Advertisement

ಖೇಲೋ ಇಂಡಿಯಾ: ದ್ಯುತಿಗೆ ಮತ್ತೂಂದು ಚಿನ್ನ

09:57 AM Mar 03, 2020 | sudhir |

ಭುವನೇಶ್ವರ: ಖೇಲೋ ಇಂಡಿಯಾ ಪಂದ್ಯಾವಳಿಯಲ್ಲಿ ಭಾರತದ “ವೇಗದ ವನಿತೆ’ ದ್ಯುತಿ ಚಂದ್‌ ಮತ್ತೂಂದು ಚಿನ್ನದ ಪದಕವನ್ನು ಕೊರಳಿಗೆ ಅಲಂಕರಿಸಿಕೊಂಡಿದ್ದಾರೆ. ರವಿವಾರದ 200 ಮೀ. ಫೈನಲ್‌ನಲ್ಲಿ ದ್ಯುತಿ ಮೊದಲಿಗರಾಗಿ ಗುರಿ ಮುಟ್ಟಿ ಈ ಸಾಧನೆಗೈದರು. ಶನಿವಾರ 100 ಮೀ. ಓಟದಲ್ಲೂ ಅವರು ಬಂಗಾರ ಜಯಿಸಿದ್ದರು.

Advertisement

ಕಳಿಂಗ ಇನ್‌ಸ್ಟಿಟ್ಯೂಟ್‌ ಆಫ್ ಇಂಡಸ್ಟ್ರಿಯಲ್‌ ಟೆಕ್ನಾಲಜಿ ತಂಡವನ್ನು ಪ್ರತಿನಿಧಿಸಿದ 24ರ ಹರೆಯದ ದ್ಯುತಿ ಚಂದ್‌ 23.66 ಸೆಕೆಂಡ್‌ಗಳಲ್ಲಿ 200 ಮೀ. ದೂರವನ್ನು ಪೂರ್ತಿಗೊಳಿಸಿದರು. ಮುಂಬೈ ಯುನಿವರ್ಸಿಟಿಯ ಕೀರ್ತಿ ವಿಜಯ್‌ ರಜತ (24.98 ಸೆಕೆಂಡ್‌) ಮತ್ತು ಉತ್ಕಲ್‌ ವಿ.ವಿ.ಯ ದೀಪಾಲಿ ಮಾಹಾಪಾತ್ರ ಕಂಚು ಗೆದ್ದರು (25.19 ಸೆಕೆಂಡ್‌).

“100 ಮೀ. ಓಟಕ್ಕಿಂತ 200 ಮೀ. ಸ್ಪರ್ಧೆ ಸುಲಭ. ಇಲ್ಲಿ ಯಾವಾಗ ಪೂರ್ಣ ಪ್ರಮಾಣದ ವೇಗವನ್ನು ಗಳಿಸಬೇಕು ಎಂಬ ಸ್ಪಷ್ಟ ಚಿತ್ರಣ ಸಿಗುತ್ತದೆ’ ಎಂದ ದ್ಯುತಿ ಚಂದ್‌, ಖೇಲೋ ಇಂಡಿಯಾ ಗೇಮ್ಸ್‌ ತನ್ನ ತವರಾದ ಒಡಿಶಾದಲ್ಲಿ ನಡೆಯುತ್ತಿರುವುದು ಖುಷಿಯ ಸಂಗತಿ, ಇದನ್ನು ಏಶ್ಯನ್‌ ಗೇಮ್ಸ್‌ ಮಟ್ಟದಲ್ಲಿ ಆಯೋಜಿಸಲಾಗಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next