Advertisement

ಇ-ಶಿಕ್ಷಣ ಕೇಂದ್ರ ಉದ್ಘಾಟನೆ

02:41 PM Jun 02, 2019 | Team Udayavani |

ಹೊನ್ನಾವರ: ಹೊಸಾಡಿನ ಶರಾವತಿ ಪ್ರೌಢಶಾಲೆಯಲ್ಲಿ ಪ್ರಸಕ್ತ ಸಾಲಿನ ಶಾಲಾ ಪ್ರಾರಂಭೋತ್ಸವ ಹಾಗೂ ಮಕ್ಕಳಿಗೆ ಗುಣಾತ್ಮಕ ಶಿಕ್ಷಣ ನೀಡುವ ಸಲುವಾಗಿ ಇ-ಶಿಕ್ಷಣ ಉದ್ಘಾಟನೆ ನಡೆಯಿತು.

Advertisement

ಶರಾವತಿ ಶಿಕ್ಷಣ ಸಂಸ್ಥೆ ಹಾಗೂ ದಾನಿಗಳ ನೆರವಿನಿಂದ ಕಂಪ್ಯೂಟರ್‌ ಹಾಗೂ ಪ್ರೊಜೆಕ್ಟರ್‌ ಆಧಾರಿತ ಇ-ಶಿಕ್ಷಣ ವ್ಯವಸ್ಥೆಯನ್ನು ಮಾವಿನಕುರ್ವಾ ಪಂಚಾಯತ್‌ ಅಧ್ಯಕ್ಷ ತಿಲಕ ಗೌಡ ಉದ್ಘಾಟಿಸಿ, ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಮಕ್ಕಳಿಗೆ ಶಿಕ್ಷಣ ನೀಡುವಲ್ಲಿ ಇಂತಹ ಆಧುನಿಕ ಪದ್ಧತಿ ಅಳವಡಿಸಿಕೊಂಡಿರುವ ಪ್ರೌಢಶಾಲೆಯ ಪ್ರಯತ್ನವನ್ನು ಶ್ಲಾಘಿಸಿದರು.

ಅಧ್ಯಕ್ಷ ಆರ್‌.ವಿ. ಶಾನಭಾಗ ಮಾತನಾಡಿ ಶಿಕ್ಷಣದಲ್ಲಿ ಮಕ್ಕಳು ನೋಡುವುದರಿಂದ ಬೇಗ ಕಲಿಯುತ್ತಾರೆ. ಕಾರಣ ಇಲೆಕ್ಟ್ರಾನಿಕ್‌ ಮಾಧ್ಯಮದ ಮೂಲಕ ನಮ್ಮ ಶಾಲೆ ಮಕ್ಕಳಿಗೆ ವಿಷಯದ ಜ್ಞಾನವನ್ನು ಬೇಗನೆ ಅರ್ಥ ಮಾಡಿಸಲು ಇದು ಸಹಕಾರಿ ಎಂದರು.

ಎಂಟನೇ ವರ್ಗದ ವಿದ್ಯಾರ್ಥಿಗಳಿಗೆ ಉಚಿತವಾಗಿ ಸಮವಸ್ತ್ರ ಹಾಗೂ ಪಠ್ಯ-ಪುಸ್ತಕಗಳನ್ನು ವಿತರಿಸಲಾಯಿತು. ಮುಖ್ಯಾಧ್ಯಾಪಕ ಜಿ.ಎನ್‌. ಗಣಪತಿ ಸ್ವಾಗತಿಸಿದರು. ಬಿ.ಕೆ. ಕನ್ನಣ್ಣನವರ್‌ ವಂದಿಸಿದರು. ರಮೇಶ ಮೇಸ್ತ ನಿರೂಪಿಸಿದರು. ಆಡಳಿತ ಮಂಡಳಿ ಉಪಾಧ್ಯಕ್ಷ ಮಹೇಶ ಹೆಗಡೆ, ಸದಸ್ಯರಾದ ಹನುಮಂತ ಗೌಡ, ಮಂಜುನಾಥ ಗೌಡ ಹಾಗೂ ವಿದ್ಯಾರ್ಥಿ ಪಾಲಕರು, ಶಿಕ್ಷಕರು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next