Advertisement

ದ್ವಾರಸಮುದ್ರ ಕೆರೆ ಏರಿ ಕಾಮಗಾರಿ ವಿಳಂಬ

04:43 PM Aug 29, 2021 | Team Udayavani |

ಹಳೇಬೀಡು: ದ್ವಾರಸಮುದ್ರ ಕೆರೆ ಏರಿ ಬಿರುಕು ಬಿಟ್ಟು ದುರಸ್ತಿ ಕಾರ್ಯ ಸುಮಾರು 3.30ಕೋಟಿ ರೂ. ವೆಚ್ಚದಲ್ಲಿ ಕಾಮಗಾರಿ ಪ್ರಾರಂಭವಾಗಿ ಆರೇಳು ತಿಂಗಳಾದರೂ ಕಾಮಗಾರಿ ಇನ್ನೂ ಮುಗಿಯುವ ಹಂತ ತಲುಪಿಲ್ಲ ಎಂದು ಸ್ಥಳೀಯರ ಆರೋಪಿಸಿದ್ದಾರೆ.

Advertisement

ವಿಶ್ವ ಪ್ರಸಿದ್ಧ ಹೊಯ್ಸಳೇಶ್ವರ ದೇವಾಲಯವಿರುವ ಪ್ರಸಿದ್ಧಕ್ಷೇತ್ರ ಹಳೇಬೀಡು. ಇಲ್ಲಿನ ದ್ವಾರಸಮುದ್ರಕೆರೆಯೂ ಪ್ರಸಿದ್ಧಿ ಪಡೆದಿದ್ದು, ಈ ಕೆರೆಯನ್ನು ಸುಮಾರು9 ನೇ ಶತಮಾನದಲ್ಲಿ ರಾಷ್ಟ್ರ ಕೂಟರ ದೊರೆ ಧುೃವ ನಿರ್ಮಿಸಿದ್ದನು.12 ವರ್ಷಗಳ ಹಿಂದೆಕೆರೆ ತುಂಬಿದ್ದು ಬಿಟ್ಟರೆ, ಬಳಿಕೆ ಅಂದರೆ ಆರು ತಿಂಗಳ ಹಿಂದೆ ನೀರು ತುಂಬಿತ್ತು.ಕೆರೆ ಏರಿ ಭಾಗದಲ್ಲಿ ಬಿರುಕು ಬಿಟ್ಟ ಕಾರಣ ನೀರನ್ನು ಇತರ ಕೆರೆಗಳಿಗೆ ಹರಿಸಿ ಕೆರೆಯ ನೀರನ್ನು ತಗ್ಗಿಸಲಾಗಿದೆ.

163 ಮೀ. ಪ್ರದೇಶದಲ್ಲಿ ದುರಸ್ತಿಕಾರ್ಯ: ಸಣ್ಣ ನೀರಾವರಿ ಇಲಾಖೆ, ಅಂತರ್ಜಲ ಅಭಿವೃದ್ಧಿ ಇಲಾಖೆಯಿಂದ ಕಾಮಗಾರಿ ಪ್ರಾರಂಭಿಸಿದ್ದು, ತೀವ್ರ ಕುಸಿದಿರುವ ಸುಮಾರು163 ಮೀ.ಕೆರೆ ಏರಿ ಪ್ರದೇಶವನ್ನು ಮಳೆಗಾಲ ಪ್ರಾರಂಭವಾಗುವ ಮುನ್ನವೇಕಾಮಗಾರಿ ಮುಗಿಸುವ ಗುರಿ ಇಟ್ಟುಕೊಂಡು
ಕೆಲಸ ಪ್ರಾರಂಭಿಸಲಾಯಿತು. ಸಂಬಂಧಿತ ಇಲಾಖೆಗೆ ಎಂಜಿನಿಯರ್‌ಗಳು ಸ್ಥಳದಲ್ಲೇ ಇದ್ದು, ಕಾಮಗಾರಿ ಪರಿಶೀಲನೆ ನಡೆಸಿ ಗುಣಮಟ್ಟದ ಕೆಲಸಕ್ಕಾಗಿ ಶ್ರಮಿಸುತ್ತಿದ್ದಾರೆ. ಇತ್ತೀಚೆಗೆ ಮಳೆಗಾಲದ ಕಾರಣ ನೀಡಿ ಕಾಮಗಾರಿ ವಿಳಂಬವಾಗಿದ್ದು, ಜನರ ಆಕ್ರೋಕ್ಕೆಕಾರಣವಾಗಿದೆ.

