Advertisement

ಡಿವಿ ಸದಾನಂದ ಗೌಡರ ಮನೆಯಲ್ಲಿ ಸಂಭ್ರಮ

01:43 AM May 31, 2019 | Team Udayavani |

ಮಂಡೆಕೋಲು: ಸುಳ್ಯ ತಾಲೂಕಿನ ಮಂಡೆಕೋಲು ಗ್ರಾಮದ ದೇವರಗುಂಡ ಮೂಲದ ಸದಾನಂದ ಗೌಡರು ದ್ವಿತೀಯ ಬಾರಿಗೆ ಕೇಂದ್ರ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ ಕ್ಷಣ ಅವರ ಮೂಲ ಮನೆಯಲ್ಲಿ ಸಂಭ್ರಮದ ವಾತಾವರಣ ಮೂಡಿತು.

Advertisement

ಸದಾನಂದ ಗೌಡ ಅವರ ಸಹೋದರ ದಿ| ಭಾಸ್ಕರ ಗೌಡ ಅವರ ಪತ್ನಿ ವೀಣಾ, ಪುತ್ರ ಮತ್ತು ಸೊಸೆ ಈ ಮನೆಯಲ್ಲಿ ವಾಸವಾಗಿದ್ದಾರೆ. ಡಿವಿಎಸ್‌ ಅವರು ಸಚಿವರಾಗುವ ನಿರೀಕ್ಷೆ ಇದ್ದ ಕಾರಣ ಅವರ ಕುಟುಂಬಸ್ಥರು ದೇವರಗುಂಡ ಮನೆಗೆ ಆಗಮಿಸಿ ಟಿವಿ ಮೂಲಕ ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮ ವೀಕ್ಷಿಸಿದರು. ಬಳಿಕ ಸಿಹಿ ಹಂಚಿ ಸಂಭ್ರಮಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next