Advertisement

ಬಾಂಗ್ಲಾದಲ್ಲಿ ವಿಶ್ವದ  ಅತೀ ಕುಬ್ಜ ಕರು ಜನನ

12:04 AM Jul 09, 2021 | Suhan S |

ಢಾಕಾ: ವಿಶ್ವದ ಅತ್ಯಂತ ಕುಬಗಜ ಕರುವೊಂದು ಬಾಂಗ್ಲಾ ದೇಶದ ರಾಜಧಾನಿ ಢಾಕಾ ಹತ್ತಿರವಿರುವ ಚರಿಗ್ರಾಮ್‌ ಎಂಬ ಪುಟ್ಟ ಹಳ್ಳಿಯಲ್ಲಿ ಜನಿಸಿದೆ.

Advertisement

ಕೇವಲ 26 ಇಂಚು (66 ಸೆಂ.ಮೀ.) ಎತ್ತರ, 26 ಕೆಜಿ ತೂಕವಿರುವ ಇದಕ್ಕೆ ರಾಣಿ ಎಂದು ಹೆಸರಿಡಲಾಗಿದೆ.  ಈ ಬಗ್ಗೆ ಪ್ರತಿಕ್ರಿಯಿಸಿರುವ ಈ ಕರುವಿನ ಮಾಲಕರಾದ ರೀನಾ ಬೇಗಂ, ಈಗಾಗಲೇ ವಿಶ್ವದ ಅತಿ ಕುಬj ಕರುವೆಂದು ಗಿನ್ನೆಸ್‌ ದಾಖಲೆಗೆ ಸೇರಿರುವ ಕರುವಿಗಿಂತ ನಮ್ಮ ಕರು 10 ಸೆಂ.ಮೀ. ಗಿಡ್ಡವಾಗಿದೆ. ಹಾಗಾಗಿ, ಇದಕ್ಕೆ ಗಿನ್ನೆಸ್‌ ದಾಖಲೆ ಪಟ್ಟ ಸಿಗಬಹುದೆಂಬ ನಿರೀಕ್ಷೆಯಲ್ಲಿ ಇದ್ದೇನೆ” ಎಂದಿದ್ದಾರೆ.

ಸ್ಟಾರ್‌ ಆದ “ರಾಣಿ’: ಕರುವಿನ ವಿಷಯ ಬಾಂಗ್ಲಾದ ಸುದ್ದಿ ಮಾಧ್ಯಮಗಳಲ್ಲಿ ಬಿತ್ತರಗೊಂಡ “ರಾಣಿ’ ರಾತೋರಾತ್ರಿ ಸ್ಟಾರ್‌ ಆಗಿಬಿಟ್ಟಿದ್ದಾಳೆ! ಇದನ್ನು ನೋಡಲು ಸಾಗರೋ ಪಾದಿಯಲ್ಲಿ ಜನರು ಆಗಮಿಸುತ್ತಿದ್ದಾರೆ. ಢಾಕಾದಲ್ಲಿ ಕೊರೊನಾ ಹಿನ್ನೆಲೆಯಲ್ಲಿ ಸಾರಿಗೆ ವ್ಯವಸ್ಥೆ ನಿಲ್ಲಿಸಿದ್ದರೂ, ಜನರು  ವಾಹನಗಳಲ್ಲಿ ಆಗಮಿಸುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next