Advertisement

ಸಿಎಂ ಕಾರ್ಯಕ್ರಮದ ಬಂದೋಬಸ್ತ್ಗೆ ಆಗಮಿಸಿದ್ದ ಡಿವೈಎಸ್‌ಪಿ ಸಾವು

07:59 AM Dec 02, 2017 | |

ಎನ್‌.ಆರ್‌.ಪುರ: ಸಿಎಂ ಸಿದ್ದರಾಮಯ್ಯ ಅವರ ಭದ್ರತಾ ನಿರ್ವಹಣೆಗಾಗಿ ಆಗಮಿಸಿದ್ದ ರಾಜ್ಯ ಗುಪ್ತವಾರ್ತೆ ಇಲಾಖೆ ಡಿವೈಎಸ್‌ಪಿ ಶೇಕ್‌ ಹುಸೇನ್‌(56) ಶುಕ್ರವಾರ ಹೃದಯಾಘಾತದಿಂದ ಮೃತಪಟ್ಟಿದ್ದಾರೆ.

Advertisement

ಗುರುವಾರ ವಿವಿಧ ಕಾಮಗಾರಿ ಶಂಕುಸ್ಥಾಪನೆ ನೆರವೇರಿಸಲು ಇಲ್ಲಿಗೆ ಆಗಮಿಸಿದ್ದ ಸಿಎಂ ಸಿದ್ದರಾಮಯ್ಯ ಕಾರ್ಯಕ್ರಮ ಮುಗಿದ ನಂತರ ರಾತ್ರಿ ಇಲ್ಲಿಯೇ ತಂಗಿದ್ದರು. ಶೇಕ್‌ ಹುಸೇನ್‌ ಸಹ ಇಲ್ಲಿಯೇ ಇದ್ದರು. ಶುಕ್ರವಾರ ಮುಖ್ಯಮಂತ್ರಿಗಳು ಎನ್‌.ಆರ್‌.
ಪುರದಿಂದ ಬಾಗಲಕೋಟೆಗೆ ತೆರಳಿದ ನಂತರ ಈ ಘಟನೆ ನಡೆದಿದೆ.

ಹೃದಯಾಘಾತಕ್ಕೆ ಒಳಗಾದ ಶೇಕ್‌ ಹುಸೇನ್‌ ಅವರನ್ನು ತಕ್ಷಣವೇ ಪಟ್ಟಣದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಯಿತು. ಚಿಕಿತ್ಸೆ ಫಲಿಸದೆ ಮಧ್ಯಾಹ್ನ 1.10ರ ಸುಮಾರಿಗೆ ನಿಧನರಾದರು. ಮೃತರು ಪತ್ನಿ, ಪುತ್ರ, ಪುತ್ರಿಯನ್ನು ಅಗಲಿದ್ದಾರೆ. ಶೇಕ್‌ ಹುಸೇನ್‌ ಚಿಕ್ಕಮಗಳೂರಿನಲ್ಲಿ ಡಿವೈಎಸ್ಪಿಯಾಗಿ ಕರ್ತವ್ಯ ನಿರ್ವಹಿಸಿದ್ದು, ಕಳೆದ ತಿಂಗಳ ಹಿಂದಷ್ಟೇ ರಾಜ್ಯ ಗುಪ್ತಚರ ಇಲಾಖೆಗೆ ವರ್ಗಾವಣೆಗೊಂಡಿದ್ದರು.

ವಿಷಯ ತಿಳಿದು ಸರ್ಕಾರಿ ಆಸ್ಪತ್ರೆಗೆ ಅಡಿಷನಲ್‌ ಎಸ್ಪಿ ಜಗದೀಶ್‌, ಕೊಪ್ಪ ಡಿವೈಎಸ್ಪಿ ಜಹಾಗೀರದಾರ್‌, ಸಿಪಿಐ ಎಚ್‌. 
ಎನ್‌.ಜಗನ್ನಾಥ್‌, ಪಿಎಸ್‌ಐ ರವಿ.ಎನ್‌.  ನಿಡಘಟ್ಟ ಸೇರಿ ಪೊಲೀಸ್‌ ಸಿಬ್ಬಂದಿ ಅಂತಿಮ ನಮನ ಸಲ್ಲಿಸಿ ಗೌರವ ಸೂಚಿಸಿದರು. ನಂತರ ತಹಶೀಲ್ದಾರ್‌ ಗೋಪಿ ನಾಥ್‌, ತಾ.ಪಂ. ಇಒ ಕೆ.ಹೊಂಗಯ್ಯ, ಪ.ಪಂ. ಮುಖ್ಯಾಧಿಕಾರಿ ಕುರಿಯಾ ಕೋಸ್‌ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಗೌರವ ಸಮರ್ಪಿಸಿದರು.  ನಂತರ ಮೃತದೇಹವನ್ನು ಚಿಕ್ಕಮಗಳೂರಿಗೆ ಕೊಂಡೊಯ್ಯಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next