ನೊಂದೆಡೆ ಇ -ಖಾತೆಗೆ ಸಂಬಂಧಿಸಿದಂತೆ ಪ್ರತ್ಯೇಕ ಸಿಬಂದಿ ನೀಡದ ಹಿನ್ನೆಲೆಯಲ್ಲಿ ಕೆಲಸಗಳು ಆಮೆ ನಡಿಗೆಯಂತಾಗಿವೆ. ಈ ನಿಟ್ಟಿನಲ್ಲಿ ನಗರಸಭೆಯ ಸಾಮಾನ್ಯ ಸಭೆಯಲ್ಲಿ 4 ಮಂದಿಯನ್ನು ಕಂದಾಯ ವಿಭಾಗದಲ್ಲಿ ಕೆಲಸ ನಿರ್ವಹಿಸಲು ಗುತ್ತಿಗೆ ಆಧಾರದ ಮೇಲೆ ನೇಮಕಾತಿ ಮಾಡುವ ಕುರಿತು ನಿರ್ಣಯವಾಗಿತ್ತು. ಅಂತೆಯೇ ಸಿಬಂದಿ ನೇಮಕ ಪ್ರಕ್ರಿಯೆ ಚಾಲ್ತಿಯಲ್ಲಿದೆ.

Advertisement

ನಿತ್ಯ 22 ಅರ್ಜಿಗಳು!
ನಗರಸಭೆಯಲ್ಲಿ ಖಾತೆ ಹಾಗೂ ಇ- ಖಾತೆಗೆ ಸಂಬಂಧಿಸಿದಂತೆ ನಾಲ್ಕು ಸಿಬಂದಿ ಕೆಲಸ ನಿರ್ವಹಿಸುತ್ತಿದ್ದಾರೆ. ಇ-ಖಾತೆಯಲ್ಲಿ ಇಬ್ಬರು ಕರ್ತವ್ಯ ನಿರ್ವಹಿಸುತ್ತಿದ್ದು, ನಿತ್ಯ ಒಬ್ಬರಿಗೆ 10ರಿಂದ 12 ಇ-ಖಾತೆಗೆ ಸಂಬಂಧಿಸಿದ ಅರ್ಜಿಗಳು ಸಲ್ಲಿಕೆಯಾಗುತ್ತವೆ. ಇದರ ವಿಲೇವಾರಿಗೆ 45 ದಿನಗಳ ಗಡುವು ಸರಕಾರ ನಿಗದಿ ಪಡಿಸಿದೆ.

ಕಾಲ ಮಿತಿಯೊಳಗೆ ವಿಲೇವಾರಿ
ಪ್ರಸ್ತುತ ಸಲ್ಲಿಕೆಯಾಗುತ್ತಿರುವ ಅರ್ಜಿಗಳನ್ನು ಕಾಲ ಮಿತಿಯೊಳಗೆ ವಿಲೇವಾರಿ ಮಾಡಲಾಗುತ್ತಿದೆ. ಜನರು ಮುಂದೆ ಬಂದು ಇ-ಆಸ್ತಿ ನೋಂದಣಿ ಮಾಡುವಲ್ಲಿ ಆಸಕ್ತಿ ತೋರುತ್ತಿದ್ದಾರೆ.
-ಧನಂಜಯ, ಅಧಿಕಾರಿ, ಕಂದಾಯ ವಿಭಾಗ, ನಗರಸಭೆ.

Advertisement

Udayavani is now on Telegram. Click here to join our channel and stay updated with the latest news.

Next