Advertisement
ಆಧಾರ್ ಅನಂತರ ಕೆ2ನಲ್ಲಿಯೂ ಉಡುಪಿ ಜಿಲ್ಲೆ ಸರಕಾರದ ಮಹತ್ವದ ಯೋಜನೆಯನ್ನು ಪ್ರಾಯೋಗಿಕವಾಗಿ ಸಮರ್ಪಕವಾಗಿ ಜಾರಿಗೊಳಿಸು ವಲ್ಲಿ ಸಫಲವಾದಂತಾಗಿದೆ. ಈ ಹಿಂದೆ ಆಧಾರ್ ಯೋಜನೆ ಜಾರಿಗೂ ಉಡುಪಿ ಪ್ರಾಯೋಗಿಕ ಜಿಲ್ಲೆಯಾಗಿತ್ತು. ಕೆ2 ಪಾವತಿ ವ್ಯವಸ್ಥೆಯನ್ನು ಜಾರಿಗೆ ತರಲು ಉಡುಪಿ ಜತೆಗೆ ಗದಗವನ್ನೂ ಆಯ್ಕೆ ಮಾಡಲಾಗಿದ್ದು, ಇವೆರಡೂ ಯಶ ಸಾಧಿಸಿವೆ.
ಈಗಾಗಲೇ ಎಪ್ರಿಲ್‌ನಿಂದ ಖಜಾನೆ ಇಲಾಖೆಯ ವೇತನ ಕೆ2ನಲ್ಲಿ ಪಾವತಿಯಾಗುತ್ತಿದೆ. ಈ ತಿಂಗಳು ಅಬಕಾರಿ, ನೋಂದಣಿ ವಿಭಾಗ, ವಾಣಿಜ್ಯ ತೆರಿಗೆ, ಸಾರಿಗೆ ಹೀಗೆ ನಾಲ್ಕು ಇಲಾಖೆಗಳ ವೇತನ ಇದರಲ್ಲೇ ಪಾವತಿಯಾಗಲಿದೆ. ಮುಂದಿನ ಹಂತ ಗಳಲ್ಲಿ ಎಲ್ಲ ಇಲಾಖೆಗಳ ವೇತನ ಕೂಡ ಹೀಗೇ ಪಾವತಿಯಾಗಲಿದೆ. ಉಡುಪಿಯ ಅನಂತರ ಬೀದರ್, ಧಾರವಾಡ, ಚಿತ್ರದುರ್ಗಾ ಬಳ್ಳಾರಿ, ಚಿಕ್ಕಬಳ್ಳಾಪುರ, ಮಂಡ್ಯ, ಬೆಂಗಳೂರು ಗ್ರಾಮಾಂತರ ಮತ್ತು ಆ ಬಳಿಕ ಎ.1ರಿಂದ ಉಳಿದೆಲ್ಲ ಜಿಲ್ಲೆಗಳಲ್ಲಿ ಜಾರಿಗೆ ತರಲಾಗಿದೆ.
Related Articles
ಉಡುಪಿ ನಗರಸಭೆ, ಕುಂದಾಪುರ, ಕಾರ್ಕಳ ಮತ್ತು ಕಾಪು ಪುರಸಭೆ ಹಾಗೂ ಸಾಲಿಗ್ರಾಮ ಪ.ಪಂ.ಗಳಿಗೆ ಸಂಬಂಧಿಸಿದ ವೇತನ ಮತ್ತು ವೇತನೇತರ ಪಾವತಿಗಳು ಮೇ ತಿಂಗಳಿನಿಂದ ಖಜಾನೆ 2ನಲ್ಲಿಯೇ ಆನ್‌ಲೈನ್ ಮೂಲಕ ನಡೆಯುತ್ತಿವೆ. ಮುಂದಿನ ಹಂತದಲ್ಲಿ ಗ್ರಾ.ಪಂ.ಗಳಲ್ಲಿಯೂ ಇದೇ ವ್ಯವಸ್ಥೆ ಜಾರಿಗೆ ಬರುವ ಸಾಧ್ಯತೆಗಳಿವೆ.
