Advertisement

ಡ್ವೇನ್‌ ಬ್ರಾವೊ ಗಾಯಾಳು

08:47 PM Apr 04, 2019 | Team Udayavani |

ಮುಂಬಯಿ: ಮುಂಬೈ ಇಂಡಿಯನ್ಸ್‌ ವಿರುದ್ಧದ ಪಂದ್ಯದ ವೇಳೆ ಚೆನ್ನೈ ತಂಡದ ಆಲ್‌ರೌಂಡರ್‌ ಡ್ವೇನ್‌ ಬ್ರಾವೊ ಸ್ನಾಯುಸೆಳೆತಕ್ಕೆ ಒಳಗಾಗಿದ್ದು, ಮುಂದಿನ ಪಂದ್ಯದಲ್ಲಿ ಆಡುವುದು ಅನುಮಾನ ಎನ್ನಲಾಗಿದೆ.

Advertisement

ಈ ವಿಷಯವನ್ನು ತಂಡದ ನಾಯಕ ಎಂ.ಎಸ್‌. ಧೋನಿ ಪಂದ್ಯದ ಅನಂತರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.

“ಬ್ರಾವೊ ಸ್ನಾಯು ಸೆಳೆತಕ್ಕೆ ಸಿಲುಕಿದ್ದಾರೆ. ನಾವು ಹಲವು ಆಟಗಾರರನ್ನು ಗಾಯಾದ ಕಾರಣದಿಂದಾಗಿಯೇ ಕಳೆದುಕೊಳ್ಳುತ್ತಿದ್ದೇವೆ. ಡೇವಿಡ್‌ ವಿಲ್ಲಿಗೆ ಅವರದೇ ಆದ ಸಮಸ್ಯೆಗಳಿವೆ. ಲುಂಗಿಸಾನಿ ಎನ್‌ಗಿಡಿ ಆರೋಗ್ಯ ಉತ್ತಮವಾಗಿಲ್ಲ. ಈಗ ಬ್ರಾವೊ ಸರದಿ. ಮುಂದಿನ ಪಂದ್ಯದ ವೇಳೆ ಪಿಚ್‌ ಅರಿತುಕೊಂಡು ಅದಕ್ಕೆ ತಕ್ಕಂತೆ ತಂಡವನ್ನು ರೂಪಿಸಲಿದ್ದೇವೆ’ ಎಂದು ಧೋನಿ ಹೇಳಿದರು.

ಚೆನ್ನೈ ತನ್ನ ಮುಂದಿನ ಪಂದ್ಯವನ್ನು ಶನಿವಾರ ಪಂಜಾಬ್‌ ವಿರುದ್ಧ ಚೆನ್ನೈಯಲ್ಲೇ ಆಡಲಿದೆ.

Advertisement

Udayavani is now on Telegram. Click here to join our channel and stay updated with the latest news.

Next