Advertisement
ತಾಲೂಕಿನ ಕ್ಯಾಲನೂರು ರೇಷ್ಮೆ ಗೂಡು ಮಾರುಕಟ್ಟೆಗೆ ಭೇಟಿ ನೀಡಿದ ನಂತರ ಕೋಲಾರಗೂಡು ಮಾರುಕಟ್ಟೆಗೆ ಬಂದ ಆಯುಕ್ತಪೆದ್ದಪ್ಪಯ್ಯ ಮಾರುಕಟ್ಟೆ ಅಧಿಕಾರಿಗಳಿಂದ ಮಾಹಿತಿ ಪಡೆದರು.
Related Articles
Advertisement
ಶೌಚಗೃಹದ ವ್ಯವಸ್ಥೆ ಮಾಡಿ: ಸರ್ಕಾರಿರೇಷ್ಮೆಗೂಡು ಮಾರುಕಟ್ಟೆಯ ಅವ್ಯವಸ್ಥೆಯ ಬಗ್ಗೆಗಮನ ಸೆಳೆದ ರೇಷ್ಮೆ ಬೆಳೆಗಾರರ ಅಭಿವೃದ್ಧಿಸಂಘದ ಅಧ್ಯಕ್ಷ ನಾಗನಾಳ ಶ್ರೀನಿವಾಸ್, ಮಳೆಬಂದಾಗ ನೀರು ಸೋರಿ ಸಮಸ್ಯೆ ಆಗುತ್ತಿದೆ. ಶೌಚಗೃಹದ ವ್ಯವಸ್ಥೆ ಕಲ್ಪಿಸಬೇಕು ಎಂದು ಮನವಿ ಮಾಡಿದರು.
ಸೋಂಕು ನಿವಾರಕ ಸಿಂಪಡಿಸಿ: ಕೋಲಾರ ಮತ್ತು ಕ್ಯಾಲನೂರು ರೇಷ್ಮೆ ಗೂಡುಮಾರುಕಟ್ಟೆಯಲ್ಲಿ ರೇಷ್ಮೆಗೆ ಸಂಬಂ ಧಿಸಿದಸೋಂಕುನಿವಾರಕ, ಬ್ಲೀಚಿಂಗ್ ಇನ್ನಿತರೆ ವಸ್ತುಗಳಮಾರಾಟಕ್ಕೆ ಮಳಿಗೆ ತೆರೆಯಲು ಅವಕಾಶಕಲ್ಪಿಸುವಂತೆ ಕೋರಿದರು. ಇದಕ್ಕೆ ಸ್ಪಂದಿಸಿದಆಯು ಕ್ತರು ಪ್ರಸ್ತಾವನೆ ಸಲ್ಲಿಸುವಂತೆ ಸೂಚನೆ ನೀಡಿದರು.
ರೇಷ್ಮೆ ಇಲಾಖೆ ಉಪನಿರ್ದೇಶಕರ ಕಚೇರಿಗೆ ಆಯುಕ್ತರು ಭೇಟಿ ನೀಡಿದಾಗ ಕಚೇರಿಶಿಥಿಲಗೊಂಡಿರುವ ಕುರಿತು ಅಧಿಕಾರಿಗಳುಗಮನ ಸೆಳೆದಾಗ ದುರಸ್ತಿ ಸಂಬಂಧ ಪ್ರಸ್ತಾವನೆ ಸಲ್ಲಿಸುವಂತೆ ನಿರ್ದೇಶನ ನೀಡಿದರು.
ಸೋಂಕು ನಿವಾರಕ ಬಿಡುಗಡೆ: ಇತ್ತೀಚಿನ ದಿನಗಳಲ್ಲಿ ರೇಷ್ಮೆ ಹುಳುಗಳಿಗೆ ಸುಣ್ಣಕಟ್ಟು ರೋಗ ಬಾಧಿಸುತ್ತಿರುವುದರಿಂದ ಅಗತ್ಯ ಸೋಂಕು ನಿವಾರಕ ಒದಗಿಸಬೇಕೆಂದು ಕೋರಿದಾಗ ಸ್ಪಂದಿಸಿದ ಆಯುಕ್ತರು, ಹಿಂದೆ ಪ್ರಕರಣಕೋರ್ಟ್‌ನಲ್ಲಿದ್ದರಿಂದ ವಿಳಂಬವಾಯಿತು,ಪ್ರಸ್ತುತ ಜಾರಿಯಲ್ಲಿರುವ ಚುನಾವಣಾ ನೀತಿ ಸಂಹಿತೆ ಮುಕ್ತಾಯಗೊಂಡ ನಂತರ ಆಯಾತಾಲೂಕುಗಳಿಗೆ ಸೋಂಕು ನಿವಾರಕ ಬಿಡುಗಡೆ ಮಾಡಲಾಗುವುದು ಎಂದು ಹೇಳಿದರು.
ರೇಷ್ಮೆ ಇಲಾಖೆ ಉಪನಿರ್ದೇಶಕ ಟಿ.ಎಂ.ಕಾಳಪ್ಪ,ಮಾರುಕಟ್ಟೆ ಉಪನಿರ್ದೇಶಕ ರಾಧಾಕೃಷ್ಣ,ಸಹಾಯಕ ನಿರ್ದೇಶಕ ಮಂಜುನಾಥ್, ಮಾರುಕಟ್ಟೆ ಅಧಿಕಾರಿ ವಿ.ಲಕ್ಷ್ಮೀ, ರೇಷ್ಮೆ ಮಂಡಳಿ ಮಾಜಿ ಸದಸ್ಯ ಚಿನ್ನಾಪುರ ನಾರಾಯಣಸ್ವಾಮಿ, ಜಿಲ್ಲಾ ರೇಷ್ಮೆ ಬೆಳೆಗಾರರ ಸಂಘದ ಪ್ರಧಾನ ಕಾರ್ಯದರ್ಶಿ ಶಂಕರೇಗೌಡ, ಉಪಾಧ್ಯಕ್ಷ ರಮೇಶ್, ತಾಲೂಕು ಕಾರ್ಯದರ್ಶಿ ಅಯ್ಯಪ್ಪ ಇತರರಿದ್ದರು.