Advertisement
ಗ್ರಾಮೀಣ ಪ್ರದೇಶದಲ್ಲಿ ಜನನ ಪತ್ರಗಳನ್ನು ಆಯ ಸರ್ಕಾರಿ ಆಸ್ಪತ್ರೆ ನಾಡಕಚೇರಿ ತಾಲೂಕು ಕಚೇರಿ ಗಳಲ್ಲಿ ಪಡೆಯಲು ಅವಕಾಶವಿತ್ತು. ಮರಣ ಪತ್ರಗಳನ್ನು ಆಯಾ ನಾಡಕಚೇರಿಗಳಲ್ಲಿ ನೀಡಲಾಗುತ್ತಿತ್ತು. ಅನ್ಯ ಉದ್ದೇಶವಾಗಿ ಇಂತಹ ಪತ್ರಗಳನ್ನು ಅಕ್ರಮವಾಗಿ ಪಡೆದುಕೊಂಡು ದುರುಪಯೋಗಪಡಿಸಿಕೊಳ್ಳುತ್ತಿರುವ ಘಟನೆಗಳು ಹೆಚ್ಚಾಗುತ್ತಿದ್ದಂತೆ ಸರ್ಕಾರ ಅಕ್ರಮಗಳಿಗೆ ಕಡಿವಾಣ ಹಾಕಲು ಆನ್ ಲೈನ್ ಮೂಲಕ ಇ-ಜನ್ಮ ತಂತ್ರಾಂಶವನ್ನು ಜಾರಿಗೆ ತಂದಿದೆ. ತಂತ್ರಾಂಶದಲ್ಲಿ ನೋಂದಾಯಿಸಿಕೊಂಡ ನಂತರ ಆನ್ ಲೈನ್‌ನಲ್ಲಿ ಜನ ರೇಟರ್ ನಂಬರ್ ಪಡೆದು ಎಲ್ಲಿ ಬೇಕಾದರೂ ಸರ್ಟಿಫಿಕೇಟ್ ತೆಗೆದುಕೊಳ್ಳುವ ವ್ಯವಸ್ಥೆ ಇರುವುದರಿಂದ ಜನರು ಈ ದಾಖಲೆಗಳಿಗೆ ಕಚೇರಿಗಳಿಗೆ ಅಲೆದಾಟ ತಪ್ಪುತ್ತದೆ.
Related Articles
Advertisement
ಇ- ಜನ್ಮ ಪೋರ್ಟಲ್‌ನಲ್ಲಿ ದಾಖಲಾಗುವ ನಂಬರ್ ಒಮ್ಮೆ ಮತ್ತು ಜನರೇಟ್ ಆಗಲಿದೆ. ಮರಣ ನಂತರ ಆದ ತಿದ್ದುಪಡಿ ಸದ್ಯವಾಗುವುದಿಲ್ಲ. ಡಿಜಿಟಲ್ ಸಹಿ ಕೂಡ ಇದರಲ್ಲಿ ಅಪ್ರೋಡ್ ಆಗುತ್ತದೆ. ಇ-ಜನ್ಮ ಪೋರ್ಟಲ್‌ನಲ್ಲಿ ಆಧಾರ್ ಕಾರ್ಡ್ ಮಾದರಿಯಲ್ಲಿ ಒಬ್ಬರಿಗೆ ಒಂದು ನಂಬರ್ ನೀಡಲಿದ್ದು. ನಕಲಿ ಮಾಡಿ ಸರ್ಟಿಫಿಕೆಟ್ ಪಡೆಯಲು ಸಾಧ್ಯವಿರುವುದಿಲ್ಲ. ಮಗು ಹುಟ್ಟಿದ ತಕ್ಷಣ ಮಾಹಿತಿಯನ್ನು ಗ್ರಾಮ ಪಂಚಾಯಿತಿಗಳಿಗೆ ನೀಡಬೇಕು. ಗ್ರಾಪಂ ಅಧಿಕಾರಿಗಳು ಇ-ಜನ್ಮ ಪೋರ್ಟಲ್‌ನಲ್ಲಿ ತಂದೆ ತಾಯಿ ಹೆಸರು, ಆಧಾರ್, ಪಾನ್ ಕಾರ್ಡ್ ಸೇರಿದಂತೆ ಯಾವುದಾದರೂ ಒಂದು ದಾಖಲಾತಿ ನೀಡಿ ಅಪ್ರೋಡ್ ಮಾಡುತ್ತಾರೆ. ಸರ್ಟಿಫಿಕೇಟ್‌ನೊಂದಿಗೆ ನಂಬರ್ ಒಂದನ್ನು ಜನರೇಟ್ ಆಗಲಿದೆ. ನಂಬರ್ ಪಡೆದಲ್ಲಿ ಬೇಕಾದರೂ ಆನ್‌ಲೈನ್‌ನಲ್ಲಿ ಮಾಹಿತಿ ದಾಖಲೆ ಪಡೆದುಕೊಳ್ಳಬಹುದು.