ಶಾಸಕರರಿಂದ ಕಾಮಗಾರಿ ಪರಿಶೀಲನೆ: ದುರಸ್ತಿಕಾರ್ಯ ಪರಿಶೀಲನೆಗೆ ಬೇಲೂರು ಶಾಸಕ ಕೆ.ಎಸ್‌ ಲಿಂಗೇಶ್‌ ಪ್ರತಿ ವಾರಕ್ಕೊಮ್ಮೆ ಸ್ಥಳಕ್ಕೆ ಭೇಟಿ ನೀಡಿ ಅಧಿಕಾರಿಗಳು ಮತ್ತು ಎಂಜಿನಿಯರ್‌ ಜತೆ ಚರ್ಚಿಸಿ ಯಾವುದೇ ಲೋಪಗಳು ಬಾರದಂತೆ ಕಾಮಗಾರಿ ವ್ಯವಸ್ಥತವಾಗಿ ಮುಗಿಸುವಂತೆ ಸೂಚಿಸಿದ್ದಾರೆ. ಈ ಕುರಿತು ಪ್ರತಿಕ್ರಿಯಿಸಿದ ಸಣ್ಣ ನೀರಾವರಿ ಇಲಾಖೆಯಕಾರ್ಯಪಾಲಕ ಎಂಜಿನಿಯರ್‌ ಸತೀಶ್‌,ಕೆರೆ
ಏರಿ ದುರಸ್ತಿ ಆರಂಭಿಸಿದ್ದು, ಪ್ರಾರಂಭದಲ್ಲಿ ದ್ವಾರಸಮುದ್ರಕರೆಯಲ್ಲಿರುವ ಸುಮಾರು3-4 ಅಡಿಗಳಷ್ಟು ನೀರನ್ನು ಹೊರತೆಗೆದುಕಾಮಗಾರಿ ಮಾಡಬೇಕಾಯಿತು. ಅಲ್ಲದೆ ಮಳೆಗಾಲವಿರುವ ಕಾರಣ ಸಮಯ ತೆಗೆದುಕೊಂಡಿದೆ.ಕೇವಲ ಮೂರು ತಿಂಗಳಲ್ಲಿಯೇಕೆರೆ ಏರಿ ದುರಸ್ತಿಕಾರ್ಯ
ಮುಗಿಸಿ ಗುಣಮಟ್ಟದ ವ್ಯವಸ್ಥಿತ ಕೆರೆ ಏರಿಯನ್ನು ಬಿಟ್ಟುಕೊಡುವುದಾಗಿ ಶಾಸಕರಿಗೆ ತಿಳಿಸಿರುವುದಾಗಿ ಹೇಳಿದರು.

ಇದನ್ನೂ ಓದಿ:ಬಿಜೆಪಿಯವರ ಯೋಗ್ಯತೆಗೆ ಸುರೇಶ್ ಅಂಗಡಿಯವರ ಮೃತದೇಹ ಬೆಳಗಾವಿಗೆ ತರಲಾಗಲಿಲ್ಲ: ಡಿಕೆ ಶಿವಕುಮಾರ್

