ರವಿವಾರ ಬೆಳಿಗ್ಗೆ ಡಿವೈಎಸ್ಪಿ ನೇತೃತ್ವದ ತಂಡ ಬಾರೇ ಹೆರೂರು ಗ್ರಾಮ ಸಮೀಪದ ಅರಣ್ಯದಲ್ಲಿ ತನಿಖೆ ಸಂಬಂಧ ಹುಡುಕಾಟ ನಡೆಸಿತ್ತು. ಆದರೆ ಅರಣ್ಯದಲ್ಲಿ ದಾರಿ ತಪ್ಪಿದ ಕಾರಣ ಅವರು ರಾತ್ರಿಯಾದರೂ ಮರಳಿರಲಿಲ್ಲ. ಆಗ ಅಡಿಶನಲ್ ಎಸ್ಪಿ ಗೋಪಾಲ ಬ್ಯಾಕೋಡ ನೇತೃತ್ವದ ತಂಡ ಡಿವೈಎಸ್ಪಿ ಗಾಗಿ ಹುಡುಕಾಟ ಪ್ರಾರಂಭಿಸಿತ್ತು. ಸೋಮವಾರ ಬೆಳಗಿನ ಜಾವ ಡಿವೈಎಸ್ಪಿ ಹಾಗೂ ತಂಡ ಕಾಡಿನಲ್ಲಿ ಭೇಟಿಯಾಯಿತು. ಆಗ ಸಮಾಧಾನದ ನಿಟ್ಟುಸಿರು ಪೋಲೀಸ್ ಇಲಾಖೆಯಿಂದ ಬಂತು. ಈ ಬಗ್ಗೆ ಜಿಲ್ಲಾಧಿಕಾರಿ ಹರೀಶ್ ಕುಮಾರ್ ಎಲ್ಲಾ ಅಧಿಕಾರಿಗಳು ಸುರಕ್ಷಿತವಾಗಿದ್ದಾರೆಂದು ಹೇಳಿದ್ದಾರೆ.
Advertisement
ಸೆಟಲೈಟ್ ಕಾಲ್ ಆದ ಸ್ಥಳ ಕೈಗಾ ಅಣುಸ್ಥಾವರ ಹಾಗೂ ನೌಕಾನೆಲೆ ಐಎನ್ ಎಸ್ ಕದಂಬದ ಶಸ್ತ್ರಾಗಾರ ಸಂಗ್ರಹ ವಜ್ರಕೋಶ ಕ್ಕೆ ಸಮಾನ ಅಂತರದಲ್ಲಿದೆ. ಹಾಗಾಗಿ ಪೊಲೀಸರು ಸೆಟಲೈಟ್ ಕಾಲ್ ಮಾಡಿದ ತಾಣ ಹುಡುಕಲು ಎರಡು ತಂಡವಾಗಿ ಕಾರ್ಯಾಚರಣೆಗೆ ಇಳಿದರು.ಒಂದು ತಂಡ ಬಾರೆ ಗ್ರಾಮದ ಅರಣ್ಯದಲ್ಲಿ ಮತ್ತೊಂದು ಅಗಸೂರು ಕಡೆ ಭಾಗದಿಂದ ಅರಣ್ಯ ಪ್ರವೇಶಿಸಿತ್ತು. ಇದರಲ್ಲಿ ಡಿವೈಎಸ್ಪಿ ಶಂಕರ್ ಮಾರಿಹಾಳ್ ತಂಡ ಅರಣ್ಯದಲ್ಲಿ ದಾರಿ ತಪ್ಪಿತ್ತು. ರಾತ್ರಿ ಇಡೀ ಅರಣ್ಯದಲ್ಲಿ ಕಳೆಯಿತು. ಪಶ್ಚಿಮ ಘಟ್ಟದ ದಟ್ಟ ಅರಣ್ಯ ಕೈಗಾ ಯಲ್ಲಾಪುರ ಮಧ್ಯ ಇದೆ. ಬಾರೆ, ಹೆರೂರು ,ವಜ್ರಳ್ಳಿ ಏಕ ಮುಖ ವಾಹನ ಸಂಚಾರದ ಇಕ್ಕಟ್ಟಾದ , ಕಡಿದಾದ ಕಣಿವೆಯ ದಾರಿ. ಇಲ್ಲಿ ಪೊಲೀಸ್ರು ಸೆಟಲೈಟ್ ಕಾಲ್ ಮಾಡಿದವರಿಗಾಗಿ ಹುಡುಕಾಟ ನಡೆಸಿದ್ದರು.