Advertisement
90ರ ದಶಕದಲ್ಲಿ ಹದಿಹರೆಯದ ಹುಡುಗಿಯರೆಲ್ಲಾ ಮುಗಿ ಬಿದ್ದು ಖರೀದಿಸುತ್ತಿದ್ದ ಬಟ್ಟೆಯೊಂದಿತ್ತು. ಅದುವೇ, ಡೆನಿಮ್ ಸ್ಕರ್ಟ್. ಈ ಸ್ಕರ್ಟ್ ಮತ್ತೆ ಟ್ರೆಂಡ್ ಆಗಿ, ಇಂದಿನ ಯುವತಿಯರ ವಾರ್ಡ್‌ರೋಬ್ ಸೇರಿದೆ. ನೋಡಲು ಫ್ಯಾಷನೆಬಲ್ ಅನ್ನುವುದಷ್ಟೇ ಅಲ್ಲದೆ, ಧರಿಸಲು ಬಹಳ ಆರಾಮ ಅನ್ನುವುದು ಕೂಡಾ ಈ ಉಡುಗೆ ಟ್ರೆಂಡ್ ಆಗಲು ಕಾರಣ.
ಡೆನಿಮ್ ಸ್ಕರ್ಟ್‌ಗಳ ಮೇಲೆ ದೊಡ್ಡ ಗಾತ್ರದ ಜೇಬು, ಆ ಜೇಬಿನ ಮೇಲೆ ದೊಡ್ಡ ಬಟನ್ (ಗುಂಡಿ) ಅಥವಾ ಜೇಬಿನ ಸುತ್ತ ಔಟ್ ಲೈನ್‌ನಂತೆ ಹೊಲಿದ ಕಸೂತಿ, ರಿಬ್ಬನ್ ಮತ್ತು ಇತರ ಅಲಂಕಾರ…ಹೀಗೆ ಹಳೆಯ ಸ್ಟೈಲ್‌ಗೆ ಹೊಸ ಮೆರಗು ನೀಡಬಹುದು. ತಿಳಿ ಅಥವಾ ಗಾಢ ನೀಲಿ ಬಣ್ಣದ ಡೆನಿಮ್ ಸ್ಕರ್ಟ್‌ನಲ್ಲೂ ಫ್ರಿಲ್, ಮೆಟಾಲಿಕ್ ಪ್ರಿಂಟ್, ಪೋಲ್ಕಾ ಡಾಟ್ಸ್, ಅನಿಮಲ್ ಪ್ರಿಂಟ್, ಚೆಕ್ಸ್, ಆ್ಯಸಿಡ್ ವಾಶ್ಡ್, ಸೈಡ್ ಸ್ಲಿಟ್, ನ್ಪೋರ್ಟ್ಸ್, ನಿಯಾನ್ ಬಣ್ಣ, ಲೆದರ್ (ಚರ್ಮ) ಪ್ಯಾಚ್‌ಗಳು, ಸ್ಟ್ರೈಪ…, ಬಟರ್‌ಫ್ಲೈ ಪ್ರಿಂಟ್, ಜಾಮೆಟ್ರಿಕ್ ಪ್ರಿಂಟ್, ಫ್ಲೋರಲ್ ಪ್ರಿಂಟ್, ರೇನ್‌ಬೋ, ಲೇಯರ್, ಡಿವೈಡೆಡ್, ಕಾರ್ಗೋ, ರಿಫ್ಡ್, ಲೇಸ್ ವರ್ಕ್, ಕ್ರೋಶಾ, ವುಲನ್ (ಉಣ್ಣೆಯ) ಡಿಸೈನ್, ಸಿಲ್ಕ್ ಪಾಕೆಟ್, ಟೈ- ಡೈ ಪ್ರಿಂಟ್… ಹೀಗೆ ಊಹೆಗಿಂತಲೂ ಹೆಚ್ಚು ಆಯ್ಕೆಗಳು ಲಭ್ಯ. ಬಟ್ಟೆ ಅಂಗಡಿಗಳಲ್ಲಿ ಸಿಗುವುದಕ್ಕಿಂತ ಹೆಚ್ಚೆಚ್ಚು ಆಯ್ಕೆಗಳು ಆನ್‌ಲೈನ್‌ನಲ್ಲಿ ಸಿಗುತ್ತವೆ.
Related Articles
ಡೆನಿಮ್‌ನಲ್ಲಿ ಚಂದ ಕಾಣಿಸುತ್ತೇನೆ ಅಂತ, ಎಲ್ಲ ಕಡೆಗೂ ಅದನ್ನು ತೊಟ್ಟುಕೊಂಡು ಹೋಗಲು ಸಾಧ್ಯವಾಗದು. ಹಬ್ಬ ಹರಿದಿನಗಳು, ಮದುವೆ ಮುಂಜಿಯಂಥ ಕಾರ್ಯಕ್ರಮಗಳಿಗೆ ಡೆನಿಮ್ ಸ್ಕರ್ಟ್ ತೊಡಲು ಸಾಧ್ಯವಿಲ್ಲ. ಪಾರ್ಟಿ, ಶಾಪಿಂಗ್, ಮಾಲ…, ಮೂವಿ, ವೆಕೇಶನ್, ಕಾಲೇಜು ಫೆಸ್ಟ್ ನಂಥ ಇತರ ಕ್ಯಾಶುವಲ್ ಇವೆಂಟ್‌ಗಳಿಗೆ ಕೂಲಾಗಿ ಧರಿಸಬಹುದು.
