Advertisement

E.D: ಇದೇ ಮೊದಲು; ಇ.ಡಿ.ಚಾರ್ಜ್‌ಶೀಟ್‌ನಲ್ಲಿ ಪಿಯಾಂಕಾ ವಾದ್ರಾ ಹೆಸರು ಉಲ್ಲೇಖ

08:57 PM Dec 28, 2023 | Pranav MS |

ನವದೆಹಲಿ: ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ವಾದ್ರಾ ಹೆಸರನ್ನು ಜಾರಿ ನಿರ್ದೇಶನಾಲಯ (ಇ.ಡಿ) ತನಿಖೆ ನಡೆಸುತ್ತಿರುವ ಪ್ರಕರಣದ ಆರೋಪಪಟ್ಟಿಯಲ್ಲಿ ಉಲ್ಲೇಖೀಸಲಾಗಿದೆ. ಇದೇ ಮೊದಲ ಬಾರಿಗೆ ಇಂಥ ಕ್ರಮ ಕೈಗೊಳ್ಳಲಾಗಿದೆ.

Advertisement

ಹರ್ಯಾಣದಲ್ಲಿ ಐದು ಎಕರೆ ಕೃಷಿ ಭೂಮಿಯನ್ನು ನವದೆಹಲಿಯ ರಿಯಲ್‌ ಎಸ್ಟೇಟ್‌ ಉದ್ಯಮಿ ಎಚ್‌.ಎಲ್‌.ಪಹ್ವಾ ಎಂಬಾತನಿಂದ ಅವರು ಖರೀದಿ ಮಾಡಿದ್ದಾರೆ. 2006ರಲ್ಲಿ ಈ ಖರೀದಿಯನ್ನು ನಡೆಸಲಾಗಿತ್ತು. ನಂತರ 2010ರಲ್ಲಿ ಪಹ್ವಾ ಎಂಬಾತನಿಗೇ ಮರು ಮಾರಾಟವನ್ನು ಪ್ರಿಯಾಂಕಾ ವಾದ್ರಾ ನಡೆಸಿದ್ದಾರೆ. ಈ ವ್ಯವಹಾರದಲ್ಲಿ ವಾದ್ರಾ, ಪಹ್ವಾಗೆ ಪೂರ್ಣ ಹಣವನ್ನೂ ನೀಡಿಲ್ಲ ಎಂದು ಇ.ಡಿ. ತನ್ನ ಆರೋಪ ಪಟ್ಟಿಯಲ್ಲಿ ಉಲ್ಲೇಖೀಸಿದೆ.

ಪ್ರಿಯಾಂಕಾ ವಾದ್ರಾರ ಪತಿ ರಾಬರ್ಟ್‌ ವಾದ್ರಾ ಕೂಡ ಪಹ್ವಾ ಎಂಬಾತನಿಂದಲೇ 2005 ಮತ್ತು 2006ರಲ್ಲಿ ಜಮೀನು ಖರೀದಿಸಿ ನಂತರ ಆತನಿಗೇ ಮಾರಾಟ ಮಾಡಿದ್ದರು. ಈ ಬಗ್ಗೆ ನವೆಂಬರ್‌ನಲ್ಲಿ ನವದೆಹಲಿಯ ವಿಶೇಷ ಕೋರ್ಟ್‌ಗೆ ಸಲ್ಲಿಕೆ ಮಾಡಲಾಗಿರುವ ಚಾರ್ಜ್‌ಶೀಟ್‌ಗಳಲ್ಲಿ ಈ ಅಂಶಗಳನ್ನು ಉಲ್ಲೇಖೀಸಲಾಗಿದೆ. ಸಂಜಯ ಭಂಡಾರಿ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಬರ್ಟ್‌ ವಾದ್ರಾರನ್ನು ಇ.ಡಿ. ವಿಚಾರಣೆ ನಡೆಸಿದ್ದುಂಟು.

ಚಾರ್ಜ್‌ಶೀಟ್‌ನಲ್ಲಿ ರಾಬರ್ಟ್‌ ವಾದ್ರಾ ಮತ್ತು ಪ್ರಿಯಾಂಕಾ ವಾದ್ರಾರನ್ನು ಆರೋಪಿಗಳೆಂದು ಹೆಸರಿಸಲಾಗಿಲ್ಲ. ಪ್ರಕರಣದ ಜೊತೆಗೆ ಪರೋಕ್ಷ ಸಂಬಂಧ ಹೊಂದಿರುವ ಸಾಧ್ಯತೆಯಡಿ ಮಾತ್ರ ಇಬ್ಬರ ಹೆಸರುಗಳನ್ನು ಸೇರಿಸಲಾಗಿದೆ.

