Advertisement

10ರಿಂದ ಧ್ವನಿ ಬೆಳಕು ಕಾರ್ಯಕ್ರಮ: ಡೀಸಿ

03:28 PM Oct 07, 2019 | Team Udayavani |

ಶ್ರೀರಂಗಪಟ್ಟಣ: ಶ್ರೀರಂಗಪಟ್ಟಣದ ಇತಿಹಾಸ ಬಿಂಬಿಸುವ ಧ್ವನಿ-ಬೆಳಕು ಕಾರ್ಯಕ್ರಮ ಅ.10ರಿಂದ ಪ್ರತಿನಿತ್ಯ ಸಂಜೆ 7ರಿಂದ 7.40ರ ವರೆಗೆ ನಡೆಯಲಿದೆ ಎಂದು ಜಿಲ್ಲಾಧಿಕಾರಿ ಡಾ.ಎಂ.ವಿ. ವೆಂಕಟೇಶ್‌ ಹೇಳಿದರು.

Advertisement

ಪಟ್ಟಣದಲ್ಲಿ ಧ್ವನಿ-ಬೆಳಕು ಕಾರ್ಯಕ್ರಮ ಪುನರ್‌ ಆರಂಭಗೊಳ್ಳುವ ಹಿನ್ನೆಲೆಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದರು. ಅ.10ರಿಂದ ಪ್ರತಿನಿತ್ಯ 7 ರಿಂದ 7.40ರ ವರೆಗೆ ಕಾರ್ಯಕ್ರಮ ಆರಂಭಗೊಳ್ಳಲಿದೆ. ದೇಶದ ಇತಿಹಾಸ ದಲ್ಲೇ ಮೊದಲ ಧ್ವನಿ-ಬೆಳಕು ಕಾರ್ಯ ಕ್ರಮ ಇದಾಗಿದೆ. ಸ್ಥಳೀಯ, ರಾಜ್ಯ, ಅಂತಾರಾಷ್ಟ್ರೀಯ ಪ್ರವಾಸಿಗರನ್ನು ಸೆಳೆ ಯುವ ಉದ್ದೇಶದಿಂದ ಪ್ರತಿನಿತ್ಯ ಕಾರ್ಯ ಕ್ರಮ ಆಯೋಜಿಸಲಾಗುವುದು ಎಂದರು.

ಶ್ರೀರಂಗಪಟ್ಟಣದ ಗತವೈಭವ, ಪರಂಪರೆಯನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಉದ್ದೇಶದಿಂದ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ. ಜೊತೆಗೆ ಶ್ರೀರಂಗಪಟ್ಟಣ ಇತಿಹಾಸ ವೈಭವ ಮರುಕಳಿಸುವ ನವರಾತ್ರಿ ವೈಭವವನ್ನೂ ನಿರಂತರವಾಗಿ ನಡೆಸಲು ನಿರ್ಧರಿಸಲಾಗಿದೆ. ಪ್ರಥಮವಾಗಿ ಕನ್ನಡದಲ್ಲಿ ಕಾರ್ಯಕ್ರಮ ಪ್ರದರ್ಶನ ನಡೆಯಲಿದೆ. ಬಳಿಕ

ಆಂಗ್ಲ ಭಾಷೆಯಲ್ಲೂ ಧ್ವನಿ-ಬೆಳಕು ಕಾರ್ಯಕ್ರಮ ಪ್ರದರ್ಶನ ನಡೆಸುವ ಚಿಂತನೆ ಹೊಂದಿದ್ದೇವೆಂದರು. ಈ ಸಂದರ್ಭದಲ್ಲಿ ಚಿತ್ರ ನಿರ್ದೇಶಕ ಟಿ.ಎಸ್‌ ನಾಗಾಭರಣ, ಕಾರ್ಯಕ್ರಮದ ಆಯೋಜಕ ಕೃಷ್ಣ ಕುಮಾರ್‌, ನಿರ್ದೇಶಕ ವಾಸು ದೀಕ್ಷಿತ್‌, ನಟ ಅರ್ಜುನ್‌, ರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತ ಎಂ.ಕೆ. ರಾಮಕೃಷ್ಣ, ಜಿಪಂ ಸಿಇಒ ಯಾಲಕ್ಕಿಗೌಡ , ಉಪವಿಭಾಗಾಧಿಕಾರಿ ಶೈಲಜಾ, ಪ್ರವಾಸೊದ್ಯಮ ಇಲಾಖೆ ಹರೀಶ್‌ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next