Advertisement

ದೇವಹಳ್ಳಿ ತಾ.ಕಚೇರಿಯಲ್ಲಿ ಇ-ಆಫೀಸ್‌ ವ್ಯವಸ್ಥೆ

12:15 PM Dec 13, 2019 | Suhan S |

ದೇವನಹಳ್ಳಿ : ನೆಲಮಂಗಲ ತಾಲೂಕಿನ ನಂತರ ಜಿಲ್ಲಾ ಕೇಂದ್ರ ದೇವನಹಳ್ಳಿ ತಾಲೂಕು ಕಚೇರಿಯಲ್ಲೂ ಕಾಗದ ರಹಿತ ಆಡಳಿತಕ್ಕೆ ಸಜ್ಜಾಗಿದ್ದು, ಇನ್ಮುಂದೆ ಎಲ್ಲಾ ವ್ಯವಹಾರಗಳು ಇ-ಆಫೀಸ್‌ ಮೂಲಕವೇ ನಡೆಯಲಿವೆ ಎಂದು ತಹಶೀಲ್ದಾರ್‌ ಅನಿಲ್‌ ಕುಮಾರ್‌ ತಿಳಿಸಿದರು.

Advertisement

ರಾಜ್ಯ ಸರ್ಕಾರ ಕಾಗದ ರಹಿತ ಆಡಳಿತಕ್ಕಾಗಿ ಜಾರಿಗೆ ತಂದಿರುವ ಇ-ಆಫೀಸ್‌ ತಂತ್ರಾಂಶವನ್ನು ಜಾರಿಗೆ ತಂದಿದ್ದು, ಅದರಂತೆ ತಾಲೂಕು ಕಚೇರಿ ಸಂಪೂರ್ಣ ಇ -ಆಫೀಸ್‌ ವ್ಯಾಪ್ತಿಗೆ ಒಳ ಪಡುವಂತೆ ಮಾಡಲಾಗಿದೆ. ಸಾರ್ವಜನಿಕರು ಇದರ ಸದುಪಯೋಗ ಪಡೆಯಬೇಕೆಂದು ತಹಶೀಲ್ದಾರ್‌ ಅನಿಲ್‌ ಕುಮಾರ್‌ ಅರೋಲಿಕರ್‌ ತಿಳಿಸಿದರು. ನಗರದ ತಾಲೂಕು ಕಚೇರಿಯಲ್ಲಿ ಕಂಪ್ಯೂಟರ್‌ ನಲ್ಲಿ ಇ-ಆಫೀಸ್‌ ಅರ್ಜಿಯನ್ನು ಅಪ್‌ಲೋಡ್‌ ಮಾಡುವುದರ ಇ-ಆಫೀಸ್‌ ವ್ಯವಸ್ಥೆಗೆ ಚಾಲನೆ ನೀಡಿ ಅವರು ಮಾತನಾಡಿದರು.

ಜಿಲ್ಲೆಯಲ್ಲಿ ಈಗಾಗಲೇ ನೆಲಮಂಗಲ ತಾ.ಕಚೇರಿಯಲ್ಲಿ ಇ-ಆಫೀಸ್‌ ತಂತ್ರಾಂಶದ ಮೂಲಕ ಕಾರ್ಯನಿರ್ವಹಿಸಲಾಗುತ್ತಿದೆ. ಈ ವವ್ಯಸ್ಥೆಯಿಂದ ತಾಲೂಕು ಕಚೇರಿಯ ಟಪಾಲಿಗೆ ಬಂದ ಅರ್ಜಿಯು ನನಗೆ ತಕ್ಷಣ ತಿಳಿಯುತ್ತದೆ. ಸಾರ್ವಜನಿಕರು ನೀಡುವ ಅರ್ಜಿಯನ್ನು ಸ್ಕ್ಯಾನ್ ಮಾಡುವುದರ ಮೂಲಕ ಇ-ಆಫೀಸ್‌ನಲ್ಲಿ ಸಂಗ್ರಹಿಸಲಾಗುತ್ತದೆ. ಯಾವ ಶಾಖೆಗೆ ತಲುಪಬೇಕೋ ಆ ಶಾಖೆ ವ್ಯಾಪ್ತಿಗೆ ಬರುತ್ತದೆ. ಸಾರ್ವಜನಿಕರಿಗೆ ಒಂದು ನಂಬರ್‌ ಅನ್ನು ನೀಡುತ್ತೇವೆ. ಆ ನಂಬರ್‌ ಅನ್ನು ಮೊಬೈಲ್‌ ನಲ್ಲಿಯೇ ಕೂತ ಜಾಗದಲ್ಲಿ ಪರಿಶೀಲಿಸಿ ತಮ್ಮ ಅರ್ಜಿ ನೀಡಿರುವುದು ಯಾವ ಹಂತದಲ್ಲಿ ಇದೆ ಎಂಬುವುದರ ಬಗ್ಗೆ ತಿಳಿದುಕೊಳ್ಳಬಹುದು. ಇ -ಆಫೀಸ್‌ ಮೂಲಕ ಪಾರದರ್ಶಕ , ಜನಸ್ನೇಹಿ ಕಚೇರಿಯಾಗಿ ಮಾರ್ಪಾಡಾಗಲು ಸಹಕಾರಿಯಾಗಲಿದ್ದು, ಮಧ್ಯವರ್ತಿಗಳ ಹಾವಳಿಗೆ ಬ್ರೇಕ್‌ಬ ಬೀಳಲಿದೆ ಎಂದರು.