Advertisement

ಶಾಶ್ವತ ವ್ಯವಸ್ಥೆ ಕಲ್ಪಿಸಿದರೆ ಅನುಕೂಲ ನಮ್ಮ ಜೀವನಾಡಿ ದ್ವಾರಸಮುದ್ರಕೆರೆ ಇದರಿಂದಲೇ ಹೋಬಳಿ ಸುತ್ತಮುತ್ತಲಿನ ಹಳ್ಳಿಗಳ ರೈತರ ಜೀವನ ಸಾಗುತ್ತಿದೆ.ಕೆರೆ ಏರಿ ಬಿರುಕುಬಿಟ್ಟು ಜನತೆಗೆ ಮತ್ತು ರೈತರಿಗೆ ದೊಡ್ಡ ಆಘಾತ ಮತ್ತು ನೋವು ಉಂಟಾಗಿತ್ತು. ಆದರೆ ಇದ್ದಕ್ಕೆ ಶಿರ್ಘ‌ವಾಗಿ ಸ್ಪಂದಿಸಿ ಜಿಲ್ಲಾ ಉಸ್ತುವಾರಿ ಸಚಿವರಾದ ಗೋಪಾಲಯ್ಯರವರು ತಕ್ಷಣ ಹಣ ಬಿಡುಗಡೆ ಮಾಡಿದ್ದಾರೆ.ಕಾಮಗಾರಿ ಗುಣಮಟ್ಟದಲ್ಲಿ ಸಾಗಲು ಶಾಸಕರಾದಕೆ.ಎಸ್‌. ಲಿಂಗೇಶ್‌ ಶ್ರಮಿಸುತ್ತಿದ್ದಾರೆ. ಭಾರಿ ವಾಹನಗಳುಕೆರೆ ಏರಿ ಮೇಲೆ ಓಡಾಡುತ್ತಿರುವುದು ಕಾಮಗಾರಿಗೆ ಜತೆಗೆಕೆರೆ ಏರಿಗೂ ತೊಂದರೆ ಆಗಬಹುದು. ಶಾಶ್ವತವಾಗಿ ಭಾರಿ ವಾಹನಗಳನ್ನುಕೆರೆ ಏರಿ ಮೇಲೆ ಓಡಾಡುವುದನ್ನು ಶಾಶ್ವತವಾಗಿ ನಿಷೇಧಿಸಿ ಬದಲಿ ರಸ್ತೆ ವ್ಯವಸ್ಥೆ
ಕಲ್ಪಿಸಿದರೆಕೆರೆ ಏರಿ ಸುರಕ್ಷಿತವಾಗಿರುತ್ತದೆ ಎಂದು ಶಂಭೂನಹಳ್ಳಿ ರೈತ ಸುರೇಶ್‌ ತಿಳಿಸಿದರು.

ಕೆರೆ ಕೋಡಿ ಭಾಗದ ಜನರ ಪರದಾಟ: ಸ್ವಲ್ಪ ತುಂತುರು ಮಳೆ ಬಂದರೂ ಕೆರೆ ಏರಿ ಕೋಡಿ ಆಚೆಗಿನ ಗೋಣಿಸೋಮನಹಳ್ಳಿ, ಸೊಪ್ಪಿನಹಳ್ಳಿ, ಘಟ್ಟದಹಳ್ಳಿ, ಗಂಗೂರು, ಚಟ್ನಳ್ಳಿ, , ತಟ್ಟೇಹಳ್ಳಿ, ರಾಜಗೆರೆ, ಕ್ಯಾತನಕೆರೆ ಸೇರಿದಂತೆ ಹತ್ತಾರು ಹಳ್ಳಿಗಳ ಜನರಿಗೆ ಹಳೇಬೀಡು ಹೋಬಳಿಯ ಸಂಪರ್ಕಕ್ಕೆ ಹರಸಾಹಸ ಪಟಡಬೇಕಾದ ಪರಿಸ್ಥಿತಿ ನಿರ್ಮಾಣವಾಗುವುದರಿಂದಕಾಮಗಾರಿ ಪೂರ್ಣ ಮುಗಿದು ಯಾವಾಗ ನಮಗೆ ಉತ್ತಮ ರಸ್ತೆ ದೊರೆಯುತ್ತದೆಯೋ ಎಂದು ಜನರುಕಾಯುತ್ತಿದ್ದಾರೆ.

