Advertisement
ಅಪತ್ಬಂಧವ ರಸ್ತೆಈ ರಸ್ತೆ ಹೊಂಡಗುಂಡಿಗಳಿಂದ ಕೂಡಿದ್ದರೂ, ಅಪತ್ಬಂಧವ ರಸ್ತೆಯೂ ಹೌದು. ಕಳೆದ ಮಳೆಗಾಲದಲ್ಲಿ ಹೊಸ ಮಠ ಸೇತುವೆ ಸುಮಾರು 1 ತಿಂಗಳು ಮುಳುಗಡೆಗೊಂಡ ಸಂದರ್ಭ ಮಂಗಳೂರು ಸೇರಿದಂತೆ ಇನ್ನಿತರ ಪ್ರದೇಶಗಳಿಗೆ ಪ್ರಯಾಣಿಸುವ ವಾಹನ, ಶಾಲಾ ಕಾಲೇಜು ವಾಹನ, ಸರಕಾರಿ ಬಸ್ಸುಗಳು ಈ ರಸ್ತೆಯ ಮೂಲಕವೇ ಸಂಚರಿಸಿದ್ದು ಆಪದಾºಂಧವ ಎನಿಸಿ ಕೊಂಡಿದೆ. ಅಲ್ಲದೆ, ಕಡಬದಿಂದ ಸುಬ್ರಹ್ಮಣ್ಯ- ಧರ್ಮಸ್ಥಳ ರಾಜ್ಯಹೆದ್ದಾರಿ ಹಾಗೂ ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯನ್ನು ಸಂಪರ್ಕಿಸಲು ಈ ರಸ್ತೆ ಸುಲಭ ದಾರಿಯಾಗಿದೆ.
ಈ ರಸ್ತೆಗೆ ಡಾಮರು ಹಾಕುವಂತೆ ನೂಜಿಬಾಳ್ತಿಲ, ಕುಟ್ರಾಪಾಡಿ ಗ್ರಾಮಸಭೆಯಲ್ಲೂ ಜನರು ಆಗ್ರಹಿಸಿ ದ್ದರು. ನಿರ್ಣಯ ವನ್ನೂ ಕೈಗೊಳ್ಳಲಾಗಿತ್ತು. ಈ ರಸ್ತೆ ಯನ್ನು ಲೋಕೋ ಪಯೋಗಿ ಇಲಾಖೆಗೆ ಹಸ್ತಾಂತರಿಸಿ ದುರಸ್ತಿ ಗೊಳಿಸುವಂತೆಯೂ ಸಂಬಂಧ ಪಟ್ಟವರಿಗೆ ಮನವಿ ಮಾಡಲಾಗಿತ್ತು. 50 ಲಕ್ಷ ರೂ. ಅನುದಾನ ಮಂಜೂರು
ಕಾಯರಡ್ಕ-ಪೇರಡ್ಕ ರಸ್ತೆ ದುರಸ್ತಿಗೆ ಅನುದಾನ ಲಭ್ಯವಿದ್ದು, ಮರಳು ಹಾಗೂ ನೀರಿನ ಸಮಸ್ಯೆಯಿಂದ ಕಾಮಗಾರಿ ಆರಂಭಿಸಲು ಅಸಾಧ್ಯವಾಗಿದೆ. ಈ ರಸ್ತೆಗೆ ಲೋಕೋಪಯೋಗಿ ಇಲಾಖೆಯಿಂದ 50 ಲಕ್ಷ ರೂ. ಅನುದಾನ ಮಂಜೂರುಗೊಂಡಿದೆ. ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದೆ. ಈ ಅನುದಾನದಲ್ಲಿ ಕಾಯರಡ್ಕ ಜಂಕ್ಷನ್‌ನಿಂದ ಮುಂದಕ್ಕೆ 950 ಮೀಟರ್ ಡಾಮರು ಹಾಗೂ ಮುಂದಕ್ಕೆ ಜಿ.ಪಂ. ಮಳೆಹಾನಿ ಅನುದಾನದ 19 ಲಕ್ಷ ರೂ. ಅನುದಾನದಲ್ಲಿ ಕಾಂಕ್ರೀಟ್ ಕಾಮಗಾರಿ ನಡೆಸಲಾಗುವುದು. ಕಾಂಕ್ರೀಟ್ ಕಾಮಗಾರಿಯನ್ನು ಇನ್ನು ಕೆಲವೇ ದಿನಗಳಲ್ಲಿ ಪ್ರಾರಂಭಿಸಲು ಸೂಚಿಸಲಾಗಿದೆ ಎಂದು ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಸತ್ಯೇಂದ್ರ ಸಾಲಿಯಾನ್ ಹಾಗೂ ಕಡಬ ಸಹಾಯಕ ಎಂಜಿನಿಯರ್ ಭರತ್ ತಿಳಿಸಿದ್ದಾರೆ.
