Advertisement
ಇ-ಕೆವೈಸಿ ಮಾಡಿಸುವ ಉದ್ದೇಶ ಪಡಿತರ ಚೀಟಿದಾರರು ತಮ್ಮ ಇರುವಿಕೆಯ ಕುರಿತು ದೃಢೀಕರಣ ಮಾಡುವ ಪ್ರಕ್ರಿಯೆಯಾಗಿದೆ. ಎ.ಪಿ.ಎಲ್., ಬಿ.ಪಿ.ಎಲ್., ಅಂತ್ಯೋದಯ ಪಡಿತರ ಚೀಟಿ ಹೊಂದಿರುವ ಕುಟುಂಬಸ್ಥರು ನ್ಯಾಯಬೆಲೆ ಅಂಗಡಿಯಲ್ಲಿ ಇ-ಕೆವೈಸಿ ಮಾಡಿಸಬೇಕಿದೆ. 2021ರ ಆಗಸ್ಟ್ ತಿಂಗಳ ವರೆಗೆ ಇ-ಕೆವೈಸಿ ಅವಕಾಶ ನೀಡ ಲಾಗಿದ್ದು, ಆ ಬಳಿಕ ಇ-ಕೆವೈಸಿ ಮಾಡದ ಪಡಿತರ ಚೀಟಿದಾರರ ಪಡಿತರವನ್ನು ತಡೆಹಿಡಿ ಯಲಾಗುತ್ತದೆ.
Related Articles
Advertisement
ಬೆಳ್ತಂಗಡಿ ತಾ| ನಲ್ಲಿ ಒಟ್ಟು 62,844 ಪಡಿತರ ಚೀಟಿಗಳಲ್ಲಿ 37,718 ಪಡಿತರ ಚೀಟಿಗಳ ಇ-ಕೆವೈಸಿ ಪೂರ್ಣಗೊಂಡಿದೆ. ಒಟ್ಟು 2,49,068 ಪಡಿತರ ಚೀಟಿ ಫಲಾನು ಭವಿಗಳು ಇದ್ದು, 1,45,189 ಮಂದಿಯ ಇ-ಕೆವೈಸಿ ಪೂರ್ಣಗೊಂಡಿದೆ. ತಾ|ನ ಎಲ್ಲ 68 ನ್ಯಾಯಬೆಲೆ ಅಂಗಡಿಗಳಲ್ಲಿ ಇ-ಕೆವೈಸಿ ಕಾರ್ಯ ನಡೆಸ ಲಾಗುತ್ತಿದ್ದು, ಇ-ಕೆವೈಸಿ ಬಾಕಿ ಇರುವ ಫಲಾನುಭವಿಗಳು ಆ.10ರ ಒಳಗೆ ತಮ್ಮ ಬಯೋ ದೃಢೀಕರಣವನ್ನು ಕಡ್ಡಾಯ ವಾಗಿ ನೀಡುವಂತೆ ಆಹಾರ ಇಲಾಖೆ ಸೂಚಿಸಿದೆ. ಈ ಕುರಿತು ಸಂದೇಹಗಳು ಇದ್ದಲ್ಲಿ 08256-232383 ದೂರವಾಣಿ ಸಂಪರ್ಕಿಸಬಹುದಾಗಿದೆ.
ಪಡಿತರ ಚೀಟಿದಾರರು ತಮ್ಮ ಇರುವಿಕೆಯನ್ನು ಖಾತ್ರಿ ಪಡಿಸಲು ಬಯೋ- ದೃಢೀಕರಣ ನೀಡುವ ಇ-ಕೆವೈಸಿ ಮಾಡಿಸಬೇಕು. ಆಗಸ್ಟ್ 10ರ ವರೆಗೆ ಪ್ರಕ್ರಿಯೆ ಚಾಲ್ತಿಯಲ್ಲಿದ್ದು ಬಾಕಿ ಇರುವವರು ಕಡ್ಡಾಯವಾಗಿ ಮಾಡಬೇಕು. ಇ-ಕೆವೈಸಿ ಮಾಡಿಸದಿದ್ದಲ್ಲಿ ಪಡಿತರ ಹಂಚಿಕೆ ತಡೆಹಿಡಿಯಲಾಗುತ್ತದೆ. -ವಿಶ್ವ ಕೆ., ಆಹಾರ ನಿರೀಕ್ಷಕರು, ಬೆಳ್ತಂಗಡಿ
-ವಿಶೇಷ ವರದಿ