Advertisement
ಪಂಜಾಬ್ ಮೂಲದ ಅರವಿಂದರ್ ಸಿಂಗ್ (32) ಎಂಬಾತನನ್ನು ಬಂಧಿಸಲಾಗಿದೆ. ಪ್ರಕರಣದ ಕಿಂಗ್‌ಪಿನ್ ಹಾಗೂ ಅಂತಾರಾಷ್ಟ್ರೀಯ ಹ್ಯಾಕರ್ ಶ್ರೀಕೃಷ್ಣ ಅಲಿಯಾಸ್ ಶ್ರೀಕಿಯ ಸಹಚರನಾಗಿದ್ದು, ರಾಜ್ಯ ಸರ್ಕಾರದ ಇ-ಪ್ರಕ್ಯೂರ್‌ವೆುಂಟ್ ವೆಬ್ ಸೈಟ್ ಹ್ಯಾಕ್ ಮಾಡಿ ವಂಚಿಸಿದ ಹಣವನ್ನು ಶ್ರೀಕಿ ಸೂಚನೆ ಮೇರೆಗೆ ಅರವಿಂದರ್ ಸಿಂಗ್ ತನ್ನ ಖಾತೆಗೆ ಜಮೆ ಮಾಡಿಕೊಂಡಿದ್ದ.
Related Articles
Advertisement
ಉದ್ಯಮಿಗಳು, ವ್ಯಾಪಾರಿಗಳ ಆಪ್ತ:
ಇನ್ನು ಅರವಿಂದರ್ ಸಿಂಗ್, ಪಂಜಾಬ್ ಸೇರಿ ನೆರೆ ರಾಜ್ಯಗಳ ಉದ್ಯಮಿಗಳು, ವ್ಯಾಪಾರಿಗಳ ಆಪ್ತನಾಗಿದ್ದಾನೆ. ಅವರ ಕಪ್ಪು ಹಣವನ್ನು ಬಿಳಿ ಹಣವನ್ನಾಗಿ ಪರಿವರ್ತನೆ ಮಾಡಿಕೊಡುತ್ತಿದ್ದ. ಅದಕ್ಕೆ ಇಂತಿಷ್ಟು ಕಮಿಷನ್ ಪಡೆಯುತ್ತಿದ್ದ. ಹೀಗಾಗಿ ಶ್ರೀಕಿ ಈತನ ಜತೆ ಸ್ನೇಹ ಬೆಳೆಸಿದ್ದ. ತನ್ನ ಅಕ್ರಮ ವ್ಯವಹಾರಕ್ಕೆ ಅರವಿಂದರ್ ಸಿಂಗ್‌ನನ್ನು ಬಳಸಿಕೊಂಡಿದ್ದಾನೆ.
ಶ್ರೀಕಿಯ ಹೇಳಿಕೆ ಮೇಲೆ ಆರೋಪಿ ಸೆರೆ:
ಇ-ಪ್ರಕ್ಯೂರ್‌ವೆುಂಟ್ ಹ್ಯಾಕ್ ಪ್ರಕರಣ ಹಾಗೂ ಬಿಟ್‌ಕಾಯಿನ್ ಪ್ರಕರಣ ದಾಖಲಾಗುತ್ತಿದ್ದಂತೆ ಆರೋಪಿ ಬೇರೆ ಬೇರೆ ರಾಜ್ಯಗಳಲ್ಲಿ ತಲೆಮರೆಸಿ ಕೊಂಡು ಓಡಾಡುತ್ತಿದ್ದ. ಇತ್ತೀಚೆಗೆ ಶ್ರೀಕಿಯ ವಿಚಾರಣೆ ವೇಳೆ ಆತನ ಹೆಸರು ಬಾಯಿಬಿಟ್ಟಿದ್ದ. ಹೀಗಾಗಿ ಆರೋಪಿಯನ್ನು ಪಂಜಾಬ್‌ನಲ್ಲಿ ಬಂಧಿಸಲಾಗಿದೆ ಎಂದು ಸಿಐಡಿ ಮೂಲಗಳು ತಿಳಿಸಿವೆ. ಇ-ಪ್ರಕ್ಯೂರ್‌ವೆುಂಟ್ ವೆಬ್‌ಸೈಟ್ ಹ್ಯಾಕ್ ಹಾಗೂ ವಂಚನೆ ಕುರಿತು ಸಿಐಡಿ ಸೈಬರ್ ಕ್ರೈಂ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು