Advertisement

ಎ. 20ರಿಂದ ಇ-ಕಾಮರ್ಸ್‌ ಚುರುಕು

12:11 PM Apr 17, 2020 | Sriram |

ಹೊಸದಿಲ್ಲಿ: ಫ್ರಿಡ್ಜ್ ಹಳೆಯದಾಯಿತು, ಹೊಸತು ಖರೀದಿ ಮಾಡಬೇಕು, ಹೊಸ ಮಾದರಿಯ ಮೊಬೈಲ್‌ ಬೇಕು ಎನ್ನುವವರಿಗೆ ಸಂತೋಷದ ಸುದ್ದಿ ಇಲ್ಲಿದೆ. ಎ.20ರಿಂದ ಎಲ್ಲ ಇ-ಕಾಮರ್ಸ್‌ ವೆಬ್‌ಸೈಟ್‌ಗಳಲ್ಲಿ ಮೊಬೈಲ್‌ ಫೋನ್‌, ಟಿವಿ, ಫ್ರಿಡ್ಜ್, ಸ್ಟೇಷನರಿ ವಸ್ತುಗಳು, ಲ್ಯಾಪ್‌ಟಾಪ್‌ಗ್ಳನ್ನು ಖರೀದಿಸಲು ಅವಕಾಶ ಇದೆ.

Advertisement

ಹೀಗಾಗಿ ಫ್ಲಿಪ್‌ಕಾರ್ಟ್‌, ಅಮೆಜಾನ್‌ ಇಂಡಿಯಾ ಮತ್ತು ಇತರ ವೆಬ್‌ಸೈಟ್‌ಗಳ ಮೂಲಕ ಮತ್ತೆ ವಹಿವಾಟು ಆರಂಭವಾಗಲಿದೆ. ಈ ಬಗ್ಗೆ ಗುರುವಾರ ಕೇಂದ್ರ ಗೃಹ ಸಚಿವಾಲಯದ ಹಿರಿಯ ಅಧಿಕಾರಿಗಳು ವಿವರಣೆ ನೀಡಿದ್ದು, ಇಂಥ ವಸ್ತುಗಳನ್ನು ಮನೆಯ ವರೆಗೆ ತಲುಪಿಸುವ ವಾಹನಗಳು ಪರವಾನಿಗೆ ಪಡೆದಿರಬೇಕಾಗುತ್ತದೆ ಎಂದಿದ್ದಾರೆ. ಮಾ. 25ರಿಂದ ನಿಂತ ನೀರಾಗಿರುವ ವಾಣಿಜ್ಯಿಕ ವಹಿವಾಟಿಗೆ ಕೊಂಚ ಉತ್ತೇಜನ ನೀಡುವ ಪ್ರಯತ್ನ ಇದಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next