Advertisement
ಗೂಗಲ್ ತನ್ನ ಹೊಸ ಶಾಪಿಂಗ್ ಸೇವೆಗೆ ಅನುಕೂಲವಾಗುವ ರೀತಿಯಲ್ಲಿ ತನ್ನ ಸರ್ಚ್ ಇಂಜಿನ್ ಫಲಿತಾಂಶಗಳು ಮೂಡಿ ಬರುವ ಹಾಗೆ ಕೈಚಳಕ ತೋರಿದೆ ಎಂದು ಆರೋಪಿಸಲಾಗಿದ್ದು ಈ ಕೃತ್ಯವನ್ನು ಅದು ಕಡಿಮೆ ವೆಚ್ಚ ಹೋಲಿಕೆಯ ವೆಬ್‌ಸೈಟ್‌ಗಳನ್ನು ಬಲಿಕೊಡುವ ರೀತಿಯಲ್ಲಿ ಮಾಡಿದೆ ಎಂದು ಆರೋಪಿಸಲಾಗಿದೆ.
Related Articles
Advertisement
ಗೂಗಲ್ ತನ್ನ ಸರ್ಚ್ ಇಂಜಿನ್ ಅನ್ನು ತನ್ನದೇ ಇತರ ಸೇವೆಗಳಿಗೆ (ವಿಶೇಷವಾಗಿ ಶಾಪಿಂಗ್ ಸೇವೆ) ಅನುಕೂಲಿಸುವ ರೀತಿಯಲ್ಲಿ ತೋರಿರುವ ತಾಂತ್ರಿಕ ಕೈಚಳಕವು ಏಕಸ್ವಾಮ್ಯ ಕಾನೂನುಗಳ ದುರ್ಬಳಕೆಯಾಗಿದ್ದು ಐರೋಪ್ಯ ಒಕ್ಕೂಟವು ಈ ಕುರಿತ ತನಿಖೆಯನ್ನು 2010ರಲ್ಲೇ ಆರಂಭಿಸಿತ್ತು. ಇದರಿಂದ ಇತರ ದರ-ವ್ಯತ್ಯಾಸದ ವೆಬ್‌ಸೈಟ್‌ಗಳು ಅಪಾರ ನಷ್ಟಕ್ಕೆ ಗುರಿಯಾಗಿದ್ದವು.
ಯುರೋಪ್ ಇಂಟರ್‌ನೆಟ್ ಸರ್ಚ್‌ನಲ್ಲಿ ಗೂಗಲ್ ಶೇ.90ರ ಪಾಲನ್ನು ಹೊಂದಿದೆ. ಹೀಗಾಗಿ ಇಂಟರ್‌ನೆಟ್ ಬಳಕೆದಾರರು ಅಂತರ್ಜಾಲವನ್ನು ಯಾವ ರೀತಿ ಜಾಲಾಡಬೇಕೆಂಬುದನ್ನು ನಿರ್ದೇಶಿಸುವ ಅತ್ಯಂತ ಪ್ರಬಲ ಉಪಕರಣ ಗೂಗಲ್ ಕೈಯಲ್ಲಿದೆ.