Advertisement

5 ಕೋಟಿ ರೂ. ವಹಿವಾಟಿಗಿಂತ ಹೆಚ್ಚಿನ ಉದ್ದಿಮೆಗೆ ಇ-ಇನ್‌ವಾಯ್ಸ ಕಡ್ಡಾಯ

08:56 PM Oct 11, 2022 | Team Udayavani |

ನವದೆಹಲಿ: ಮುಂದಿನ ಜ.1ರಿಂದ ವಾರ್ಷಿಕವಾಗಿ 5 ಕೋಟಿ ರೂ.ಗಳಿಗಿಂತ ಹೆಚ್ಚು ವಹಿವಾಟು ಇರುವ ಉದ್ದಿಮೆಗಳಿಗೆ ಇ-ಇನ್‌ವಾಯ್ಸ ಸಲ್ಲಿಸುವುದು ಕಡ್ಡಾಯ. ಮುಂದಿನ ವಿತ್ತೀಯ ವರ್ಷದಿಂದ ವಾರ್ಷಿಕವಾಗಿ 1 ಕೋಟಿ ರೂ.ಗಳಿಗಿಂತ ಹೆಚ್ಚು ವಹಿವಾಟು ಇರುವ ಉದ್ದಿಮೆಗಳಿಗೆ ಇ-ಇನ್‌ವಾಯ್ಸ ಕಡ್ಡಾಯ ಮಾಡಲು ಉದ್ದೇಶಿಸಿರುವಂತೆಯೇ ಈ ನಿರ್ಧಾರ ಪ್ರಕಟವಾಗಿದೆ.

Advertisement

ಇ-ಇನ್‌ವಾಯ್ಸಗಳನ್ನು ಜಿಎಸ್‌ಟಿ ನೆಟ್‌ವರ್ಕ್‌ ನಿರ್ವಹಿಸುವ ಇನ್‌ವಾಯ್ಸ ನೋಂದಣಿ ವೆಬ್‌ಸೈಟ್‌ (ಐಆರ್‌ಪಿ) ಮೂಲಕ ದೃಢೀಕರಿಸಬೇಕಾಗಿದೆ. ಈ ಹಿನ್ನೆಲೆಯಲ್ಲಿ ಡಿಸೆಂಬರ್‌ ಒಳಗಾಗಿ ವೆಬ್‌ಸೈಟ್‌ನ ಸಾಮರ್ಥ್ಯ ಹೆಚ್ಚಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು ಎಂದು ಜಿಎಸ್‌ಟಿ ಮಂಡಳಿ ಐಆರ್‌ಪಿ ತಂತ್ರಜ್ಞಾನ ನೀಡುವ ಸಂಸ್ಥೆಗೆ ಈಗಾಗಲೇ ಸೂಚಿಸಲಾಗಿದೆ.

ಇ-ಇನ್‌ವಾಯ್ಸನಿಂದಾಗಿ ತೆರಿಗೆ ಸೋರಿಕೆಯಾಗುವುದರ ಮೇಲೆ ಮತ್ತಷ್ಟು ನಿಗಾ ಇರಿಸಿ, ಅದರ ಪ್ರಮಾಣವನ್ನು ಗಣನೀಯವಾಗಿ ತಗ್ಗಿಸಲು ಸಾಧ್ಯವಿದೆ. ಜಿಎಸ್‌ಟಿಯ ಮಂಡಳಿಯ ಸಭೆಯಲ್ಲಿ ಕೂಡ ಹಂತ ಹಂತವಾಗಿ ಈ ವ್ಯವಸ್ಥೆ ಜಾರಿಗೆ ತರುವ ಬಗ್ಗೆ ತೀರ್ಮಾನವಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next