Advertisement
ಪೊಲೀಸ್ ಇಲಾಖೆಯಲ್ಲಿ 2019ರ ಜುಲೈನಲ್ಲಿ ಇ- ಫೈಲಿಂಗ್ ವ್ಯವಸ್ಥೆ ಅನು ಷ್ಠಾನಕ್ಕೆ ಬಂದಿತ್ತು. ಕೇಂದ್ರ ಸಿಐಡಿ ಕಚೇರಿ ಮತ್ತಿತರ ಕೆಲವು ಕಚೇರಿಗಳು ತತ್ ಕ್ಷಣದಿಂದಲೇ ಇ-ಫೈಲಿಂಗ್ ವ್ಯವಸ್ಥೆ ಆರಂಭಿಸಿದ್ದವು. ಮಂಗಳೂರು ಕಮಿ ಷನರ್ ಕಚೇರಿಯು 2019ರ ಅಕ್ಟೋಬರ್‌ನಿಂದ ಅದ್ಭುತ ಸಾಧನೆ ಇ-ಫೈಲಿಂಗ್ ವ್ಯವಸ್ಥೆಯನ್ನು ಜಾರಿಗೆ ತಂದಿತ್ತು. ಕೆಲವೇ ತಿಂಗಳಲ್ಲಿ ಮಂಗಳೂರು ಕಚೇರಿಯು ರಾಜ್ಯದ ಇತರ ಎಲ್ಲ ಪೊಲೀಸ್ ಕಚೇರಿಗಳನ್ನು ಹಿಂದಿಕ್ಕಿ ಅದ್ಭುತ ಸಾಧನೆ ಮಾಡಿದೆ. ಮಂಗಳೂರು ಪೊಲೀಸ್ ಕಮಿಷನರ್ ಕಚೇರಿಯ ಸಿಎಸ್‌ಬಿ (ಸಿಟಿ ಸ್ಪೆಷಲ್ ಬ್ರ್ಯಾಂಚ್) ವಿಭಾಗವನ್ನು ಹೊರತುಪಡಿಸಿ ಉಳಿದಂತೆ ಎಲ್ಲ ವಿಭಾಗಗಳನ್ನು ಇ- ಫೈಲಿಂಗ್ ವ್ಯಾಪ್ತಿಗೆ ತರಲಾಗಿದೆ.
Related Articles
2020ರ ಜೂ. 3ರ ವೇಳೆಗೆ ಮಂಗಳೂರು ಕಚೇರಿಯಲ್ಲಿ 42,803 ಕಡತಗಳನ್ನು ಇ-ಫೈಲ್ ಮಾಡಿ ಮೂವ್ ಮಾಡಲಾಗಿದೆ 46,162 ಕಡತಗಳಿಗೆ ಇ- ರಿಸಿಪ್ಟ್ ಮಾಡಲಾಗಿದೆ. ರಾಜ್ಯದ ಬೇರೆ ಯಾವುದೇ ಪೊಲೀಸ್ ಕಮಿಷನರ್ ಕಚೇರಿ, ಐಜಿಪಿ ಕಚೇರಿ ಅಥವಾ ಎಸ್‌ಪಿ ಕಚೇರಿಯಲ್ಲಿ ಇಷ್ಟೊಂದು ಪ್ರಮಾಣದ ಸಾಧನೆ ಆಗಿಲ್ಲ. ಪ್ರಥಮವಾಗಿ ಇ-ಫೈಲಿಂಗ್ ಆರಂಭಿಸಿದ ಬೆಂಗಳೂರಿನ ಸಿಐಡಿ ಕಚೇರಿ 2ನೇ ಸ್ಥಾನದಲ್ಲಿದೆ. ಸಿಐಡಿ ಕಚೇರಿಯಲ್ಲಿ ಜೂ. 3ರ ತನಕ 20,550 ಕಡತಗಳನ್ನು ಇ- ಫೈಲ್ ಮಾಡಿ ಮೂವ್ ಮಾಡಲಾಗಿದೆ ಹಾಗೂ 16,656 ಕಡತಗಳಿಗೆ ಇ-ರಿಸಿಪ್ಟ್ ಮಾಡಲಾಗಿದೆ. ಎಸ್‌ಪಿ ಕಚೇರಿಗಳ ಪೈಕಿ ಮಂಡ್ಯ ಜಿಲ್ಲೆ ಮುಂಚೂಣಿಯಲ್ಲಿದ್ದು, 14,311 ಕಡತಗಳನ್ನು ಇ- ಫೈಲ್ ಮಾಡಿ ಮೂವ್ ಮಾಡಲಾಗಿದೆ ಹಾಗೂ 6164 ಕಡತಗಳಿಗೆ ಇ-ರಿಸಿಪ್ಟ್ ಮಾಡಲಾಗಿದೆ. ದ್ವಿತೀಯ ಸ್ಥಾನದಲ್ಲಿರುವ ದ.ಕ. ಎಸ್‌ಪಿ ಕಚೇರಿಯಲ್ಲಿ 10,713 ಇ- ಫೈಲ್ ಮೂವ್ ಮಾಡಲಾಗಿದೆ ಹಾಗೂ 6,215 ಇ- ರಿಸಿಪ್ಟ್ ಮಾಡ ಲಾಗಿದೆ.
Advertisement
ಮಾದರಿಇ-ಫೈಲಿಂಗ್ ವ್ಯವಸ್ಥೆಯ ಸಾಧನೆಯಲ್ಲಿ ಮಂಗಳೂರು ಕಮಿಷನರ್ ಕಚೇರಿ ರಾಜ್ಯದಲ್ಲಿಯೇ ಮುಂಚೂಣಿ ಯಲ್ಲಿದ್ದು, ಮಾದರಿಯಾಗಿದೆ. ಎಂಟ್ರಿಯಿಂದ ಹಿಡಿದು ಡಿಸ್‌ಪ್ಯಾಚ್‌ವರೆಗಿನ ಪ್ರಕ್ರಿಯೆ 6-7 ತಾಸುಗಳಲ್ಲಿ ಮುಗಿಯುತ್ತದೆ. ಇದರಿಂದ ಸಾರ್ವಜನಿಕರಿಗೂ ಅನುಕೂಲವಾಗಿದೆ. ಕೇಂದ್ರ ಕಚೇರಿಗೂ ಅವತ್ತವತ್ತೇ ಕಡತಗಳು ರವಾನೆಯಾಗುತ್ತವೆ.
-ಡಾ| ಹರ್ಷ ಪಿ.ಎಸ್.
ಪೊಲೀಸ್ ಕಮಿಷನರ್ ಸುಸಜ್ಜಿತ ವ್ಯವಸ್ಥೆ
ಮಂಗಳೂರು ಕಚೇರಿ ಇ-ಫೈಲಿಂಗ್‌ನ ಸಾಧನೆಯಲ್ಲಿ ಮುಂದೆ ಇದೆ. ಪೊಲೀಸ್ ಆಯುಕ್ತರ ಉತ್ತೇಜನ ಮತ್ತು ಸಲಹೆ ಈ ಸಾಧನೆಗೆ ಪ್ರೇರಣೆ ಮತ್ತು ಕಾರಣ. 2019ರ ಜುಲೈನಲ್ಲಿ ಅಧಿಕಾರ ಸ್ವೀಕರಿಸಿದ ಕೂಡಲೇ ಅವರು ಇ- ಆಡಳಿತದ ಬಗ್ಗೆ ಸೂಚನೆ ನೀಡಿ ಅಗತ್ಯ ಸಹಕಾರದ ಭರವಸೆ ನೀಡಿದ್ದರು. ಸೆ. 30 ನಮಗೆ ಗಡುವು ವಿಧಿಸಿದ್ದರು. ಸೆ. 29ರಂದು ಪ್ರಾಯೋಗಿಕವಾಗಿ ಇ- ಫೈಲಿಂಗ್ ಆರಂಭಿಸಿದ್ದೆವು. ಅ. 1ರಿಂದ ಸುಸಜ್ಜಿತವಾಗಿ ಇ- ಫೈಲಿಂಗ್ ಫೈಲಿಂಗ್ ವ್ಯವಸ್ಥೆಯನ್ನು ಆರಂಭಿಸಿದ್ದೇವೆ.
-ರವಿಚಂದ್ರ
ಕಚೇರಿಯ ಸಹಾಯಕ ಆಡಳಿತಾಧಿಕಾರಿ