Advertisement
ಅವರು ಸೋಮವಾರ ಸಂಜೆ ನಕ್ಸಲ್ ಬಾಧಿತ ಸುಬ್ರಹ್ಮಣ್ಯ ಸಮೀಪದ ಕುಲ್ಕುಂದ ಪಳ್ಳಿಗ¨ªೆ ಪ್ರದೇಶಕ್ಕೆ ಭೇಟಿ ನೀಡಿ ಕಾಡಂಚಿನ ಮನೆಗಳ ಕುಟುಂಬ ಸದಸ್ಯರಿಗೆ ಧೈರ್ಯ ತುಂಬಿದರು. ಕೆಲ ವರ್ಷಗಳ ಹಿಂದೆ ನಕ್ಸಲರು ಭೇಟಿ ಇತ್ತ ಮನೆ ಮಂದಿಯ ಜತೆ ಮಾತುಕತೆ ನಡೆಸಿ ಪೊಲೀಸ್ ಇಲಾಖೆ ನಿಮ್ಮ ಜತೆ ಇದೆ. ನೀವು ಯಾವುದೇ ಭೀತಿಯಿಲ್ಲದೇ ಧೈರ್ಯದಿಂದ ಇರುವಂತೆ ತಿಳಿಸಿದರು.
ಬಳಿಕ ಅವರು ಕುಲ್ಕುಂದದಲ್ಲಿ ಜಿÇÉಾ ಸ್ವೀಪ್ ಘಟಕದ ಮತದಾನ ಮಾಡಬನ್ನಿ ಅಭಿಯಾನದಲ್ಲಿ ಪಾಲ್ಗೊಂಡು ಎಲ್ಲರೂ ಅತ್ಯಮೂಲ್ಯ ಮತದಾನದ ಹಕ್ಕನ್ನು ಚಲಾಯಿಸಿ; ಯಾರು ಕೂಡ ಮತದಾನ ಪ್ರಕ್ರಿಯೆಯಿಂದ ಹೊರಗುಳಿಯದಿರಿ ಎಂದು ಮನವಿ ಮಾಡಿದರು. ಸಮಸ್ಯೆಗಳಿದ್ದಲ್ಲಿ ಅಥವಾ ಅಪರಿಚಿತ ವ್ಯಕ್ತಿಗಳ ಚಲನವಲನ ಕಂಡು ಬಂದಲ್ಲಿ ಪೊಲೀಸ್ ಇಲಾಖೆಗೆ ಮಾಹಿತಿ ನೀಡುವಂತೆ ಅವರು ಹೇಳಿದರು. ಈ ಸಂದರ್ಭ ಸುಬ್ರಹ್ಮಣ್ಯ ಪಿಎಸ್‌ಐ ಮಲ್ಲಿಕಾರ್ಜುನ, ಪೊಲೀಸ್ ಸಿಬಂದಿ ಹಾಗೂ ನಾಗರಿಕರು ಉಪಸ್ಥಿತರಿದ್ದರು.