Advertisement
ಕೇವಲ ಕಾಗದ ಪತ್ರಗಳಲ್ಲಿ ಮೂಲಭೂತ ಸೌಲಭ್ಯಕ್ಕೆ ಇಷ್ಟು ಅನುದಾನ ನೀಡಿದ್ದೇವೆ ಎಂದು ಹೇಳಿದರೆ ಸಾಲ ದು, ಗ್ರಾಮಗಳಲ್ಲಿ ಮೊದಲು ಮೂಲಭೂತ ಸೌಕರ್ಯ ಕಲ್ಪಿಸಿ, ಜನಪ್ರತಿನಿಧಿಗಳು, ಅಧಿಕಾರಿಗಳು ಮಾತನಾಡ ಬೇಕು ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
Related Articles
Advertisement
ಸ್ಮಶಾನಕ್ಕೆ ಬೌಂಡ್ರಿ ಫಿಕ್ಸ್ ಮಾಡ್ತಿಲ್ಲ: ಸರ್ಕಾರದಿಂದ ಗ್ರಾಮದಲ್ಲಿ ಸ್ಮಶಾನಕ್ಕಾಗಿ ಸರ್ವೆ ನಂ.42ರಲ್ಲಿಯ 39 ಗುಂಟೆ ಜಾಗವನ್ನು ಕಾಯ್ದಿರಿಸಲಾಗಿದೆ. ಆದರೆ, ಪ್ರಭಾವಿಗಳ ಒತ್ತಡದಿಂದ ಬೌಂಡ್ರಿ ಫಿಕ್ಸ್ ಮಾಡದೆ ತಾಲೂಕು ತಹಶೀಲ್ದಾರ್ ಆಗಲಿ, ಜಾಲಿಗೆ ಗ್ರಾಪಂ ಪಿಡಿಒ ಅಥವಾ ಸ್ಥಳೀಯ ಜನಪ್ರತಿನಿಧಿಗಳಾಗಲೀ ಸಂಪೂ ರ್ಣ ವಾಗಿ ವಿಫಲರಾಗಿದ್ದಾರೆ. ಸುಮಾರು 100 ವರ್ಷಕ್ಕೂ ಮೇಲ್ಪಟ್ಟು ಗ್ರಾಮದಲ್ಲಿ ಪರಿಶಿಷ್ಟ ಜಾತಿ ಜನಾಂಗದವರು ವಾಸವಾಗಿದ್ದು, ಇದುವರೆಗೂಗ್ರಾಮದಲ್ಲಿ ಮೂಲಭೂತ ಸೌಕರ್ಯಗಳಿಲ್ಲದೆ, ಅಕ್ಕಪಕ್ಕದ ಗ್ರಾಮಗಳ ಮೇಲೆ ಅವಲಂಬಿತರಾಗಿ ಬದುಕು ನಡೆಸುವಂತ ದುಸ್ಥಿತಿ ಎದುರಾಗಿದೆ. ಹೌದು, ಇಂಥ ಪರಿಸ್ಥಿತಿ ಇರುವುದು ಬೇರೆಲ್ಲೂ ಅಲ್ಲ, ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಹೊಂದಿರುವ ದೇವನಹಳ್ಳಿ ತಾಲೂಕಿನ ಐವಿಸಿ ರಸ್ತೆ ಸಂಪರ್ಕದ ಇ-ಹೊಸೂರು ಗ್ರಾಮಸ್ಥರ ಸಮಸ್ಯೆಯಾಗಿದೆ. ಸ್ವಾತಂತ್ರ್ಯ ಬಂದು 74 ವರ್ಷ ಕಳೆದರೂ ಗ್ರಾಮಕ್ಕೆ ಶುದ್ಧ ಕುಡಿ ಯುವ ನೀರಿನ ಭಾಗ್ಯವಿಲ್ಲದಿರುವುದು ದೌರ್ಭಾಗ್ಯವಾಗಿದೆ. ಕುಡಿಯುವ ನೀರಿಗೂ ಪರದಾಟ: ಬೋರ್‌ವೆಲ್ ನೀರು ಕುಡಿಯಲು ಯೋಗ್ಯವಿಲ್ಲದ ಕಾರಣದಿಂದ ಗ್ರಾಮಸ್ಥರು ಶುದ್ಧ ಕುಡಿಯುವ ನೀರಿಗಾಗಿ ಅಕ್ಕಪಕ್ಕದ ದೂರದ ಗ್ರಾಮಗಳಿಗೆ ಹೋಗಿ, ಅಲ್ಲಿನ ಶುದ್ಧ ಕುಡಿಯುವ ನೀರಿನ ಘಟಕದಿಂದ ಕುಡಿಯುವ ನೀರು ತಂದು ಉಪಯೋಗಿಸುತ್ತಿದ್ದು, ಬೋರ್‌ವೆಲ್ ನೀರನ್ನು ಇತರೆ ಬಳಕೆಗೆ ಬಳಸಿಕೊಳ್ಳಲಾಗುತ್ತಿದೆ. ಈ ಗ್ರಾಮದಲ್ಲಿ ಕುಡಿಯುವ ನೀರಿಗೂ ಪರದಾಟ ತಪ್ಪಿಲ್ಲ. ಬಸ್ ಸೌಕರ್ಯವಿಲ್ಲದೆ ಗ್ರಾಮದ ಸುಮಾರು ಕಿ.