Advertisement

ಡಚ್‌ ಅಧಿಕಾರಿಗಳ ಆತಂಕ : ಮಿಂಕ್‌ನಿಂದ ಸೋಂಕು?

01:32 PM Jun 08, 2020 | sudhir |

ಕೋವಿಡ್ ವೈರಸ್‌ ಹರಡಬಹುದು ಎಂಬ ಕಾರಣಕ್ಕೆ ಮುಂಜಾಗರೂಕತಾ ಕ್ರಮವಾಗಿ ಉಣ್ಣೆ ಉದ್ಯಮಕ್ಕಾಗಿ ಸಾಕುವ ಮಿಂಕ್‌ ಎಂದು ಕರೆಯಲಾಗುವ ಮುಂಗುಸಿಯಂಥ ಪ್ರಾಣಿಗಳ ಸಂಖ್ಯೆಯನ್ನು ಕಡಿಮೆ ಮಾಡುವಂತೆ ಡಚ್‌ ಸರಕಾರ ಆದೇಶಿಸಿದೆ.

Advertisement

ಕೋವಿಡ್ ಸೋಂಕಿಗೆ ಒಳಗಾಗಿರುವ ಈ ಪ್ರಾಣಿಗಳಿಂದ ಮನುಷ್ಯರಿಗೂ ಸೋಂಕು ತಗಲುವ ಭೀತಿಯಿದೆ ಎಂದು ಅಲ್ಲಿನ ಅಧಿಕಾರಿಗಳು ಹೇಳಿದ್ದಾರೆ. ಹೀಗಾದರೆ ಅದು ದೊಡ್ಡ ಆರೋಗ್ಯ ಸಮಸ್ಯೆ ಉಂಟು ಮಾಡಬಹುದು ಎಂಬ ಕಾರಣಕ್ಕೆ ಅವುಗಳ ಸಾಕಾಣಿಕೆಗೆ ನಿರ್ಬಂಧ ವಿಧಿಸಲಾಗಿದೆ.

ಪ್ರಸ್ತುತ ಸೋಂಕಿಗೊಳಗಾಗಿರುವ ಮಿಂಕ್‌ಗಳನ್ನು ಮಾತ್ರವೇ ನಿರ್ಮೂಲನ ಮಾಡಲು ಸರಕಾರ ಆದೇಶಿಸಿದೆ. ಆರೋಗ್ಯವಂತ ಮಿಂಕ್‌ಗಳನ್ನು ಕಾಪಾಡಲು ಇಂಥದ್ದೊಂದು ಕ್ರಮ ಅನಿವಾರ್ಯ ಎಂದು ಸರಕಾರ ಹೇಳಿದೆ. ಸುಮಾರು 10 ಫಾರ್ಮ್ಗಳಲ್ಲಿ ಸೋಂಕಿತ ಅಂದಾಜು 10,000ದಷ್ಟು ಮಿಂಕ್‌ಗಳಿವೆ ಎಂದು ಡಚ್‌ ಫ‌ುಡ್‌ ಆ್ಯಂಡ್‌ ವೇರ್ ಅಥಾರಿಟಿಯ ವಕ್ತಾರ ಫ್ರೆಡ್ರಿಕ್‌ ಹೆರ್ಮಿ ಅವರು ಹೇಳಿದ್ದಾರೆ.

ಎಪ್ರಿಲ್‌ ಸಂದರ್ಭದಲ್ಲಿ ಮಿಂಕ್‌ಗಳಿಗೆ ವೈರಸ್‌ ಸೋಂಕು ಆಗಿರುವುದು ಕಂಡು ಬಂದಿತ್ತು. ಆ ಸೋಂಕು ಬಳಿಕ ಅವುಗಳನ್ನು ನಿರ್ವಹಿಸುತ್ತಿರುವವರಿಗೂ ತಗಲಿತ್ತು. ಮೇ ತಿಂಗಳಲ್ಲಿ ಮಿಂಕ್‌ನಿಂದ ಇಬ್ಬರಿಗೆ ಕೋವಿಡ್ ಸೋಂಕು ತಗಲಿದೆ ಎಂಬುದು ಸರಕಾರದ ಗಮನಕ್ಕೆ ಬಂದಿತ್ತು.

ಪ್ರಾಣಿಗಳಿಂದಲೂ ಮನುಷ್ಯರಿಗೆ ಕೋವಿಡ್ ಸೋಂಕು ತಗಲುತ್ತದೆ ಎಂಬುದು ಸಾಬೀತಾದ ಏಕೈಕ ಪ್ರಕರಣವಿದು ಎಂದು ಹೇಳಲಾಗುತ್ತಿದೆ.

Advertisement

ಇಲ್ಲಿ ಹೆಚ್ಚು
ಚೀನ, ಡೆನ್ಮಾರ್ಕ್‌ ಮತ್ತು ಪೋಲಂಡ್‌ನ‌ಲ್ಲಿ ಜಗತ್ತಿನಲ್ಲೇ ಅತಿ ಹೆಚ್ಚು ಮಿಂಕ್‌ ಉತ್ಪಾದಕ ದೇಶಗಳಾಗಿದ್ದು, ಇಲ್ಲಿ ಪ್ರತಿವರ್ಷ ಸುಮಾರು 60 ಮಿಲಿಯನ್‌ ಮಿಂಕ್‌ಗಳನ್ನು ಕೊಲ್ಲಲಾಗುತ್ತದೆ ಎಂದು ಅಂದಾಜಿಸಲಾಗಿದೆ.

ನೆದರ್ಲೆಂಡ್‌ ಆದೇಶ
ಮಿಂಕ್‌ನಿಂದ ಮನುಷ್ಯರಿಗೂ ವೈರಸ್‌ ಹರಡುತ್ತದೆ ಎಂದು ಅಂತಾರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿದ ಬಳಿಕ, ತನ್ನ ದೇಶದಲ್ಲಿರುವ ಎಲ್ಲ ಮಿಂಕ್‌ಗಳನ್ನು ಪರೀಕ್ಷೆಗೆ ಒಳಪಡಿಸಲು ನೆದರ್ಲೆಂಡ್‌ ಅಧಿಕಾರಿಗಳು ಆದೇಶಿಸಿದ್ದರು.

ಪ್ರಾಣಿಗಳಿಂದಲೂ ಕೋವಿಡ್‌ ಸೋಂಕು ಹರಡುತ್ತದೆ ಎಂಬ ಬಗ್ಗೆ ಈ ಹಿಂದೆಯೇ ವದಂತಿ ಹರಡಿತ್ತು. ಅದಕ್ಕೆ ಪೂರಕವಾಗಿ ಈಗ ಮಿಂಕ್‌ ವಿರುದ್ಧ ಕ್ರಮ ಕೈಗೊಳ್ಳಲು ಡಚ್‌ ಅಧಿಕಾರಿಗಳು ಮುಂದಾಗಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next