Advertisement
ಈ ಕೆರೆ ಸಮುದ್ರಾಕಾರ ರೀತಿಯಲ್ಲಿದ್ದು ಕೆರೆ ವಿಸ್ತಿರ್ಣ ಸುಮಾರು 850 ಹೆಕ್ಟೇರ್ ವ್ಯಾಪಿಸಿದೆ. 14 ವರ್ಷಗಳ ನಂತರ ಎರಡನೇ ಬಾರಿ ದ್ವಾರಸಮುದ್ರ ಕರೆ ಒಡಲು ತುಂಬಿದ್ದು ಭಾರೀ ಮಳೆ ನಡುವೆಯೂ ಪ್ರವಾಸಿಗರನ್ನು ಸೆಳೆದಿದೆ. ಇಲ್ಲಿ ಬೋಟಿಂಗ್ ವ್ಯವಸ್ಥೆ, ಕೆರೆ ಮಧ್ಯದಲ್ಲಿ ಒಂದು ಸುಂದರ ದ್ವೀಪ, ಅದರಲ್ಲಿ ಹಲವಾರು ದೇಶಗಳ ಪಕ್ಷಿ ಬಂದು ಮೊಟ್ಟೆಗಳನ್ನು ಇಟ್ಟು ಅದರ ರಕ್ಷಣೆ ಮಾಡುತ್ತದೆ. ಹಳೇಬೀಡು ಗ್ರಾಮದ ಮಳೆಯರು ಕೋಡಿ ಸ್ಥಳದಲ್ಲಿರುವ ಬಸವಣ್ಣನ ಮೂರ್ತಿಗೆ ಪೂಜೆ ಸಲ್ಲಿಸಿ ಗಂಗೆ ಪೂಜೆ ಮಾಡಿ ವರುಣ ದೇವನಿಗೆ ನಮಸ್ಕಾರ ಸಲ್ಲಿಸಿ, ಆನಂತರ ಕೆರೆ ಕೋಡಿ ನೀರಿನಲ್ಲಿ ಮಿಂದೆದ್ದು, ಕುಣಿದು ಕುಪ್ಪಳಿಸಿ ಸಂತೋಷ ಪಡುತ್ತಿರುವ ದೃಶ್ಯ ಮನಮೋಹಕವಾಗಿದೆ.
Related Articles
Advertisement
ಇದರ ಪರಿಣಾಮ ಎಂಬಂತೆ ಕಳೆದ ವರ್ಷ ಕೈ-ದಳ ಸಮಿಶ್ರ ಸರ್ಕಾರದಲ್ಲಿ ಮಾನ್ಯ ಸಿಎಂ ಎಚ್.ಡಿ.ಕುಮಾರಸ್ವಾಮಿ ಅವರು ಸ್ಥಳೀಯ ಶಾಸಕ ಕೆ.ಎಸ್.ಲಿಂಗೇಶ್ ಒತ್ತಡ, ಹಲವು ಸ್ವಾಮೀಜಿಗಳ ಹೋರಾಟಕ್ಕೆ ಮಣಿದು ತಮ್ಮ ಸರ್ಕಾ ರದ ಅವಧಿಯ ಬಜೆಟ್‌ನಲ್ಲಿ ಸುಮಾರು 100 ಕೋಟಿ ಹಣವನ್ನು ರಣಘಟ್ಟ ಯೋಜನೆ ಮೀಸಲಿಟ್ಟರು. ಆದರೆ ಬದಲಾದ ರಾಜಕೀಯ ಸನ್ನಿವೇಶಗಳಿಂದ ಸಮಿಶ್ರ ಸರ್ಕಾರ ಬಿದ್ದು ಹೋದ ಮೇಲೆ ಹಣ ಬಿಡು ಗಡೆಯ ಭಾಗ್ಯ ದೊರೆಯಲಿಲ್ಲ. ಆದರೆ ಬಿಜೆಪಿ ಸರ್ಕಾರ ಬಂದ ಮೇಲೆ ಮಾಜಿ ಸಿಎಂ ಬಿಎಸ್‌ವೈ, ಕುಮಾರಸ್ವಾಮಿ ಬಜೆಟ್‌ನಲ್ಲಿ ಮೀಸಲಿಟ್ಟ ಹಣಕ್ಕೆ ಅನುಮೋದನೆ ನೀಡಿದರು.
ಇದರಿಂದ ರಣಘಟ್ಟ ಶಾಶ್ವತ ನೀರಾವರಿ ಯೋಜನೆ ಜೀವ ಪಡೆಯಿತು. ಈಗಾಗಲೇ ಕಾಮಗಾರಿ ಪ್ರಾರಂಭವಾಗಿದ್ದು, ಸುಮಾರು 200 ಮೀಟರ್ ಸುರಂಗ ಮಾರ್ಗ ನಿರ್ಮಾಣ ಕಾಮ ಗಾರಿ ಮುಗಿದಿದೆ. 3 ಕಿ.ಮೀ. ಸುರಂಗ ಮಾರ್ಗದ ಕಾಮಗಾರಿ ಆಗಬೇಕಿದ್ದು, 2 ವರ್ಷಗಳಲ್ಲಿ ಕಾಮಗಾರಿ ಮುಗಿಸುವುದಾಗಿ ಕಾಮ ಗಾರಿ ಟೆಂಡರ್ ಪಡೆದಿರುವ ಬಿಎಸ್‌ಆರ್ ಕಂಪನಿ ತಿಳಿಸಿದೆ.
ಮಳೆ ಉತ್ತಮವಾಗಿ ಸುರಿಯುತ್ತಿರುವುದರಿಂದ ಶ್ವ ಪ್ರಸಿದ್ಧ ದ್ವಾರಸಮುದ್ರ ಕೆರೆಗೆ ಸಾಕಷ್ಟು ಪ್ರಮಾಣದಲ್ಲಿ ನೀರು ಹರಿದು ಬಂದಿದೆ. ಹೂವಿನ ಜತೆ ನಾರು ಸ್ವರ್ಗ ಸೇರಿತ್ತು ಎಂಬಂತೆ ಕೆರೆ ತುಂಬಲು ಏತನೀರಾವರಿ ಯೋಜನೆ ಕೂಡ ಸಹಕಾರಿಯಾಗಿದೆ. ಮಳೆ ಮತ್ತು ಏತನೀರಾವರಿ ಯೋಜನೆ ಸೇರಿ ದ್ವಾರಸಮುದ್ರ ಕೆರೆವರ್ಷದಲ್ಲಿ ಎರಡನೇ ಬಾರಿ ತುಂಬಿದೆ. ಈ ಭಾಗದ ರೈತರು ದಶಕಗಳಿಂದ ಕಾಯುತ್ತಿರುವ ರಣಘಟ್ಟ ಯೋಜನೆ ನನಸು ಮಾಡುವದೇ ನನ್ನ ಗುರಿ – ಕೆ.ಎಸ್.ಲಿಂಗೇಶ್, ಬೇಲೂರು ಕ್ಷೇತ್ರ ಶಾಸಕ
– ಡಾ. ಎಂ.ಸಿ ಕುಮಾರ್