ಮೀ. ನಡೆದುಕೊಂಡೇ ಹೋಗುವ ಪರಿಸ್ಥಿತಿ ಇದೆ ಎಂದು ಗ್ರಾಮಸ್ಥರು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ. ಇ-ಹೊಸೂರು ಗ್ರಾಮಕ್ಕೆ ತಾವು ಶಾಸಕರಾದ ಮೇಲೆ 50 ಲಕ್ಷ ರೂ.ಗಳ ಕಾಂಕ್ರಿಟ್ ರಸ್ತೆ ಕಾಮಗಾರಿ ಮಾಡಿಸಲಾಗಿದೆ. ಸ್ವಾತಂತ್ರ್ಯ ಬಂದು 75 ವರ್ಷ ಕಳೆದಿದ್ದರೂ ಅಷ್ಟು ಅಭಿವೃದ್ಧಿ ಕೆಲಸಗಳು ಆ ಹಳ್ಳಿಯಲ್ಲಿ ಆಗಿರಲಿಲ್ಲ. ಸ್ಮಶಾನ ಜಾಗ ಮಂಜೂರಾತಿಗೆ ಸಂಬಂಧಪಟ್ಟಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ. ತಾಲೂಕಿನ 298 ಹಳ್ಳಿಗಳ ಅಭಿವೃದ್ಧಿಗೆ ಸರ್ಕಾರದಿಂದ ಬರುವ ಅನುದಾನಗಳನ್ನು ಹಂಚಿಕೆ ಮಾಡಿ ನೀಡಲಾಗುತ್ತದೆ.
● ಎಲ್.ಎನ್.ನಾರಾಯಣಸ್ವಾಮಿ, ಶಾಸಕ ಗ್ರಾಮಗಳ ಅಭಿವೃದ್ಧಿಗೆ ಸರ್ಕಾರ ಕೋಟ್ಯಂತರ ರೂ. ಖರ್ಚು ಮಾಡುತ್ತಿದ್ದರೂ, ಇ-ಹೊಸೂರು ಗ್ರಾಮದಲ್ಲಿ ಮೂಲಭೂತ ಸೌಲಭ್ಯ ಕೊರತೆ ಎದ್ದು ಕಾಣುತ್ತಿದೆ. ಇನ್ನಾದರೂ ಸರ್ಕಾರಗಳು ಗ್ರಾಮಗಳ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಬೇಕು.
● ನಾರಾಯಣಸ್ವಾಮಿ, ವಕೀಲ ವಿಮಾನ ನಿಲ್ದಾಣ ಹೊಂದಿರುವ ತಾಲೂಕಿನಲ್ಲಿ ಇಂದಿಗೂ ಗ್ರಾಮಗಳು ಅಭಿವೃದ್ಧಿ ಕಾಣದೆ ಮೂಲೆಗುಂಪಾಗಿವೆ. ಶತಮಾನ ಕಳೆದರೂ ಈ ಗ್ರಾಮದಲ್ಲಿನ ಜನರು ಸೌಕರ್ಯದಿಂದ ವಂಚಿತರಾಗಿದ್ದಾರೆ. ಮುಖ್ಯವಾಗಿ ಗ್ರಾಮದಲ್ಲಿ ಕುಡಿಯುವ ನೀರು, ಬಸ್ ಸೌಲಭ್ಯ, ಸ್ಮಶಾನ, ಹೈಮಾಸ್ಕ್ ಲೈಟ್ ಅಳವಡಿಕೆ ಮಾಡುವ ಅವಶ್ಯವಿದೆ. ಕೂಡಲೇ ಅಧಿಕಾರಿಗಳು, ಜನಪ್ರತಿನಿಧಿಗಳು ಗ್ರಾಮಕ್ಕೆ ಭೇಟಿ ನೀಡಿ, ಇಲ್ಲಿನ ಸಮಸ್ಯೆಗಳನ್ನು ಪರಿಹರಿಸಬೇಕು.
● ಮುರಳಿ, ಇ-ಹೊಸೂರು ಸ್ಮಶಾನ ಜಾಗಕ್ಕೆ ಸಂಬಂಧಿಸಿದಂತೆ, ಕುಂದಾಣ ನಾಡ ಕಚೇರಿಯಿಂದ ಬಂದಿರುವ ಶಿಫಾರಸ್ಸಿನ ಪತ್ರವನ್ನು ಪರಿಶೀಲಿಸಿ, ಕೂಡಲೇ ಜಿಲ್ಲಾಧಿಕಾರಿಗಳ ಗಮನಕ್ಕೆ ತಂದು ಮುಂದಿನ ಕ್ರಮವನ್ನು ಕೈಗೊಳ್ಳಲಾಗುವುದು.
● ತೇಜಸ್ ಕುಮಾರ್, ಉಪವಿಭಾಗಾಧಿಕಾರಿ ●ಎಸ್.ಮಹೇಶ್