ಮಂದಗತಿ ಕಾಮಗಾರಿಗೆ ಸಚಿವ ಬೇಸರ
ದ್ವಾರ ಸಮುದ್ರ ಕೆರೆ ಏರಿ ಬಿರುಕು ಬಿಟ್ಟ ದಿನದಿಂದ ತುರ್ತು ಹಣ ಬಿಡುಗಡೆ ಮಾಡಿಸುವುದರ ಜವಾಬ್ದಾರಿ ಜತೆಗೆ ಕೆರೆ ಏರಿ ಸ್ಥಿತಿಗಿತಿ,
ನೀರಿನ ಶೇಖರಣೆ ಮಟ್ಟ ಹಾಗೂನೀರನ್ನು ಹೊರತೆಗೆದು ಕಾಮಗಾರಿ ಪ್ರಾರಂಭಿಸಿದರೆ ರೈತರ ಬೋರ್‌ವೆಲ್‌ಗ‌ಳಿಗೆ ಬೇಸಿಗೆ ಕಾಲದಲ್ಲಿ ಸಮಸ್ಯೆ
ಎದುರಾವುದೇ ಎಂಬ ಎಲ್ಲಾ ವಿಷಯಗಳನ್ನು ಅಧಿಕಾರಿಗಳ ಜತೆ ಸಭೆ ನಡೆಸಿ ರೈತರಿಗೆ ತೊಂದರೆ ಆಗದಂತೆ ನೀರನ್ನು ಕಡಿಮೆ ಪ್ರಮಾಣದಲ್ಲಿ ಕಾಮಗಾರಿಗೆ ತೊಂದರೆ ಆಗದಂತೆ ಹೊರತೆಗೆದು ಶೀರ್ಘ‌ ಕಾಮಗಾರಿ ಮಾಡುವಂತೆ ಸೂಚಿಸಿದರೂ ಕಾಮಗಾರಿ ಆಮೇಗತಿಯಲ್ಲಿ ನಡೆಯುತ್ತಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಗೋಪಾಲಯ್ಯಬೇಸರ ವ್ಯಕ್ತಪಡಿಸಿದ್ದಾರೆ.

ರಸ್ತೆ ಅಗಲೀಕರಣ, ದುರಸ್ತಿಕಾರ್ಯ ಗುಣಮಟ್ಟದಲ್ಲಿ ಸಾಗುತ್ತಿದೆ. ದ್ವಾರಸಮುದ್ರ ಕೆರೆಯ ಮುಂಭಾಗದ ಕೋಡಿಯಿಂದ 1-2 ಕಿ.ಮೀ ಮತ್ತೊಂದು ತುದಿಯಕೆರೆ ಕೋಡಿವರಗೆಕೆರೆ ಏರಿಯನ್ನು ಅಗಲೀಕರಣ ಮಾಡಿ ತಡೆಗೋಡೆಯನ್ನು ಎರಡೂ ಕಡೆ ನಿರ್ಮಿಸಿ ಆನಂತರಕೆರೆ ಪ್ರಾರಂಭದಿಂದ ಕಡೆಯವರೆಗೂ ರಸ್ತೆಬದಿಯಲ್ಲಿ ದೀಪದ ವ್ಯವಸ್ಥೆ ಮಾಡಲಾಗುವುದು.
– ಕೆ.ಎಸ್‌. ಲಿಂಗೇಶ್‌, ಬೇಲೂರು ಕ್ಷೇತ್ರ ಶಾಸಕ

ಮಳೆ ಬಂದರೆ ಸಾಕು ಬೈಕ್‌ ಸವಾರರು ಆಟೋ ಚಾಲಕರು ಹಲವು ಬಾರಿ ಕೆರೆ ಏರಿ ರಸ್ತೆಯಲ್ಲಿ ಸಾಗುವಾಗ ಬಿದ್ದು ಆಸ್ಪತ್ರೆ ಸೇರಿದ ಸಂಗತಿಗಳು ಪ್ರತಿ ವಾರದ ಸಂತೆದಿನ ಸಾಮಾನ್ಯವಾಗಿಬಿಟ್ಟಿದೆ. ದಯಮಾಡಿ ಕಾಮಗಾರಿ ಚುರುಕುಗೊಳಿಸಿ ಜನರಿಗೆ ಅನುಕೂಲ ಮಾಡಿಕೊಡಬೇಕು.
– ಶಿವಣ್ಣ , ರೈತ ಮುಖಂಡ
ಲಿಂಗಪ್ಪನಕೊಪ್ಪಲು.

– ಎಂ.ಸಿ.ಕುಮಾರ್‌

Advertisement

Udayavani is now on Telegram. Click here to join our channel and stay updated with the latest news.

Next