ವಿವಿಧ ಕಚೇರಿಗಳಿಗೆ ಜನನ ಮತ್ತು ವರ್ಣ ಪ್ರಮಾಣ ಪತ್ರಗಳಿಗೆ ಅಲೆದಾಡುವ ಪರಿಸ್ಥಿತಿ ನಿರ್ಮಾಣ ವಾಗಿತ್ತು. ಈಗ ಸರ್ಕಾರ ಗ್ರಾಪಂಗಳಲ್ಲಿ ನೀಡುವುದರಿಂದ ಸಾರ್ವಜನಿಕರಿಗೆ ಹೆಚ್ಚಿನ ಅನುಕೂಲವಾಗುವಂತೆ ಮಾಡಿರುತ್ತಾರೆ.
ಸುಲಭವಾಗಿ ಜನರ ಕೈಗೆ ಸಿಗಲಿದೆ ದಾಖಲೆಗಳು:
ಪ್ರತಿಯೊಬ್ಬರಿಗೂ ಜನನ ಮತ್ತು ಮರಣ ಪತ್ರಗಳು ಮುಖ್ಯ ದಾಖಲೆಗಳಾಗಿವೆ. ಕೆಲವು ಇವುಗಳನ್ನು ಪಡೆಯಲು ಸಾಕಷ್ಟು ಪರದಾಟ ನಡೆಸಬೇಕಾಗಿತ್ತು. ಶಾಲೆಗಳಲ್ಲಿ ಮಕ್ಕಳ ದಾಖಲಾತಿಗೆ ಜನನ ಮರಣ ಪತ್ರ ಮುಖ್ಯವಾಗಿರುತ್ತದೆ.
ಹಳ್ಳಿಗಳಲ್ಲಿ ಅಗತ್ಯ ಅರಿವು ಇಲ್ಲದ ಕಾರಣ ಜನನ ಮಾಹಿತಿಯನ್ನು ಸ್ಥಳೀಯವಾಗಿ ನೋಂದಾಯಿಸದೇ ಇದ್ದಾಗ ಜನನ ದಾಖಲೆ ಸಿಗುತ್ತಿರಲಿಲ್ಲ. ಮಕ್ಕಳು ಶಾಲೆಗೆ ಸೇರಬೇಕಾದಾಗ ಕೋರ್ಟ್ ಮೂಲಕ ದಾಖಲೆ, ಸಾಕ್ಷಿ ನೀಡಿ ಜನನ ಪತ್ರ ಪಡೆಯಬೇಕಾಗಿತ್ತು. ಗ್ರಾಮ ಪಂಚಾಯಿತಿಗಳಲ್ಲಿ ಡಿಜಿಟಲ್ ನೋಂದಣಿ ಆಗಿರುವುದರಿಂದ ದಾಖಲೆಗಳು ಸುಲಭವಾಗಿ ಜನರ ಕೈಗೆ ಸಿಗಲಿದೆ. ಎಲ್ಲಾ ಕಚೇರಿಗಳಲ್ಲಿ ಈಗ ಆನ್‌ಲೈನ್ ಆಗಿರುವು ದರಿಂದ ಆನ್‌ಲೈನ್‌ನಲ್ಲಿ ಅರ್ಜಿ ಹಾಕುವು ದರಿಂದ ಜನಸಾಮಾನ್ಯರಿಗೆ ಅನುಕೂಲ ವಾಗುತ್ತದೆ. ಇ- ಜನ್ಮ ದಾಖಲೆಗಳಿಗೆ ಸರ್ವರ್ ಸಮಸ್ಯೆ ಬಾರದಂತೆ ನೋಡಿ ಕೊಂಡರೆ ಹೆಚ್ಚು ಅನುಕೂಲವಾಗುತ್ತದೆ. ಇಲ್ಲದಿದ್ದರೆ ಸರ್ವರ್ ಸಮಸ್ಯೆ ಬಂದರೆ ಜನ ಸಾಮಾನ್ಯರು ಪರದಾಡುವ ಸ್ಥಿತಿ ನಿರ್ಮಾಣವಾಗುತ್ತದೆ ಎಂದು ಸಾರ್ವಜನಿಕರು ಹೇಳುತ್ತಾರೆ.
