Advertisement
ಪುತ್ರ ಶೋಕದ ಅರಿವು ನನಗೂ ಇದೆಸಚಿವರು ಭೇಟಿಯಾದ ಸಂದರ್ಭ ಮೃತನ ತಂದೆಯ ತನಿಯಪ್ಪ ಮಡಿವಾಳ ಅವರು ಸಚಿವರ ಅಂಗೈಯಲ್ಲಿ ಮುಖವಿಟ್ಟು ಕಣ್ಣೀರಿಟ್ಟರು. ಸಚಿವರು ಮಾತನಾಡಿ ನಿಮಗಾದ ಅನ್ಯಾಯಕ್ಕೆ ಸಾಂತ್ವನ ಹೇಳಲಷ್ಟೇ ಸಾಧ್ಯ. ಮಗನನ್ನು ಕಳೆದುಕೊಂಡಾಗ ಆಗುವ ನೋವನ್ನು ನಾನೂ ಅರಿತಿದ್ದೇನೆ. ಅನುಭವಿಸಿದ್ದೇನೆ. ನಿಮ್ಮ ಜತೆ ನಾವಿದ್ದೇವೆ ಎಂದು ಧೈರ್ಯ ತುಂಬಿದರು. ಮೃತನ ತಾಯಿ ಮತ್ತು ಸಹೋದರಿಯರಲ್ಲಿ ಮಾತನಾಡಿ, ನಿಮಗೆ ನೀವೇ ಸಮಾಧಾನ ಮಾಡಿಕೊಳ್ಳಬೇಕಷ್ಟೆ. ಪರಿಹಾರ ಎಂಬುದಿಲ್ಲ ಎಂದು ಸ್ವತ: ಗದ್ಗದಿತರಾದರು.
ಜಿಲ್ಲಾ ಉಸ್ತುವಾರಿ ಸಚಿವರಾಗಲಿ, ಮುಖ್ಯಮಂತ್ರಿಯಾಗಲೀ ಶರತ್ ಹತ್ಯೆಯನ್ನು ಮಾಡಿದ ಹಂತಕರನ್ನು ಬಂಧಿಸಬೇಕು ಎಂದು ಹೇಳಿಕೆ ನೀಡಿಲ್ಲ. ಹಿಂದೂ ಸಂಘಟನೆಯ ಕಾರ್ಯಕರ್ತರು ಮತ್ತು ನಾಯಕರನ್ನು ಬಂಧಿಸುವಂತೆ ಪೊಲೀಸರಿಗೆ ನಿರ್ದೇಶನ ನೀಡುತ್ತಾರೆ. ಅಂದರೆ ಜಿಲ್ಲೆಯ ಪರಿಸ್ಥಿತಿ ಎಲ್ಲಿಗೆ ಬಂದಿದೆ. ಇವರು ಬಯಸುವುದು ಅಶಾಂತಿಯ ಮೂಲಕ ರಾಜಕೀಯ ಉದ್ದೇಶವನ್ನು ಎಂದು ಬಿಜೆಪಿ ನೇತಾರ ರಾಜೇಶ್ ನಾೖಕ್ ಉಳಿಪಾಡಿಗುತ್ತು ಹೇಳಿದರು. ಶರತ್ ಶವಯಾತ್ರೆಯ ಸಂದರ್ಭದಲ್ಲಿ ಪೊಲೀಸ್ ಅಧೀಕ್ಷಕರ ಸಮ್ಮುಖದಲ್ಲಿ ನಾವು ಪಾಣೆಮಂಗಳೂರು ಹತ್ತಿರ ಇದ್ದಾಗ ಬಿ.ಸಿ.ರೋಡ್ ಪರ್ಲಿಯದಲ್ಲಿ ಕಲ್ಲೆಸೆತದ ಮಾಹಿತಿ ಬಂದಿದೆ. ನಮ್ಮ ಪ್ರಮುಖ ನಾಯಕರು ಪೊಲೀಸರ ಜತೆಗೆ ಇರುವುದು ಸ್ಪಷ್ಟ ತಿಳಿದಿದ್ದರೂ, ದುಷ್ಕರ್ಮಿಗಳು ಕಲ್ಲೆಸೆತ ಮಾಡಿದ್ದು ಖಚಿತ ಗೊತ್ತಿದ್ದರೂ ಹಿಂದೂ ನಾಯಕರ ಮೇಲೆ ಪೊಲೀಸರು ಪ್ರಕರಣ ದಾಖಲಿಸಿರುವುದು ಯಾರ ಕುಮ್ಮಕ್ಕಿನಿಂದ ಎಂದು ಪ್ರಶ್ನಿಸಿದರು.