2016ರಲ್ಲಿ ದೇಶ ಬಿಟ್ಟುಶಸ್ತ್ರಾಸ್ತ್ರ ದಳ್ಳಾಳಿ ಸಂಜಯ ಭಂಡಾರಿ ವಿರುದ್ಧ ಇ.ಡಿ. ತನಿಖೆ ನಡೆಸುತ್ತಿದೆ. ಈತನಿಗೆ ನೆರವು ನೀಡಿದ ಆರೋಪದ ಹಿನ್ನೆಲೆಯಲ್ಲಿ ಅನಿವಾಸಿ ಭಾರತೀಯ ಉದ್ಯಮಿ ಸಿ.ಸಿ.ಥಂಪಿ, ಸುಮೀತ್‌ ಛಡ್ಡಾ ಎಂಬುವರೂ ನೆರವಾಗಿದ್ದಾರೆ. ಉದ್ಯಮಿ ಥಂಪಿ ರಾಬರ್ಟ್‌ ವಾಡ್ರಾ ಜತೆಗೆ ವ್ಯಾವಹಾರಿಕ ಬಾಂಧವ್ಯ ಹೊಂದಿದ್ದಾರೆ ಎಂದೂ ಆರೋಪಿಸಲಾಗಿದೆ.

Advertisement

ಬ್ರಿಟೀಷರ್‌ ಮಹಾತ್ಮಾ ಗಾಂಧೀಜಿಯವರಿಗೆ ಹೆದರುತ್ತಿದ್ದಂತೆ ಈಗ ಕಾಂಗ್ರೆಸಿಗರಿಗೆ ಬಿಜೆಪಿಯವರು ಅಂಜುತ್ತಿದ್ದಾರೆ. ಈಗಲೂ ಕೂಡ ಗಾಂಧಿ ಕುಟುಂಬವೆಂದರೆ ಕೇಂದ್ರ ಸರ್ಕಾರಕ್ಕೆ ಭಯ ಇದೆ ಎನ್ನುವದಕ್ಕೆ ಚಾರ್ಜ್‌ಶೀಟ್‌ನಲ್ಲಿ ಪ್ರಿಯಾಂಕಾ ಹೆಸರು ಇರುವುದೇ ಸಾಕ್ಷಿ.
ನಾನಾ ಪಟೋಲೆ, ಮಹಾರಾಷ್ಟ್ರ ಕಾಂಗ್ರೆಸ್‌ ಮುಖ್ಯಸ್ಥ

ಏನಿದು ಪ್ರಕರಣ?
– ಹರ್ಯಾಣದಲ್ಲಿ ಐದು ಎಕರೆ ಕೃಷಿ ಜಮೀನನ್ನು ರಿಯಲ್‌ ಎಸ್ಟೇಟ್‌ ಉದ್ಯಮಿ ಪಹ್ವಾನಿಂ ದ ಖರೀದಿ
– 2006ರಲ್ಲಿ ಈ ಖರೀದಿ ನಂತರ 2010ರಲ್ಲಿ ಪ್ರಿಯಾಂಕಾರಿಂದ ಪಹ್ವಾನಿಗೇ ಮತ್ತೆ ಮಾರಾಟ.
– ಸಂಜಯ ಭಂಡಾರಿ ವಿರುದ್ಧದ ಸಲ್ಲಿಲಾಗಿರುವ ಚಾರ್ಜ್‌ಶೀಟ್‌ನಲ್ಲೇ

ಈ ಅಂಶಗಳ ಉಲ್ಲೇಖ
– ಪಹ್ವಾ ಜತೆಗೆ ರಾಬರ್ಟ್‌ ವಾದ್ರಾರಿಂದಲೂ ಪ್ರತ್ಯೇಕ ಜಮೀನು ಖರೀದಿ-ಮಾರಾಟ ವಹಿವಾಟು

Advertisement

Udayavani is now on Telegram. Click here to join our channel and stay updated with the latest news.

Next