Advertisement

ಕಚೇರಿಯಲ್ಲಿ ಧೂಳು ಹಿಡಿದ ಕಿಟ್‌ಗಳು

05:18 PM Sep 07, 2017 | |

ಯಾದಗಿರಿ: 2016-17ನೇ ಸಾಲಿನ ರಾಜ್ಯವಲಯ ಯೋಜನೆಯ 106 ಸಹಾಯ ಧನ ಅಡಿಯಲ್ಲಿ ಮೀನುಗಾರಿಕೆ ಸಲಕರಣೆ ಕಿಟ್‌ ಗಳು ಜಿಲ್ಲೆಯ ಫಲಾನುಭವಿಗಳಿಗೆ ವಿತರಿಸದೆ ಮೀನುಗಾರಿಕೆ ಕಚೇರಿಯಲ್ಲಿ ಧೂಳುತಿನ್ನುತ್ತಿವೆ.

Advertisement

ಮೀನುಗಾರಿಕೆ ಸಲಕರಣೆ ಕಿಟ್ಟುಗಳ ವಿತರಣೆ 106 ಸಹಾಯ ಧನ ಅಡಿಯಲ್ಲಿ ಸಾಮಾನ್ಯ ವರ್ಗದ ಪ್ರತಿ ಫಲಾನುಭವಿಗಳಿಗೆ 10 ಸಾವಿರ ರೂ. ರಂತೆ ಒಟ್ಟು 13 ಫಲಾನುಭವಿಗಳಿಗೆ 1.30 ಲಕ್ಷ ರೂ. ಗಳ ವೆಚ್ಚದ ಕಿಟ್‌ಗಳು ವಿತರಣೆಯಾಗಿಲ್ಲ. ಇನ್ನೂ ರಾಷ್ಟ್ರೀಯ ವಿಕಾಸ ಯೋಜನೆಯಡಿ ಮೀನು ಉತ್ಪಾದನೆಯನ್ನು ಹೆಚ್ಚಿಸಲು ಮಿನುಗಾರರಿಗೆ ವಿಶೇಷ ಘಟಕ ಯೋಜನೆಯಡಿ ಪರಿಶಿಷ್ಟ ಜಾತಿಯ ಇಬ್ಬರಿಗೆ ಪ್ರತಿ 10 ಸಾವಿರ ರೂ. ಗಳಂತೆ 20 ಸಾವಿರ ರೂ. ಮೌಲ್ಯದ ಮೀನುಗಾರಿಕೆ ಸಲಕರಣೆ ಕಿಟ್ಟುಗಳು ವಿತರಣೆಯಾಗದೆ ಹಾಗೆ ಉಳಿದಿವೆ.

ಮೀನುಗಾರಿಕೆ ಸಲಕರಣೆ ಕಿಟ್ಟುಗಳ ವಿತರಣೆ 106 ಸಹಾಯ ಧನ ಅಡಿಯಲ್ಲಿ ಯಾದಗಿರಿ-10, ಶಹಾಪುರ-02, ಸುರಪುರ-01 ಸೇರಿದಂತೆ 13 ಸಾಮಾನ್ಯ ವರ್ಗದ ಫಲಾನುಭವಿಗಳನ್ನು ಆಯ್ಕೆ ಮಾಡಲಾಗಿದೆ. ರಾಷ್ಟ್ರೀಯ ವಿಕಾಸ ಯೋಜನೆಯಡಿ ಮೀನು ಉತ್ಪಾದನೆಯನ್ನು ಹೆಚ್ಚಿಸಲು ಮೀನುಗಾರರಿಗೆ ವಿಶೇಷ ಘಟಕ ಯೋಜನೆಯಡಿ ಯಾದಗಿರಿ ತಾಲೂಕಿನ ಪರಿಶಿಷ್ಟ ಜಾತಿಯ ಇಬ್ಬರು ಫಲಾನುಭವಿಗಳಿಗೆ ಆಯ್ಕೆ ಮಾಡಲಾಗಿದೆ. ಆದರೆ ಕಿಟ್‌ಗಳು ಮಾತ್ರ ವಿತರಣೆಯಾಗಿಲ್ಲ.

