ಬೆಂಗಳೂರು: ಅಯೋಧ್ಯೆಯಲ್ಲಿ ಶ್ರೀರಾಮಮಂದಿರ ನಿರ್ಮಾಣಕ್ಕಾಗಿ ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದಲ್ಲಿ ಶನಿವಾರ
ನಿಧಿ ಸಂಗ್ರಹ ಅಭಿಯಾನಕ್ಕೆ ಕೇಂದ್ರ ಸಚಿವ ಡಿ. ವಿ. ಸದಾನಂದ ಗೌಡ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಸಂಘ ಪರಿವಾರದ ನೇತೃತ್ವದಲ್ಲಿ ನಡೆದ ಅಯೋಧ್ಯೆ ಆಂದೋಲನವು ಭಾರತೀಯ ಸಮಾಜದಲ್ಲಿ ಜಾಗೃತಿ, ಒಗ್ಗಟ್ಟು, ಸಾಮರಸ್ಯ ಮೂಡಿಸಿತು. ದೇಶಭಕ್ತಿಯನ್ನು ಜಾಗೃತಗೊಳಿಸಿತು ಎಂದು ಹೇಳಿದರು.
ದೇಶದ ಸರ್ವೋತ್ಛ ನ್ಯಾಯಾಲಯವು ರಾಮಜನ್ಮಭೂಮಿ ಪರವಾಗಿ ತೀರ್ಪು ನೀಡಿತು. ನಮ್ಮ ಸುದೈವಕ್ಕೆ ನರೇಂದ್ರ ಮೊದಿಯವರ ನೇತೃತ್ವದ ಬಿಜೆಪಿ ಸರ್ಕಾರ ಇರುವಾಗಲೇ ಈ ತೀರ್ಪು ಬಂತು. ಹೀಗಾಗಿ, ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಅಗುತ್ತಿದೆ ಎಂದು ತಿಳಿಸಿದರು.
ಇದನ್ನೂ ಓದಿ:ವೃತ್ತಿಪರರಿಗೆ ಯುಎಇ ಪೌರತ್ವ : ಕೊಲ್ಲಿ ರಾಷ್ಟ್ರದ ಮಹತ್ವದ ನಿರ್ಧಾರ
ನಿಧಿ ಸಂಗ್ರಹ ಅಭಿಯಾನಕ್ಕೆ ಮಾರ್ಗದರ್ಶನ ಮಾಡಿದ ಸಂಘದ ಹಿರಿಯರಾದ ಶ್ರೀಧರ್ ಜೀ , ಸಂಘ ಪರಿವಾರದ ಕಾರ್ಯಕರ್ತರು ಪ್ರತಿಯೊಂದು ವಾರ್ಡ್ ಪ್ರತಿಯೊಬ್ಬರ ಮನೆಗೂ ತೆರಳಿ ಮಂದಿರ ನಿರ್ಮಾಣದ ಬಗ್ಗೆ ಇನ್ನಷ್ಟು ಅರಿವು ಮೂಡಿಸಬೇಕು. ಜನಸಾಮಾನ್ಯರು ಪ್ರೀತಿಯಿಂದ ನೀಡುವ ಎಷ್ಟೇ ಸಣ್ಣ ಮೊತ್ತವಾದರೂ ಅಷ್ಟೇ ಪ್ರೀತಿಯಿಂದ ಸ್ವೀಕರಿಸಬೇಕು ಎಂದು ಹೇಳಿದರು.
ಸಚಿವ ಕೆ. ಗೋಪಾಲಯ್ಯ, ಶಾಸಕರಾದ ಸಂಜೀವ್ ಮಠಂದೂರ್, ಡಾ ವೈ. ಎ. ನಾರಾಯಣಸ್ವಾಮಿ , ಪ್ರತಾಪಸಿಂಹ ನಾಯಕ, ಜಿಲ್ಲಾಧ್ಯಕ್ಷ ಬಿ ನಾರಾಯಣ, ಮಾಜಿ ಉಪಮಹಾಪೌರ ಎಸ್ ಹರೀಶ್, ಮಾಜಿ ಶಾಸಕ ನೆ ಲ ನರೇಂದ್ರ ಬಾಬು ಹಾಜರಿದ್ದರು.