ಗ್ರಾಮೀಣ ಪ್ರದೇಶಗಳಲ್ಲಿ ಸರ್ವರ್ ಸಮಸ್ಯೆ ಸರ್ವೆ ಸಾಮಾನ್ಯವಾಗಿರುತ್ತದೆ. ಒಂದು ಬಾರಿ ಚೆನ್ನಾಗಿ ಬಂದರೆ ಮತ್ತೂಂದು ಬಾರಿ ಬರುವುದಿಲ್ಲ. ಗ್ರಾಮ ಪಂಚಾಯಿತಿಗಳಲ್ಲಿ ಇಂಟರ್ನೆಟ್ ಸಂಪರ್ಕ ಚೆನ್ನಾಗಿರು ವಂತೆ ಅಧಿಕಾರಿಗಳು ಮಾಡಬೇಕು. ಒಂದು ಅರ್ಜಿಗೆ 10 ರಿಂದ 20 ನಿಮಿಷ ಬೇಕಾಗುತ್ತದೆ. ಎಂದು ಸಾರ್ವಜನಿಕರು ಅಭಿಪ್ರಾಯಪಡುತ್ತಾರೆ.
ಗ್ರಾಮೀಣ ಜನರಿಗೆ ಸುಲಭವಾಗಿ ಜನರ ಕೈಗೆ ಸಿಗುವಂತೆ ಜನನ ಮತ್ತು ಮರಣ ಡಿಜಿಟಲ್ ಪತ್ರ ಗಳಾಗಿದೆ. ಇನ್ನು ಮುಂದೆ ಗ್ರಾಪಂಗಳಲ್ಲಿ ಮರಣ ಮತ್ತು ಜನನ ಪತ್ರಗಳು ಇ-ಜನ್ಮ ತಂತ್ರಾಂಶದ ಮೂಲಕ ನೋಂದಣಿ ಮಾಡಿಕೊಳ್ಳುವುದು. ಇದರ ಸಂಬಂಧಪಟ್ಟಂತೆ ನಾಲ್ಕು ತಾಲೂಕುಗಳು ಕಾರ್ಯದರ್ಶಿ, ಎಂಎಸ್ ಸಂಯೋಜಕರು, ಗ್ರಾಪಂ ಡಾಟಾ ಎಂಟ್ರಿ ಆಪರೇಟರ್‌ಗಳಿಗೆ ತರಬೇತಿ ನೀಡಲಾಗಿದೆ. ಗ್ರಾಮೀಣ ಪ್ರದೇಶದ ಜನರಿಗೆ ಅನುಕೂಲವಾಗುತ್ತಿದೆ. –ಡಾ.ಕೆ.ಎನ್.ಅನುರಾಧಾ, ಸಿಇಒ ಜಿಪಂ ಬೆಂಗಳೂರು ಗ್ರಾಮಾಂತರ ಜಿಲ್ಲೆ
-ಎಸ್. ಮಹೇಶ್