Advertisement
ಸರ್ವ ವಿಷ್ಣುಮಯನಾದ ಶ್ರೀ ದತ್ತನು ಬ್ರಹ್ಮ-ಮಹೇಶ್ವರರ ಆಂಶೀ ಭೂತನಾಗಿರು ವನು. ತ್ರಿಮೂ ರ್ತಿಗಳ ಏಕತೆಯಿಂದೊಡ ಗೂಡಿದ ಅವತಾರವೇ ಶ್ರೀ ದತ್ತಗುರು. ಶ್ರೀ ದತ್ತಾವತಾರವು ನಿತ್ಯನೂತನವೂ ಸತ್ಯವೂ ಶುದ್ಧವೂ ಶಾಶ್ವತವೂ ಮತ್ತು ನಿರಾಮಯವೂ ಆಗಿರುತ್ತದೆ. ಶ್ರೀದತ್ತ ಪ್ರಭುವು ಗುರು ಸ್ವರೂಪದಿಂದಲೇ ಪ್ರಕಟನಾದವನು. ಯಾವ ಪುಣ್ಯಾತ್ಮನು ಆತನನ್ನು ಭಕ್ತಿಯಿಂದ ಸೇವಿಸುವನೋ ಅಂತಹವನಿಗೆ ತನ್ನನ್ನೇ ಅರ್ಪಣೆ ಮಾಡಿಕೊಳ್ಳುವ ಸ್ವಭಾವವುಳ್ಳವನಾದುದರಿಂದ ಆತನಿಗೆ ದತ್ತನಾಮದ ಅಭಿದಾನವಾಯಿತು. ಶ್ರೀ ದತ್ತನು ಗುರುವೂ ಹೌದು, ದೇವನೂ ಹೌದು. ಆದುದರಿಂದಲೇ ಆತನನ್ನು ಶ್ರೀ ಗುರುದೇವದತ್ತನೆಂದು ಸಂಭೋಧಿಸುತ್ತೇವೆ. ಶ್ರೀದತ್ತನು ಏಕತೆಯ ರಹಸ್ಯ, ಏಕತ್ವದ ಪ್ರತಿನಿಧಿ, ಸರ್ವದೇವತಾ ಸ್ವರೂಪಿ. ಸರ್ವಶಕ್ತಿಸಂಪನ್ನನಾದ ಶ್ರೀದತ್ತನ ಆರಾಧನೆ ಮಾಡಿದರೆ ಸಕಲ ದೇವತೆಗಳ ಆರಾಧನೆ ಮಾಡಿದ ಫಲ ಲಭಿಸುತ್ತದೆ. ಶ್ರೀ ದತ್ತಾತ್ರೇಯನು ಗುರುವಿನ ಗುರು. ವಿಶ್ವಗುರುವಾದ ಆತನಿಗೆ ಗುರುವಿಲ್ಲ. ಆತನು ಆತ್ಮ ತಣ್ತೀದ, ಗುರು ತಣ್ತೀದ ಪ್ರತೀಕನು. ಬ್ರಹ್ಮವಿದ್ಯೆಯ ಮೇರು ಪರ್ವತವಾದ ಶ್ರೀದತ್ತನು ಸರ್ವ ಸಿದ್ಧಾಂತಗಳನ್ನು ಪ್ರತಿಪಾದಿಸುವ ಮಹಾಗುರು.
ಶ್ರೀ ದತ್ತ ನಾಮಸ್ಮರಣೆ, ಭಜನೆಯು ಬ್ರಹ್ಮತತ್ವದ ಅರಿವಿಗೆ ಸೋಪಾನ. ಶ್ರೀ ದತ್ತನು ಗುರುದೇವನಾದುದರಿಂದ ಆತನ ಉಪಾಸನೆ, ಆರಾಧನೆಯನ್ನು ಗುರುರೂಪದಲ್ಲಿಯೇ ಮಾಡಿ ದರೆ ಅಧಿಕ ಶ್ರೇಯಸ್ಕರ. ಗುರುಭಕ್ತಿಯೇ ಪರಮಾರ್ಥದ ಉಗಮಸ್ಥಾನ. ಶ್ರೀ ದತ್ತಗುರುಗಳು ಅತುಲ್ಯರಾದ ಸಾರ್ವಕಾಲಿಕ ಗುರುಗಳು. ಶ್ರೀ ದತ್ತಗುರುಗಳ ಶಿಷ್ಯ ಪರಂಪರೆ ಅಸಂಖ್ಯವಾದುದು. ಇಂದಿಗೂ ಅದು ಮುಂದುವರಿಯುತ್ತಿದೆ. ವರ್ತಮಾನದಲ್ಲಿಯೂ ಶ್ರೀ ದತ್ತಗುರುಗಳು ಅನೇಕ ರೀತಿಯ ಅನುಗ್ರಹ ಮಾಡುತ್ತಿದ್ದಾರೆ. ಯಜು, ಸಹಸ್ರರ್ಜುನ, ಪರಶು ರಾಮ ಈ ಎಲ್ಲ ಮಹಾತ್ಮರು ಆತನ ನಾಮಾಂಕಿತ ಶಿಷ್ಯರು. ಶ್ರೀ ದತ್ತ ಪ್ರಭುವಿನ ಅನೇಕ ಅವತಾರಗಳಿವೆ. ಅವುಗಳೆಲ್ಲ ಆತನ ಸಗುಣ ಸಾಕ್ಷಾತ್ಕಾರದ ಪ್ರತೀಕಗಳು. ಭಕ್ತರಲ್ಲಿ ಸಾಧ ನೆಯ ಮನೋವೃತ್ತಿಯು ಶ್ರೀ ದತ್ತಾತ್ರೇಯ ಭಗವಂತನ ಕೃಪೆಯಿಂದಲೇ ಉದಯಿಸುತ್ತದೆ. ಗುರು ತಣ್ತೀವನ್ನು ಅರಿಯದೆ ಮಾಡಿದ ಆರಾಧನೆಯು ವ್ಯರ್ಥ ವಾಗುತ್ತದೆ. ಗುರುಕೃಪೆ ಯಿಂದಲೇ ಭಕ್ತನಿಗೆ ದೇವರ ಕೃಪೆಯಾಗುತ್ತದೆ. ಶ್ರೀ ಗುರು ಚರಿತ್ರೆ
ಅಗಾಧವಾದ ಮಹಿಮೆಯ ನ್ನೊಳಗೊಂಡ ಶ್ರೀ ಗುರು ಚರಿತ್ರೆಯು ಗುರು-ಶಿಷ್ಯ ಪರಂಪರೆಯ ಮಹಾನ್ ಗ್ರಂಥ. ಅದು ಗುರುಭಕ್ತರಿಗಾಗಿರುವ ಜ್ಞಾನಕೋಶ, ಭಕ್ತರ ಜೀವನದ ಕೈಪಿಡಿ. ಗುರುಭಕ್ತಿ ಶಾಸ್ತ್ರವೆಂದೇ ಪರಿಗಣಿಸಲ್ಪಟ್ಟ ಪವಿತ್ರ ಗ್ರಂಥವಿದು. ಶ್ರೀ ದತ್ತಗುರುಗಳ ಅವತಾರ ಲೀಲೆಗಳನ್ನು ಪ್ರಚುರಪಡಿಸುವ ದಿವ್ಯಗ್ರಂಥವದು. ನರರೂಪದಿಂದ ಅವತರಿ ಸಿದ ಶ್ರೀಪಾದ ಶ್ರೀ ವಲ್ಲಭರ, ತ್ರಿಮೂರ್ತಿ ದತ್ತಾತ್ರೇಯ ಸ್ವರೂಪಿ ಶ್ರೀ ನರಸಿಂಹ ಸರಸ್ವತೀ ಯತಿಗಳ ಪಾವನಕರವಾದ ಚರಿತ್ರೆಯೇ ಶ್ರೀ ಗುರುಚರಿತ್ರೆ. ಅದರ ಪಠಣದ ಮೂಲಕ ಶ್ರೀ ದತ್ತನ ಕೃಪಾಪ್ರಸಾದಕ್ಕೆ ಭಕ್ತರು ಪಾತ್ರರಾಗಬಹುದು. ಅಮೃತ ಸ್ವರೂಪವಾದ ಶ್ರೀ ಗುರುಚರಿತ್ರೆಯ ಅನುಸಂಧಾನದಿಂದ ಪರಮಾ ತ್ಮನಿಗೆ ಸಂಬಂಧಿಸಿದ ಪವಿತ್ರ ಜ್ಞಾನಯೋಗ ಕೂಡ ಲಭಿಸುತ್ತದೆ. ಗುರುಭಕ್ತಿಯನ್ನು ವೃದ್ಧಿಸುವ ಶ್ರೀ ಗುರುಚರಿತ್ರೆಯು ಶ್ರೀ ದತ್ತಗುರುವಿನ ಪ್ರಸನ್ನತೆಗೆ ಕಾರಣವಾಗುತ್ತದೆ. ಶ್ರೀ ಗುರು ಚರಿತ್ರೆಯ ಅನು ಸಂಧಾನದಿಂದ ಸಾಧಕನು ಗುರುವಿಗೆ, ದೇವರಿಗೆ ಸಮೀಪದವನಾಗುತ್ತಾನೆ. ಗುರುಭಕ್ತಿಯೊಳಗೆಯೇ ಭಗವತ್ ಪ್ರಾಪ್ತಿಯ ರಹಸ್ಯವಿರುತ್ತದೆ. ದತ್ತ ಜಯಂತಿಯ ಪ್ರಯುಕ್ತ ಶ್ರೀ ದತ್ತ ಭಕ್ತರು ಮೊದಲೇ ಶ್ರೀ ಗುರುಚರಿತ್ರೆಯ ಪಾರಾಯಣವನ್ನು ಆರಂಭಿಸಿ ದತ್ತ ಜಯಂತಿಯಂದು ಮುಗಿಸುತ್ತಾರೆ.
Related Articles
ಶ್ರೀ ದತ್ತ ಜಯಂತಿ ಯಂದು ಗುರುವಿನ ಆರಾಧನೆಯ ವಿಧಿ ವಿಧಾನ ಎಂದರೆ, ಶ್ರೀ ಗುರು ಚರಿತ್ರೆ ಪಾರಾಯಣ, ಶ್ರೀ ದತ್ತ ಜಪ ಪಠಣ, ಶ್ರೀ ದತ್ತಯಾಗ, ರುದ್ರಾಭಿಷೇಕ, ಜನ್ಮೋತ್ಸವ ಆಚರಣೆ, ಪಲ್ಲಕಿ ಉತ್ಸವ, ದಿಂಡಿ, ಭಜನೆ ಇತ್ಯಾದಿ.
Advertisement
ಸುರೇಶ ಜ ಪೈ, ಹರಿಖಂಡಿಗೆ