Advertisement
ನಾಯಕ ನಟ, ಹಾಸ್ಯ ನಟ, ಪೋಷಕ ನಟ, ನಿರ್ಮಾಪಕ, ನಿರ್ದೇಶಕ ಹೀಗೆ ಚಿತ್ರರಂಗದಲ್ಲಿನ ಎಲ್ಲ ಪಾತ್ರಗಳನ್ನು ನಿರ್ವಹಿಸಿದ ಕೆಲವೇ ಕೆಲವು ಜನರಲ್ಲಿ ದ್ವಾರಕೀಶ್ ಕೂಡ ಒಬ್ಬರು.
Related Articles
Advertisement
ಅನಂತರದಲ್ಲಿ ರಾಜ್‌ಕುಮಾರ್ ಅವರ ಭಾಗ್ಯವಂತರು, ಸ್ವತಃ ತಾನೇ ನಾಯಕನಾಗಿ ನಟಿಸಿದ ಕುಳ್ಳ ಏಜೆಂಟ್ 000, ಕೌವ್ ಬಾಯ್ ಕುಳ್ಳ ಚಿತ್ರಗಳನ್ನು ನಿರ್ಮಿಸಿದರು. ಕುಳ್ಳ ಏಜೆಂಟ್ 000 ಚಿತ್ರದಲ್ಲಿನ “ಆಡು ಆಟ ಆಡು’ ಹಾಡಿಗೆ ಹಿಂದಿಯ ಖಾತ್ಯ ಗಾಯಕ ಕಿಶೋರ್‌ಕುಮಾರ್ ಅವರನ್ನು ಕರೆತಂದಿದ್ದು ಅವರ ಸಾಧನೆ ಮತ್ತು ಅಂದಿನ 70ರ ದಶಕದಲ್ಲಿ ಒಂದು ಹಾಡಿಗೆ ಕಿಶೋರ್‌ಕುಮಾರ್‌ಗೆ ದೊಡ್ಡ ಮೊತ್ತದ ಸಂಭಾವನೆ ನೀಡಿದ್ದರು.
ಅನಂತರದಲ್ಲಿ ದ್ವಾರಕೀಶ್ ವಿಷ್ಣುವರ್ಧನ್‌ರ ಕಳ್ಳ ಕುಳ್ಳ , ಕಿಟ್ಟು ಪುಟ್ಟು , ರಾಯರು ಬಂದರು ಮಾವನ ಮನೆಗೆ, ಇಂದಿನ ರಾಮಾಯಣ, ಗಲಾಟೆ ಸಂಸಾರ, ಪ್ರೀತಿ ಮಾಡು ತಮಾಷೆ ನೋಡು ಸಹಿತ ಹಲವಾರು ಚಿತ್ರಗಳಲ್ಲಿ ನಟಿಸಿ ಜನಪ್ರಿಯ ಜೋಡಿಯಾಗಿದ್ದರು ಮತ್ತು ಗುರು ಶಿಷ್ಯರು, ಪ್ರಚಂಡ ಕುಳ್ಳ, ನ್ಯಾಯ ಎಲ್ಲಿದೆ, ಪೆದ್ದ ಗೆದ್ದ, ಪೋಲಿಸ್ ಪಾಪಣ್ಣ , ಮನೆ ಮನೆ ಕಥೆ, ಕಲಾವಿದ ಹೀಗೆ ಹಲವಾರು ಚಿತ್ರಗಳಲ್ಲಿ ಅಭಿನಯಿಸಿದ್ದರು.
ದ್ವಾರಕೀಶ್ ತಮ್ಮ ನಿರ್ದೇಶನದ ನೀ ಬರೆದ ಕಾದಂಬರಿ, ಡ್ಯಾನ್ಸ್ ರಾಜ ಡ್ಯಾನ್ಸ್ , ಮಿಡಿದ ಶುತ್ರಿ ಹೀಗೆ ಹಲವಾರು ಪ್ರಸಿದ್ಧ ಚಿತ್ರಗಳ ಮೂಲಕ ಹೊಸ ಕಲಾವಿದರನ್ನು ಚಿತ್ರರಂಗಕ್ಕೆ ಪರಿಚಯಿಸಿದ್ದಾರೆ. ಹೀಗೆ ತಮ್ಮ 81ನೇ ವಯಸ್ಸಿನಲ್ಲಿ ನಿಧನಹೊಂದಿದ ದ್ವಾರಕೀಶ್ ಸಾವು ಕನ್ನಡ ಚಿತ್ರರಂಗಕ್ಕೆ ತುಂಬಲಾರದ ನಷ್ಟವೆಂದರೆ ತಪ್ಪಾಗಲಾರದು, ದ್ವಾರಕೀಶ್‌ರ ಆತ್ಮಕ್ಕೆ ಶಾಂತಿ ಸಿಗಲೆಂದೂ ರಾಜ್ಯದ ಜನತೆಯ ಪರವಾಗಿ ದೇವರಲ್ಲಿ ಪ್ರಾರ್ಥಿಸೋಣ.
-ರಾಸುಮ ಭಟ್
ಕುವೆಂಪು ವಿಶ್ವವಿದ್ಯಾಲಯ