ಬಾಗೇಪಲ್ಲಿ: ವ್ಯಾಜ್ಯ ಪೂರ್ವ ಪ್ರಕರಣಗಳನ್ನು ಸಂಧಾನದಮೂಲಕಇತ್ಯರ್ಥಪಡಿಸಿಕೊಳ್ಳಲು ತಾಲೂಕು ಕಾನೂನು ಸೇವೆಗಳ ಪ್ರಾಧಿಕಾರದಿಂದ ಬಾಗೇಪಲ್ಲಿಯ ಜೆಎಂಎಫ್‌ಸಿ ಸಿವಿಲ್ ನ್ಯಾಯಾಲಯದ ಅವರಣದಲ್ಲಿ ಹಮ್ಮಿಕೊಂಡಿದ್ದ ಇ-ಲೋಕ್ ಆದಾಲತ್‌ನಲ್ಲಿ ಸಿವಿಲ್ ಮತ್ತು ಕ್ರಿಮಿನಲ್ ಸೇರಿದಂತೆ ಒಟ್ಟು 262 ಅರ್ಜಿದಾರರು ಅರ್ಜಿ ಸಲ್ಲಿಸಿದ್ದು, 106 ಪ್ರಕರಣಗಳನ್ನು ರಾಜಿ ಸಂಧಾನದ ಮೂಲಕ ಇತ್ಯರ್ಥಗೊಳಿಸಲಾಗಿದೆ.
ಜಮೀನು ಒತ್ತುವರಿ, ಕೌಟುಂಬಿಕ ದೌರ್ಜನ್ಯ, ಕ್ರಿಮಿನಲ್ ಪ್ರಕರಣ ಸೇರಿದಂತೆ104 ಸಿವಿಲ್ ಸಂಬಂಧಿತ ಪ್ರಕರಣಗಳಿಗೆಅರ್ಜಿ ಸಲ್ಲಿಸಿದ್ದು 15 ಇತ್ಯರ್ಥಗೊಂಡಿವೆ. 158 ಕ್ರಿಮಿನಲ್ ಪ್ರಕರಣಗಳ ಅರ್ಜಿದಾರರು ಅರ್ಜಿ ಸಲ್ಲಿಸಿದ್ದು 91 ಪ್ರಕರಣ ಇತ್ಯರ್ಥಗೊಂಡಿವೆ. ಅರ್ಜಿದಾರರು ವಕೀಲರರೊಂದಿಗೆ ಭಾಗವಹಿಸಿ ವಾದಿ ಪ್ರತಿವಾದಿಗಳು ತಮ್ಮ ವಾಸ ಸ್ಥಳಗಳಿಂದಲೇ ಮೊಬೈಲ್ ಆನ್‌ಲೈನ್ ಮೂಲಕ ಚರ್ಚಿಸಿ ಇತ್ಯರ್ಥಗೊಳಿಸಲಾಯಿತು ಎಂದು ಸಿವಿಲ್ ನ್ಯಾಯಾಲಯದ ನ್ಯಾಯಾಧೀಶ ಎಸ್. ಎಂ.ಅರುಟಗಿ ತಿಳಿಸಿದ್ದಾರೆ.
ಸರ್ಕಾರದ ವಿರುದ್ಧ ರೈತ ಸಂಘ ಪ್ರತಿಭಟನೆ :
ಚಿಂತಾಮಣಿ: ಕೇಂದ್ರ ಮತ್ತು ರಾಜ್ಯ ಸರ್ಕಾರ ನೀತಿಗಳ ಖಂಡಿಸಿ ಕೃಷಿ ವಿಧೇಯಕ ಸೇರಿದಂತೆ ಕಾಯ್ದೆಗಳತಿದ್ದುಪಡಿ ಮಾಡುತ್ತಿರುವುದನ್ನು ವಿರೋಧಿಸಿ ರಾಜ್ಯದಲ್ಲಿ ಹಮ್ಮಿಕೊಂಡಿರುವ ವಿಧಾನಸೌದ ಮುತ್ತಿಗೆಕಾರ್ಯ ಕ್ರಮಕ್ಕೆ ತಾಲೂಕಿನ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ,ತಾಲೂಕು ಅಧ್ಯಕ್ಷ ಸೀಕಲ್ ರಮಣಾ ರೆಡ್ಡಿ ನೇತೃತ್ವದಲ್ಲಿ ಸೋಮವಾರ ನಗರದಿಂದ ಹೊರಟರು.
ತಾಲೂಕು ಅಧ್ಯಕ್ಷ ಸೀಕಲ್ ರಮಣಾರೆಡ್ಡಿ, ಆರ್.ಆರ್.ರಾಮ ಸ್ವಾಮಿ, ನಾಯನಹಳ್ಳಿ ಪಿ.ನಾಗರಾಜ್, ಚಂದ್ರಶೇಖರ್ ರೆಡ್ಡಿ, ಶ್ರೀನಿವಾಸರೆಡ್ಡಿ, ನಾಗರಾಜ ರೆಡ್ಡಿ, ಕೋನಾಪುರ ಕೆ.ವಿ ವೆಂಕಟರೆಡ್ಡಿ, ವೆಂಕ ಟಾಚಲಪತಿ, ಮನೋಜ್ ಕುಮಾರ್, ಪುಲಿಗಡ್ಡ ಕೆ. ನಾರಾಯಣಸ್ವಾಮಿ, ಕೈವಾರ ಗುಟ್ಟ ಹಳ್ಳಿ ರಾಮಿರೆಡ್ಡಿ, ದೊಡ್ಡ ಗಂಜೂರು ಕೆ.ನಾರಾಯಣಸ್ವಾಮಿ, ಬಿಳ್ಳಾಂಡ್ಲಹಳ್ಳಿ ನಾರಾಯಣರೆಡ್ಡಿ, ಕೆಂಚಾರ‌್ಲಹಳ್ಳಿಕೃಷ್ಣಾರೆಡ್ಡಿಮತ್ತಿತರರು ತೆರಳಿದರು.