ದಲ್ಲಾಳಿಗಳ ಹಾವಳಿಗೆ ಬ್ರೇಕ್‌: ಇನ್ಮುಂದೆ ಅಧಿಕಾರಿಗಳು ಯಾವುದೇ ಸಬೂಬು ಹೇಳುವುದು ಕಡಿಮೆ ಆಗುತ್ತದೆ. ನಿಗದಿತ ವೇಳೆಗೆ ಅರ್ಜಿಗಳು ವಿಲೇವಾರಿ ಆಗುತ್ತವೆ. ಪತ್ರ ವ್ಯವಹಾರ ಕಡಿಮೆಯಾಗಿ ಇ -ಆಫೀಸ್‌ ತಂತ್ರಾಂಶದಲ್ಲಿಯೇ ವ್ಯವಹಾರ ಮಾಡಬಹುದು ಎಂದರು.

ಅಲೆದಾಟ ತಪ್ಪಲಿದೆ: ಇ-ಆಫೀಸ್‌ನಿಂದ ಸಾರ್ವಜನಿಕರು ಮತ್ತು ರೈತರು ಕಚೇರಿಗೆ ಅಲೆದಾಡುವುದು ತಪ್ಪಲಿದೆ. ಕಡತ, ಅರ್ಜಿಗಳ ವಿಲೇವಾರಿ ವಿಳಂಬ ತಪ್ಪಿಸಲು ಈ ಸೌಲಭ್ಯ ಉತ್ತಮವಾಗಿದೆ. ಇ ಆಫೀಸ್‌ ನಲ್ಲಿ ಸರಿಯಾದ ಸಮಯಕ್ಕೆ ಅರ್ಜಿಗಳನ್ನು ವಿಲೇವಾರಿ ಮಾಡದಿದ್ದರೆ ಅಂತಹ ಅಧಿಕಾರಿಗಳ ಮೇಲೆ ಕ್ರಮ ಕೈ ಗೊಳ್ಳಬೇಕಾಗುತ್ತದೆ. ಟಪಾಲಿನಲ್ಲಿ ಸಲ್ಲಿಸಿದ ಅರ್ಜಿ ಕೇಸ್‌ ಗಳು ಸಿಬ್ಬಂಧಿಗಳು, ಶಿರಸ್ಥೆದಾರ್‌, ತಹಶೀಲ್ದಾರ್‌ ಅವರಿಗೆ ನೇರವಾಗಿ ಮಾಹಿತಿ ತಿಳಿಯಲಿದೆ ಎಂದು ಹೇಳಿದರು. ಈ ವೇಳೆ ಶಿರಸ್ಥೆದಾರ್‌ ನಿಸಾರ್‌ ಅಹಮದ್‌, ಗ್ರಾಮ ಲೆಕ್ಕಾಧಿಕಾರಿ ಮಂಜುನಾಥ್‌, ಹನುಮಂತ ರಾಯಪ್ಪ, ಮತ್ತಿತರರು ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next