Advertisement
ಸ್ಕರ್ಟ್-ಸ್ನೀಕರ್ಸ್ ಜೋಡಿಡೆನಿಮ್ ಸ್ಕರ್ಟ್ ಜೊತೆ ಸ್ನೀಕರ್ಸ್ (ಶೂಗಳನ್ನು) ಮ್ಯಾಚ್ ಮಾಡಿ. ಗಾಢ ಬಣ್ಣದ ಸ್ಕರ್ಟ್ ಜೊತೆ ತಿಳಿ ಬಣ್ಣದ ಸ್ನೀಕರ್ಸ್, ತಿಳಿ ಬಣ್ಣದ ಲಂಗದ ಜೊತೆ ತಿಳಿ ಅಥವಾ ಗಾಢ ಬಣ್ಣದ ಸ್ನೀಕರ್ಸ್ ಎರಡನ್ನೂ ತೊಡಬಹುದು. ಹತ್ತಿಯಿಂದ ಮಾಡಲ್ಪಟ್ಟ ಈ ಉಡುಗೆ ಸೆಖೆಗಾಲದಲ್ಲಿ ತಂಪಾಗಿ, ಚಳಿಗಾಲದಲ್ಲಿ ನಮ್ಮನ್ನು ಸ್ವಲ್ಪ ಮಟ್ಟಿಗೆ ಬೆಚ್ಚಗೆ ಇರಿಸುತ್ತದೆ. ಹಾಗಾಗಿ, ನಿಮ್ಮ ಕಪಾಟಿನಲ್ಲಿ ಡೆನಿಮ್ ಸ್ಕರ್ಟ್‌ಗೆ ಜಾಗ ಮಾಡಲು ಮರೆಯಬೇಡಿ. ನೀವೇ ಡಿಸೈನರ್ ಆಗಿ
ನಿಮ್ಮ ಜೀನ್ಸ್ ಪ್ಯಾಂಟ್‌ನ ಹೊಲಿಗೆ ಬಿಚ್ಚಿ, ನಿಮ್ಮಿಷ್ಟದಂತೆ ಡೆನಿಮ್ ಸ್ಕರ್ಟ್ ಅನ್ನು ಹೊಲಿಯಬಹುದು. ಯೂಟ್ಯೂಬ್‌ನಲ್ಲಿ ಈ ಕುರಿತು ಹಲವಾರು ವಿಡಿಯೋಗಳಿವೆ. ಹೊಲಿಗೆ ಯಂತ್ರ ಅಥವಾ ಸೂಪರ್ ಗ್ಲೂ (ಗೋಂದು) ಬಳಸಿ ನೀವೇ ಡಿಸೈನರ್‌ಗಳಾಗಿ. ಫ್ಯಾಬ್ರಿಕ್ ಗ್ಲೂ ಬಳಸುವುದರಿಂದ ಬಟ್ಟೆಗೆ, ಅದರ ಬಣ್ಣಕ್ಕೆ, ಡಿಸೈನ್ ಅಥವಾ ಅದರ ಮೇಲಿರುವ ಕಸೂತಿಗೆ ಏನೂ ಹಾನಿ ಆಗುವುದಿಲ್ಲ. ಡೆನಿಮ್ ಸ್ಕರ್ಟ್ ಅನ್ನು ಒಗೆದರೂ ಗೋಂದು ಬಿಡುವುದಿಲ್ಲ. ಡೆನಿಮ್ ಲಂಗದ ಮೇಲೆ ಬೇಕಾದಂತೆ ಅಲಂಕಾರ ಕೂಡಾ ಮಾಡಬಹುದು. ಡೆನಿಮ್ ವೈವಿಧ್ಯ
ಡೆನಿಮ್ ಲಂಗ ಅಂದ್ರೆ ಕೇವಲ ಮಿನಿ ಸ್ಕರ್ಟ್ ಅಷ್ಟೇ ಅಲ್ಲ. ಪ್ಯಾಂಟ್, ಮುಕ್ಕಾಲು ಪ್ಯಾಂಟ್‌ನಷ್ಟು ಉದ್ದದ ಲಂಗವೂ ಆಗಿರಬಹುದು ಅಥವಾ ಶಾರ್ಟ್ಸ್ನಂತೆ ಕಾಣುವ ಲಂಗವೂ ಆಗಿರಬಹುದು. ಇದರಲ್ಲೂ ಏ-ಲೈನ್, ಪೆನ್ಸಿಲ್ ಸ್ಕರ್ಟ್, ಫಿಶ್ ಕಟ್, ಬೆಲ್ ಬಾಟಮ್, ಪ್ಲೀಟೆಡ್, ಲೋ ವೇಸ್ಟ್, ಹೈ ವೇಸ್ಟ್, ಫ್ರಂಟ್ ಸ್ಲಿಟ್, ಲಾಂಗ್ ಬಾಟಮ… ಹೀಗೆ ನಾನಾ ಆಯ್ಕೆಗಳಿವೆ. ದೇಹದ ಆಕಾರ, ಎತ್ತರಕ್ಕೆ ತಕ್ಕಂತೆ ಇವುಗಳನ್ನು ಆಯ್ಕೆ ಮಾಡಿಕೊಳ್ಳಿ. ಡೆನಿಮ್ ಲಂಗದ ಜೊತೆ ಡೆನಿಮ್ ಅಂಗಿ, ಬಿಳಿ ಅಂಗಿ ತೊಟ್ಟರೆ ಸ್ಟೈಲಿಶ್ ಲುಕ್ ಸಿಗುತ್ತದೆ. ಈ ಲಂಗದ ಅಂದ ಹೆಚ್ಚಿಸಲು ಸ್ಟೈಲಿಶ್ ಬೆಲ್ಟ… (ಸೊಂಟ ಪಟ್ಟಿ) ಧರಿಸಿ! – ಅದಿತಿಮಾನಸ ಟಿ. ಎಸ್.