Related Articles
ತಾಲೂಕು ಕೇಂದ್ರ ಕಡಬದಿಂದ ಕಲ್ಲುಗುಡ್ಡೆಯನ್ನು ಸಂಪರ್ಕಿಸುವ ಈ ಜಿ.ಪಂ. ರಸ್ತೆಯ ಪೇರಡ್ಕದಿಂದ ಕಾಯರಡ್ಕದವರೆಗೆ ಸುಮಾರು 2 ಕಿ.ಮೀ. ತನಕ ತೀರಾ ಹದಗೆಟ್ಟಿದ್ದು, ವಾಹನ ಸವಾರರು ನಿತ್ಯ ನರಕಯಾತನೆ ಪಡುತ್ತಿದ್ದಾರೆ. ಈ ರಸ್ತೆಯು ಬೇಸಿಗೆಯಲ್ಲಿ ಧೂಳುಮಯಗೊಂಡರೆ, ಮಳೆಗಾಲದಲ್ಲಿ ಕೆಸರುಮಯಗೊಂಡು ರಸ್ತೆಯ ಹೊಂಡ-ಗುಂಡಿಗಳಲ್ಲಿ ನೀರು ತುಂಬಿಕೊಂಡು ಅಪಾಯದ ಸ್ಥಿತಿಯನ್ನು ತಂದೊಡ್ಡುತ್ತಿದೆ.
Advertisement
ಮೂರ್‍ನಾಲ್ಕು ದಿನದಲ್ಲಿ ಪ್ರಾರಂಭತೀರಾ ಹದಗೆಟ್ಟಿರುವ ಕಾಯರಡ್ಕ-ಪೇರಡ್ಕ ರಸ್ತೆಯ ದುರಸ್ತಿ ಕಾರ್ಯವನ್ನು ಮೂರ್‍ನಾಲ್ಕು ದಿನಗಳಲ್ಲಿ ಪ್ರಾರಂಭಿಸಲಾಗುವುದು. ಈ ರಸ್ತೆಗೆ ಲೋಕೋಪಯೋಗಿ ಇಲಾಖೆಯ 50 ಲಕ್ಷ ರೂ. ಅನುದಾನದಲ್ಲಿ ಕಾಯರಡ್ಕ ಜಂಕ್ಷನ್‌ನಿಂದ ಮುಂದಕ್ಕೆ 950 ಮೀ. ಡಾಮರು ಹಾಗೂ ಮುಂದಕ್ಕೆ ಜಿ.ಪಂ.ನ ಮಳೆಹಾನಿ ಅನುದಾನ 19 ಲಕ್ಷ ರೂ.ನಲ್ಲಿ ಕಾಂಕ್ರೀಟ್ ಕಾಮಗಾರಿ ನಡೆಸಲಾಗುವುದು.
ಸತ್ಯೇಂದ್ರ ಸಾಲಿಯಾನ್, ಎಇಇ, ಪುತ್ತೂರು – ದಯಾನಂದ ಕಲ್ನಾರ್