Advertisement

ದಾವಿವಿ ಹೊರಗುತ್ತಿಗೆ ನೌಕರರ ಬೇಡಿಕೆಗಳ ಈಡೇರಿಕೆ ಭರವಸೆ

01:19 PM Feb 28, 2017 | |

ದಾವಣಗೆರೆ: ವಿವಿಧ ಬೇಡಿಕೆಗಳ ಈಡೇರಿಕೆ ಆಗ್ರಹಿಸಿ ದಾವಣಗೆರೆ ವಿಶ್ವವಿದ್ಯಾನಿಲಯದ ಸಿ ಮತ್ತು ಡಿ ಗ್ರೂಪ್‌ ಹೊರಗುತ್ತಿಗೆ ನೌಕರರ ಸಂಘದಿಂದ ಆರಂಭಗೊಳಿಸಿದ್ದ 48 ಗಂಟೆಗಳ ಧರಣಿ, ಮೊದಲ ದಿನವೇ ಅಂತ್ಯಗೊಂಡಿದೆ. ತೋಳಹುಣಸೆ ಗ್ರಾಮದ ಹೊರವಲಯದಲ್ಲಿರುವ ಶಿವಗಂಗೋತ್ರಿಯ ವಿವಿ ಮುಂಭಾಗದಲ್ಲಿ ಸೋಮವಾರ ಯುಟಿಯುಸಿ ನೇತೃತ್ವದಲ್ಲಿ ಧರಣಿ ನಡೆಸಿದ ನೌಕರರು, ತಮ್ಮ ಬೇಡಿಕೆ ಈಡೇರಿಕೆಗೆ ವಿವಿ ಅಧಿಕಾರಿಗಳು ಸ್ಪಂದಿಸಲು ಧರಣಿ ನಡೆಸಿ ಒತ್ತಾಯಿಸಿದರು.

Advertisement

ವಿವಿ ಅಧಿಕಾರಿಗಳು, ಗುತ್ತಿಗೆದಾರ ಸಕಾರಾತ್ಮಕವಾಗಿ ಸ್ಪಂದಿಸಿದ ಹಿನ್ನೆಲೆಯಲ್ಲಿ ಧರಣಿ ವಾಪಸ್‌ ಪಡೆಯಲಾಯಿತು. ಇದಕ್ಕೂ ಮುನ್ನ ಧರಣಿನಿರತರನ್ನುದ್ದೇಶಿಸಿ ಮಾತನಾಡಿದ ಸಂಘದ ಗೌರವ ಕಾರ್ಯದರ್ಶಿ ಮಂಜುನಾಥ ಕುಕ್ಕವಾಡ, ವಿಶ್ವವಿದ್ಯಾನಿಲಯದಲ್ಲಿ 165ಕ್ಕೂ ಹೆಚ್ಚು ಕಾರ್ಮಿಕರು ಹೊರಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿದ್ದಾರೆ.

ಕಾರ್ಮಿಕರಿಗೆ ಕನಿಷ್ಠ ವೇತನ, ವೇತನ ಚೀಟಿ, ಸೆಕ್ಯೂರಿಟಿ ಗಾರ್ಡಗಳಿಗೆ ವಾರದ ರಜೆ ಸೌಲಭ್ಯ, ಇಎಸ್‌ಐ, ಇಪಿಎಫ್‌ ಸೌಲಭ್ಯ ಕೊಡುತ್ತಿಲ್ಲ. ಈ ಸವಲತ್ತು ಪಡೆಯಲು ಸಂಘಟಿತ ಹೋರಾಟವೊಂದೇ ಮಾರ್ಗ ಎಂದರು. ಗುತ್ತಿಗೆದಾರ ಬಿ.ಕೆ.ಆರ್‌.ಸ್ವಾಮಿ ಅವರೊಂದಿಗೆ ವಿವಿ ಕುಲಸಚಿವ ಡಾ| ಶರಣಪ್ಪ ವೈಜನಾಥ ಹಲಸೆ ಸಭೆ ನಡೆಸಿ ಕನಿಷ್ಠ ವೇತನ ನೀಡಲು ಕ್ರಮ  ವಹಿಸಬೇಕು.

ಪ್ರತಿ ತಿಂಗಳು ಒಂದನೇ ತಾರೀಖೀನಂದೇ ವೇತನ ಪಾವತಿ ಜೊತೆಗೆ ವೇತನ ಚೀಟಿ ನೀಡಬೇಕು. ಇಎಸ್‌ಐ ಮತ್ತು ಪಿಎಫ್‌ ಗೊಂದಲ ಕೂಡಲೇ ಬಗೆಹರಿಸಬೇಕು ಹಾಗೂ ಸೆಕ್ಯೂರಿಟಿ ಗಾರ್ಡ್‌ಗಳಿಗೆ ವಾರದಲ್ಲಿ ಒಂದು ರಜೆ ನೀಡಲೇಬೇಕೆಂದು ಒತ್ತಾಯಿಸಿದರು. ವಿವಿ ಕುಲಸಚಿವರು, ಗುತ್ತಿಗೆದಾರ ಹಾಗೂ ಕಾರ್ಮಿಕ ಮುಖಂಡರ ಜೊತೆ ಸಭೆ ನಡೆಸಿ, ಸಮಸ್ಯೆ ಪರಿಹರಿಸುವ ಭರವಸೆ ನೀಡಿದ ಹಿನ್ನೆಲೆಯಲ್ಲಿ 48 ಗಂಟೆಯ ಮುಷ್ಕರ ಹಿಂಪಡೆಯಲಾಯಿತು. 

ಸಂಘದ ಉಪಾಧ್ಯಕ್ಷರಾದ ಎಲ್‌. ಎಚ್‌. ಪ್ರಕಾಶ್‌, ಆರ್‌. ತಿಪ್ಪೇಶ್‌, ಸಹಕಾರ್ಯದರ್ಶಿಗಳಾದ ಸಿ.ಎಚ್‌. ಜಗದೀಶ್‌, ವಿಜಯಮ್ಮ, ಖಜಾಂಚಿ ಪಿ. ಮಂಜುನಾಥ್‌, ಆಲ್‌ ಇಂಡಿಯಾ ಯುಟಿಯುಸಿಯ ಮಂಜುನಾಥ್‌  ರೆಡ್ಡಿ, ಶಿವಾಜಿರಾವ್‌ ಪ್ರತಿಭಟನೆಯ ನೇತೃತ್ವ ವಹಿಸಿದ್ದರು. 

Advertisement
Advertisement

Udayavani is now on Telegram. Click here to join our channel and stay updated with the latest news.

Next