Advertisement

ಕಪ್ಪು ಪಟ್ಟಿ ಧರಿಸಿ ಭೂ ಮಾಪನಾ ಇಲಾಖೆ ಸಿಬ್ಬಂದಿ ಕರ್ತವ್ಯ

09:33 AM Aug 20, 2019 | Suhan S |

ಹುಬ್ಬಳ್ಳಿ: ಕರ್ನಾಟಕ ರಾಜ್ಯ ಭೂ-ಮಾಪನ, ಕಂದಾಯ ವ್ಯವಸ್ಥೆ ಮತ್ತು ಭೂದಾಖಲೆಗಳ ಕಾರ್ಯನಿರ್ವಾಹಕ ನೌಕರರ ಸಂಘದಿಂದ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ 31ರ ವರೆಗೆ ಕಪ್ಪು ಪಟ್ಟಿ ಪ್ರದರ್ಶನ, ಸೆ. 4ರಂದು ಬೆಂಗಳೂರ ಚಲೋ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

Advertisement

ಭೂ-ಮಾಪನ ಇಲಾಖೆ ಸಿಬ್ಬಂದಿ ಇಲಾಖೆಯಲ್ಲಿ ಅನುಭವಿಸುತ್ತಿರುವ ಹಲವಾರು ಸಮಸ್ಯೆಗಳನ್ನು ಪರಿಹರಿಸಬೇಕೆಂದು ಒತ್ತಾಯಿಸಿ ಸರಕಾರದ ಗಮನ ಸೆಳೆಯುವ ನಿಟ್ಟಿನಲ್ಲಿ ಸೋಮವಾರದಿಂದ ಕಪ್ಪು ಪಟ್ಟಿ ಧರಿಸಿಕೊಂಡು ಕೆಲಸ ನಿರ್ವಹಿಸುತ್ತಿದ್ದಾರೆ.

ಪ್ರತಿ ತಿಂಗಳು 30 ಕಡತಗಳ ವಿಲೇವಾರಿ ಅವೈಜ್ಞಾನಿಕವಾಗಿದ್ದು, ಅದನ್ನು ಕೂಡಲೇ ಕೈಬಿಡಬೇಕು. ಇಲಾಖೆಯಿಂದ ಪ್ರಯಾಣ ಭತ್ಯೆ 600 ರೂ. ಬದಲಾಗಿ 2000 ಸಾವಿರಕ್ಕೆ ಹೆಚ್ಚಿಸಬೇಕು. ಅಂಚೆವೆಚ್ಚವನ್ನು ಇಲಾಖೆಯಿಂದ ಭರಿಸಬೇಕು. ಇಲಾಖೆಯಲ್ಲಿ ಜವಾನರ ಕೊರತೆ ಇದ್ದು, ಅವರನ್ನು ನೇಮಕ ಮಾಡಬೇಕು. ದಾಖಲಾತಿಗಳ ಕೊಠಡಿಯಲ್ಲಿ ದಾಖಲೆಗಳ ರಕ್ಷಣೆಗೆ ಕ್ರಮ ಕೈಗೊಳ್ಳಬೇಕು.

ಪ್ರತಿ 30 ವರ್ಷಗಳಿಗೊಮ್ಮೆ ಸರ್ವೇ ಮಾಡಬೇಕು. ಆದರೆ 1914ರಲ್ಲಿ ಆಗಿರುವ ಸರ್ವೇ ನಂತರ ಇದುವರೆಗೂ ಸರ್ವೇ ಮಾಡಲಾಗಿಲ್ಲ. ಈ ಎಲ್ಲ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಕಪ್ಪು ಪಟ್ಟಿ ಪ್ರದರ್ಶನ ಮಾಡಲಾಗುತ್ತಿದ್ದು, ಇದಕ್ಕೂ ಸರಕಾರ ಸ್ಪಂದಿಸದೆ ಇದ್ದಲ್ಲಿ ಸೆ. 4ರಂದು ಬೆಂಗಳೂರು ಚಲೋ ಹಮ್ಮಿಕೊಳ್ಳಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next