Advertisement
ಈಗಿರುವ ಗ್ರಂಥಾಲಯ ಕಟ್ಟಡದ ಬಳಿಯಲ್ಲೇ 1 ಕೋ.ರೂ. ವೆಚ್ಚದಲ್ಲಿ ಸುಸಜ್ಜಿತ ಡಿಜಿಟಲ್ ಗ್ರಂಥಾಲಯ ವರ್ಷದ ಹಿಂದೆ ನಿರ್ಮಾಣವಾಗಿದೆ. ದೇಶವ್ಯಾಪಿ ಕೊರೊನಾ ವ್ಯಾಪಿಸಿಕೊಂಡ ಹಿನ್ನೆಲೆ, ಉಪಚುನಾವಣೆ ಇನ್ನಿತರ ಕಾರಣ ಗಳಿಂದ ಅದರ ಉದ್ಘಾಟನೆ ಈಡೇರಿರಲಿಲ್ಲ. ಅನಂತರ ಉದ್ಘಾಟನೆಗೆ ಸಿದ್ಧವಾಗುವ ಹೊತ್ತಲ್ಲೇ ಕೊರೊನಾ 2ನೇ ಅಲೆ ಕಾಡಿತ್ತು. ಇದರಿಂದ ಮತ್ತೆ ವಿಘ್ನ ಎದುರಾಗಿತ್ತು. ಈ ಎಲ್ಲ ಕಾರಣಕ್ಕೆ ಉದ್ಘಾಟನೆ ವಿಳಂಬವಾಗುತ್ತಲೇ ಬಂದಿದೆ. ಆದರೇ ಹಳೆ ಕಟ್ಟಡ ಶಿಥಿಲಗೊಂಡಿದ್ದರಿಂದ ಹೊಸ ಕಟ್ಟಡಕ್ಕೆ ಸ್ಥಳಾಂತರವಾಗುವುದು ಅನಿವಾರ್ಯವಾಗಿದೆ.
Related Articles
Advertisement
ಅತೀ ಹೆಚ್ಚು ಪುಸ್ತಕ ಸಂಗ್ರಹ :
ರಾಜ್ಯದಲ್ಲೇ ಹೆಚ್ಚು ಪುಸ್ತಕ ಹೊಂದಿ, ಮಾದರಿ ಗ್ರಂಥಾಯಲಗಳ ಎನ್ನುವ ಹೆಗ್ಗಳಿಕೆ ಉಡುಪಿ ಜಿಲ್ಲಾ ಗ್ರಂಥಾಲಯದ ಶಾಖೆಯಾದ ಕಾರ್ಕಳ ಗ್ರಂಥಾಲಯಕ್ಕಿದೆ. ಇಲ್ಲಿ ಈಗಿರುವುದು ತೀರಾ ಹಳೆಯ ಗ್ರಂಥಾಲಯ. ಜಿಲ್ಲಾ ಗ್ರಂಥಾಲಯದ ಕಾರ್ಕಳ ಶಾಖೆಯಲ್ಲಿ ಈಗ ಬರೋಬ್ಬರಿ 60 ಸಾವಿರ ಪುಸ್ತಕಗಳಿವೆ. ಸಾರ್ವಜನಿಕ ಗ್ರಂಥಾಲಯ ಇಲಾಖೆಯ ಈಗಿನ ಶಾಖಾ ಗ್ರಂಥಾಲಯವನ್ನು ಮುಖ್ಯಮಂತ್ರಿಯಾಗಿದ್ದ ವೀರಪ್ಪ ಮೊಲಿ 1994ರಲ್ಲಿ ಉದ್ಘಾಟಿಸಿದ್ದರು.
ಗ್ರಂಥಾಲಯ ಇಲಾಖೆ 3 ಪುಸ್ತಕಕ್ಕೆ 200 ರೂ.; 3 ಪುಸ್ತಕಕ್ಕೆ 250 ರೂ. ಶುಲ್ಕ ನಿಗದಿ ಮಾಡಿದೆ. ಒಬ್ಬ ಚಂದಾದಾರ 14 ದಿನಗಳವರೆಗೆ ಪುಸ್ತಕ ತನ್ನ ಬಳಿ ಇಟ್ಟುಕೊಂಡು ಹಿಂದಿರುಗಿಸಿ ಬೇರೆ ಪುಸ್ತಕ ಪಡೆಯ ಬಹುದಾಗಿದೆ.
ಗ್ರಂಥಾಲಯಕ್ಕೆ ಇಲಾಖೆ ಒಬ್ಬ ಖಾಯಂ :
ಗ್ರಂಥಾಲಯ ಅಧಿಕಾರಿ ಇದ್ದು ಇನ್ನಿಬ್ಬರು ಗೌರವಧನ ಆಧಾರದಲ್ಲಿ ಇರುವರು. ಅವರಲೊಬ್ಬರು ಸ್ವತ್ಛತ ಸಿಬಂದಿಯಾಗಿದ್ದು, ಗೌರವಧನ ಪಡೆಯುತ್ತಿರುವ ಸಿಬಂದಿಯ ವೇತನ ತೀರಾ ಕಡಿಮೆಯಿದೆ. ಸ್ವತ್ಛತ ಸಿಬಂದಿಗೂ ವೇತನ ಸಿಗುವುದು ಅತ್ಯಲ್ಪ.
ಗ್ರಂಥಾಲಯದಲ್ಲಿ ಹಲವು ಪುಸ್ತಕಗಳಿವೆ. ವಿವಿಧ ಸಂಘ- ಸಂಸ್ಥೆಗಳು ಪುಸ್ತಕಗಳನ್ನು ಗ್ರಂಥಾಲಯಕ್ಕೆ ನೀಡುತ್ತಿದ್ದು, ಈಗಿನ ಕಟ್ಟಡ ಪುಸ್ತಕಗಳಿಂದ ತುಂಬಿ ತುಳುಕುತ್ತಿದೆ. ಕಟ್ಟಡ ಶಿಥಿಲಗೊಳ್ಳುತ್ತ ಬರುತ್ತಿದ್ದು, ಮಳೆ ಬಂದಾಗ ನೀರು ಕಟ್ಟಡದೊಳಗೆ ಬಂದು ಅಮೂಲ್ಯ ಪುಸ್ತಕಕ್ಕೆ ಹಾನಿಯಾಗುತ್ತಿದೆ.
ಹೊಸ ಗ್ರಂಥಾಲಯ ಕಟ್ಟಡ ಸಹಿತ ಎಲ್ಲ ಕೆಲಸಗಳು ಪೂರ್ಣವಾಗಿ ಉದ್ಘಾಟನೆಯಷ್ಟೇ ಬಾಕಿಯಿದೆ. ಈ ಹಿಂದೆ ಹಲವು ಬಾರಿ ಉದ್ಘಾಟನೆಗೆ ಸಿದ್ಧತೆ ನಡೆಸಿದರೂ ಒಂದಲ್ಲ ಒಂದು ಕಾರಣಕ್ಕೆ ಅದು ಮುಂದೆ ಹೋಗಿದೆ. -ನಳಿನಿ ಜಿ.ಐ. , ಮುಖ್ಯ ಗ್ರಂಥಾಲಯಾಧಿಕಾರಿ ಜಿಲ್ಲಾ ಕೇಂದ್ರ ಗ್ರಂಥಾಲಯ ಉಡುಪಿ
-ಬಾಲಕೃಷ್ಣ ಭೀಮಗುಳಿ