ಬಳ್ಳಾರಿ ವಲಯದ ಮೀನುಗಾರಿಕೆ ಉಪನಿರ್ದೇಶಕ ಕಚೇರಿ ಫೆ. 01, 2017ರಂದು ಮೀನುಗಾರಿಕೆ ಸಲಕರಣೆ ಕಿಟ್ಟುಗಳನ್ನು ವಿತರಿಸುವಂತೆ ಫಲಾನುಭವಿಗಳನ್ನು ಅನುಮೋದಿಸಲಾಗಿದೆ. ಆದರೆ ಆರು ತಿಂಗಳಾದರೂ ಇನ್ನೂ ಮೀನುಗಾರರಿಗೆ ಸಲಕರಣೆಗಳು ವಿತರಣೆಯಾಗಿಲ್ಲ. ಮಳೆಗಾಲದಲ್ಲಿ ಮೀನುಗಳನ್ನು ಹಿಡಿಯಲು ಪುಟ್ಟಿ ಹಾಗೂ ಬಲೆಗಳನ್ನು ನೀಡಲಾಗುತ್ತದೆ. ಆದರೆ ಮಳೆಗಾಲ ಮುಗಿಯುತ್ತಿದ್ದರೂ ಇನ್ನೂ ಕಿಟ್‌ಗಳನ್ನು ಅಧಿಕಾರಿಗಳು ವಿತರಿಸಿಲ್ಲ ಎಂದು ಮೀನುಗಾರರಾದ ಸಾಯಿಬಣ್ಣ, ಕಂದಪ್ಪ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮೀನುಗಾರಿಕೆ ಉಪನಿರ್ದೇಶಕರು, ಕ್ಷೇತ್ರದ ಚುನಾಯಿತ ಪ್ರತಿನಿಧಿಗಳ ಸಮ್ಮುಖದಲ್ಲಿ ಫಲಾನುಭವಿಗಳಿಗೆ ಸಲಕರಣೆಗಳನ್ನು ವಿತರಿಸಬೇಕೆಂಬ ಆದೇಶ ನೆಪವಾಗಿಟ್ಟುಕೊಂಡು ಮೀನುಗಾರಿಕೆ ಕಿಟ್‌ ಗಳನ್ನು ವಿತರಿಸದೆ ವಿಳಂಬ ಧೋರಣೆ ಅನುಸರಿಸುತ್ತಿದ್ದಾರೆ. ಮಳೆಗಾಲ ಮುಗಿದ ಮೇಲೆ ಕಿಟ್‌ ವಿತರಣೆ ಮಾಡಿದರೆ ಯಾವುದೇ ಪ್ರಯೋಜನವಾಗುವುದಿಲ್ಲ ಎಂದು ಮೀನುಗಾರರು ಆರೋಪಿಸಿದ್ದಾರೆ.

Advertisement

ಮೀನುಗಾರಿಕೆ ಇಲಾಖೆ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ನಿರ್ಲಕ್ಷದಿಂದ ಸರಿಯಾದ ಸಮಯಕ್ಕೆ ಫಲಾನುಭವಿಗಳಿಗೆ ಕಿಟ್‌ ವಿತರಿಸದೆ ಕಚೇರಿಯಲ್ಲಿ ಧೂಳು ತಿನ್ನುತ್ತಿವೆ. ಈಗಲಾದರೂ ಎಚ್ಚೆತ್ತುಕೊಂಡು ಕೂಡಲೇ ಫಲಾನುಭವಿಗಳಿಗೆ ಕಿಟ್‌ ವಿತರಿಸುವವರೇ ಕಾಯ್ದು ನೋಡಬೇಕಿದೆ.

ಹುದ್ದೆಗಳು ಖಾಲಿ: ಮೀನುಗಾರಿಕೆ ಹಿರಿಯ ಸಹಾಯಕ ನಿರ್ದೇಶಕರ ಕಚೇರಿಯಲ್ಲಿ 16 ಮಂಜೂರು ಹುದ್ದೆಗಳಲ್ಲಿ 9 ಹುದ್ದೆಗಳು ಭರ್ತಿಯಾಗಿದ್ದು, 07 ಹುದ್ದೆಗಳು ಖಾಲಿ ಇವೆ. ಅದರಲ್ಲಿ ಎ ಗ್ರೂಪ್‌ -01, ಬಿ ಗ್ರೂಪ್‌-01, ಸಿ ಗ್ರೂಪ್‌-4, ಡಿ ಗ್ರೂಪ್‌-01 ಹುದ್ದೆಗಳು ಖಾಲಿ ಇವೆ ಎಂದು ಇಲಾಖೆ ಮೂಲಗಳು ತಿಳಿಸಿವೆ.

ಇಲಾಖೆಗಳಲ್ಲಿ ಸಿಬ್ಬಂದಿಗಳ ಕೊರತೆಯಿಂದ ಯೋಜನೆಗಳು ಸರಿಯಾದ ಸಮಯಕ್ಕೆ ಅನುಷ್ಠಾನ ಗೊಳಿಸುವಲ್ಲಿ ಸಮಸ್ಯೆ ಆಗುತ್ತಿದೆ. ಸಿಬ್ಬಂದಿಗಳ ಮೇಲೆ ಕೆಲಸದ ಒತ್ತಡ ಹೆಚ್ಚಾಗಿದ್ದು, ಆದಷ್ಟು ಬೇಗ ರಾಜ್ಯ ಸರಕಾರ ಸಿಬ್ಬಂದಿಗಳ ನೇಮಕಕ್ಕೆ ಅಗತ್ಯ ಕ್ರಮ ಕೈಗೊಳ್ಳಬೇಕಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next