Related Articles
ಶಾಂತಿಯನ್ನು ಕಾಯುವಲ್ಲಿ ಪೊಲೀಸರಿಗೆ ಸಹಕಾರ ನೀಡಿದವರ ಮೇಲೆ ಪ್ರಕರಣ ದಾಖಲಿಸಿರುವ ಪೊಲೀಸ್ ವರಿಷ್ಠರು ರಾಜಕೀಯ ಕುಮ್ಮಕ್ಕಿನಿಂದ ಅಶಾಂತಿ ಸೃಷ್ಟಿಸಿದವರ ಪರವಾಗಿ ಕೆಲಸ ಮಾಡುತ್ತಿದ್ದಾರೆ ಎಂಬ ಗುಮಾನಿ ಜನ ಸಾಮಾನ್ಯರಿಗೂ ಅರ್ಥವಾಗುತ್ತಿದೆ. ಹಿಂದೂಗಳ ಮೇಲೆ ದೌರ್ಜನ್ಯ ನಡೆಯುತ್ತಿದೆ. ಅದಕ್ಕೆ ಬೆಂಬಲ ನೀಡುತ್ತಿರುವುದು ಸ್ಪಷ್ಟವಾಗಿದೆ ಎಂದರು.
Advertisement
ದೇಶದಲ್ಲಿ ತುರ್ತು ಪರಿಸ್ಥಿತಿ ಇದ್ದಂತಹ ಕಾಲದಲ್ಲಿಯೂ ಆಡಳಿತ ವ್ಯವಸ್ಥೆ ಇಷ್ಟೊಂದು ಕೆಟ್ಟದಾಗಿರಲಿಲ್ಲ. ಶಾಂತಿಯುತವಾಗಿ ಸಾಗುತ್ತಿದ್ದ ಮೆರ ವಣಿಗೆಯಲ್ಲಿ ಇದ್ದವರನ್ನು ಬಂಧಿಸಲು ಸೂಚನೆ ನೀಡುವಷ್ಟರ ಮಟ್ಟಿಗೆ ಇಂದಿನ ಆಡಳಿತ ಸೂಚನೆ ನೀಡುವುದಾದರೆ ಜಿಲ್ಲೆಯಲ್ಲಿ ನ್ಯಾಯ ಎಲ್ಲಿದೆ ಎಂದು ಪ್ರಶ್ನಿಸಿದರು. ಪೊಲೀಸರು ನಿಜವಾದ ಕ್ರಿಮಿನಲ್ ಆರೋಪಿಗಳನ್ನು ಬಂಧಿಸಲಿ, ದುಷ್ಕರ್ಮಿಗಳನ್ನು ತಂದೊಪ್ಪಿಸುವಂತೆ ಅವರಿವರಿಗೆ ದುಂಬಾಲು ಬೀಳುವುದು ಬೇಡ. ಕ್ರಿಮಿನಲ್‌ಗಳನ್ನು ಬೆಂಬತ್ತಿ ಹಿಡಿಯಿರಿ. ಎಲ್ಲಿವರೆಗೆ ಹಿರಿಯ ಪೊಲೀಸ್ ಅಧಿಕಾರಿಗಳು ನಿಷ್ಪಕ್ಷವಾಗಿ ಕೆಲಸ ಮಾಡುವುದಿಲ್ಲವೋ ಅಲ್ಲಿವರೆಗೆ ಸಮಸ್ಯೆ ಪರಿಹಾರ ಆಗಲು ಸಾಧ್ಯವೇ ಎಂದು ತಿಳಿಸಿದರು.
ಬಿಜೆಪಿ ಕ್ಷೇತ್ರ ಸಮಿತಿ ಅಧ್ಯಕ್ಷ ಬಿ.ದೇವದಾಸ ಶೆಟ್ಟಿ, ಕಾರ್ಕಳ ಶಾಸಕ, ಪ್ರತಿಪಕ್ಷ ನಾಯಕ ಸುನಿಲ್ ಕುಮಾರ್, ಕ್ಯಾ| ಗಣೇಶ್ ಕಾರ್ಣಿಕ್, ಜಿಲ್ಲಾ ಬಿಜೆಪಿ ಅಧ್ಯಕ್ಷ ಸಂಜೀವ ಮಠಂದೂರು,ಮಾಜಿ ಶಾಸಕ ಎ. ರುಕ್ಮಯ ಪೂಜಾರಿ, ಯೋಗೀಶ್ ಭಟ್, ಮೋನಪ್ಪ ಭಂಡಾರಿ, ಜಿ. ಆನಂದ, ಕಿಶೋರ್ ಕುಮಾರ್ ಬೊಟ್ಯಾಡಿ, ರಂಜನ್ ಗೌಡ ಬೆಳ್ತಂಗಡಿ, ದಿನೇಶ್ ಭಂಡಾರಿ ಬಂಟ್ವಾಳ, ಪುರಸಭಾ ಸದಸ್ಯ ಎ.ಗೋವಿಂದ ಪ್ರಭು, ಅಶೋಕ ರೈ ಪುತ್ತೂರು, ರಾಮ್‌ದಾಸ್ ಬಂಟ್ವಾಳ ಸಹಿತ ಇತರ ಪ್ರಮುಖರು ಉಪಸ್ಥಿತರಿದ್ದರು.