Advertisement
ನೇರ ಜಮೆ, ಚೆಕ್ ಪದ್ಧತಿ ರದ್ದು ಕೆ2 ಅಂತಾರಾಷ್ಟ್ರೀಯ ಹಣಕಾಸು ನಿರ್ವಹಣಾ ವ್ಯವಸ್ಥೆ (ಐಎಫ್ಎಂಎಸ್) ಅಡಿಯಲ್ಲಿ ಅನುಷ್ಠಾನ ಗೊಂಡಿದೆ. ಅಂತರ್ಜಾಲದ ಮೂಲಕವೇ ನಡೆಯುವ ಇದರಲ್ಲಿ ಮಧ್ಯವರ್ತಿಗಳಿಗೆ ಅವಕಾಶವಿಲ್ಲ. ಸರಕಾರದ ವಿವಿಧ ಯೋಜನೆಗಳ ಫಲಾನುಭವಿಗಳು ಮತ್ತು ವಿವಿಧ ಇಲಾಖೆಗಳಿಗೆ ಸರಕು ಸಾಮಗ್ರಿಗಳ ಸರಬರಾಜು ಮತ್ತು ಸೇವೆ ನೀಡುವವರ ಖಾತೆಗೆ ನೇರವಾಗಿ ಹಣ ಜಮೆಯಾಗುತ್ತದೆ. ಜಿಲ್ಲಾ ಖಜಾನೆಯಿಂದ ಚೆಕ್ ನೀಡುವ ಪದ್ಧತಿ ರದ್ದಾಗುತ್ತದೆ. ರಾಜ್ಯಮಟ್ಟದಲ್ಲಿ ಇಲಾಖೆಗಳ ಪಾವತಿ ಕೆ2ಗೆ ಎರಡು ವರ್ಷಗಳ ಹಿಂದೆಯೇ ಜೋಡಣೆಯಾಗಿತ್ತು. ಈಗ ಜಿ.ಪಂ., ತಾ.ಪಂ.ಗಳು ಕೂಡ ಇದರಡಿ ಬಂದು ಪಾರದರ್ಶಕತೆ ಕಾಯ್ದುಕೊಳ್ಳುವಲ್ಲಿ ಮಹತ್ವದ ಹೆಜ್ಜೆ ಇರಿಸಿದಂತಾಗುತ್ತಿದೆ. ಕೆ2 ಇ-ಪಾವತಿ ಪ್ರಯೋಜನ
– ಸರಬರಾಜುದಾರರು/ ಗುತ್ತಿಗೆದಾರರ ಖಾತೆಗೆ ನೇರ ಪಾವತಿ.
– ಫಲಾನುಭವಿ/ಸರಬರಾಜುದಾರರಿಗೆ ತ್ವರಿತ ಪಾವತಿ
– ಮಧ್ಯವರ್ತಿಗಳಿಗೆ ಅವಕಾಶವಿಲ್ಲ
– ಪಾರದರ್ಶಕತೆ ತಂದು ಭ್ರಷ್ಟಾಚಾರಕ್ಕೆ ಕಡಿವಾಣ ಸಾಧ್ಯ
– ಸಿಬಂದಿಯ ಬಿಲ್ ಪ್ರಕ್ರಿಯೆಯ ಹೆಚ್ಚುವರಿ ಹೊರೆ ಇಳಿಕೆ
– ಫಲಾನುಭವಿಗಳ ಖಾತೆಗೆ ನೇರ ಜಮೆ ಜಿ.ಪಂ. ಮತ್ತು ತಾ.ಪಂ. ಮಟ್ಟದಲ್ಲಿಯೂ ಕೆ2 ವ್ಯವಸ್ಥೆ ಇಡೀ ರಾಜ್ಯದಲ್ಲಿ ಎಪ್ರಿಲ್‌ನಿಂದ ಜಾರಿಗೊಂಡಿದೆ. ಉಡುಪಿಯಲ್ಲಿ ಕೆ2 ವ್ಯವಸ್ಥೆ ನವೆಂಬರ್‌ನಲ್ಲಿ ಜಾರಿಯಾಗಿ ಕಳೆದ ಆರ್ಥಿಕ ವರ್ಷದಲ್ಲಿ ಅದರ ಪ್ರಕ್ರಿಯೆ ಪೂರ್ಣಗೊಂಡಿದೆ. ಈ ತಿಂಗಳು 4 ಇಲಾಖೆಗಳ ವೇತನ ಕೂಡ ಕೆ2 ವ್ಯಾಪ್ತಿಗೆ ಬರಲಿದೆ.
– ಸಾವಿತ್ರಿ, ಜಿಲ್ಲಾ ಖಜಾನಾಧಿಕಾರಿ